ಆರೋಗ್ಯ

ಉಡುಪಿ ಜಿಲ್ಲೆಗೆ 54 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಾಗ್ರಿ ನೀಡಿದ ಇನ್ಫೋಸಿಸ್ ಸುಧಾಮೂರ್ತಿ

Pinterest LinkedIn Tumblr

ಉಡುಪಿ: ಮಾರಕ ಕೋವಿಡ್ 19 ವೈರಸ್ ನಿಯಂತ್ರಿಸುವಲ್ಲಿ ಜಿಲ್ಲೆಗೆ ನೆರವಾಗುವ ಉದ್ದೇಶದಿಂದ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಅಗತ್ಯ ವೈದ್ಯಕೀಯ ಸಾಮಾಗ್ರಿ ಸಹಿತ ಸುಮಾರು 54 ಲಕ್ಷ ರೂಪಾಯಿ ಮೌಲ್ಯದ ಸಾಮಾಗ್ರಿಗಳ ನೆರವನ್ನು ನೀಡಿದ್ದಾರೆ.

ಕೋವಿಡ್ 19 ಸೋಂಕು ನಿಗ್ರಹ ಹಾಗೂ ಪರೀಕ್ಷೆಗೆ ಅನುಕೂಲವಾಗುವಂತೆ 54 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಉಡುಪಿ ಜಿಲ್ಲೆಗೆ ಸುಧಾ ಮೂರ್ತಿಯವರು ದೇಣಿಗೆಯಾಗಿ ನೀಡಿದ್ದಾರೆ. ಜಿಲ್ಲಾಡಳಿತದ ಕರೆಗೆ ಸುಧಾ ಮೂರ್ತಿ ಸ್ಪಂದಿಸಿದ್ದು, 24 ಗಂಟೆಗಳಲ್ಲಿ 54 ಲಕ್ಷ ರೂಪಾಯಿ ಮೌಲ್ಯದ ಅತ್ಯಗತ್ಯ ವೈದ್ಯಕೀಯ ಸಾಮಾಗ್ರಿಗಳು ಜಿಲ್ಲೆಗೆ ನೀಡಿದ್ದಾರೆ.

ವೈದ್ಯಕೀಯ ಸಾಮಾಗ್ರಿಗಳಲ್ಲಿ 4000 ಎನ್ 95 ಮಾಸ್ಕ್, 4000 ಸ್ಯಾನಿಟೈಸರ್, 25000 ಟ್ರಿಪ್ಪಲ್ ಲೇಯರ್ ಮಾಸ್ಕ್, 10000 ಸರ್ಜಿಕಲ್ ಗ್ಲೌಸ್, 1500 ಪಿಪಿಇ ಕಿಟ್ ಗಳನ್ನು ನೀಡಿರುತ್ತಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ

Comments are closed.