ಉಡುಪಿ: ಬೈಂದೂರು ತಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ಸೂಲೆಟರ್ (ಮೀನು ಸಾಗಾಟ ಲಾರಿ) ಪಲ್ಟಿಯಾಗಿ ಚಾಲಕ ಯುವಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಕುಂದಾಪುರ ಮೂಲದ ಇರ್ಫಾನ್ (26) ಎನ್ನುವಾತ ಗಂಭೀರ ಗಾಯಗೊಂಡು ಸಾವನ್ನಪ್ಪಿದ ದುರ್ದೈವಿ.

ಉಡುಪಿ ಕಡೆಯಿಂದ ಗೋವಾದತ್ತ ಸಾಗುತ್ತಿದ್ದ ಮೀನು ಸಾಗಾಟದ ಲಾರಿ ಇದಾಗಿದ್ದು ಶಿರೂರು ಒತ್ತಿನೆಣೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಪಲ್ಟಿಯಾಗಿದೆ. ಲಾರಿಯಡಿ ಸಿಲುಕಿದ ಇರ್ಫಾನ್ ಅವರನ್ನು ಹೊರತೆಗೆದು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಲಾಯಿತಾದರೂ ಕೂಡ ಮಾರ್ಗಮಧ್ಯೆ ಅವರು ಸಾವನ್ನಪ್ಪಿದ್ದಾರೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.