ಆರೋಗ್ಯ

ದುಬೈ ಮತ್ತು ತ್ರಿವೇಂಡ್ರಮ್’ನಿಂದ ಉಡುಪಿಗೆ ಬಂದ ಇಬ್ಬರಿಗೆ ಕೊರೋನ ಸೋಂಕು- ಮಣಿಪಾಲ ಕೆ.ಎಂ.ಸಿ.ಗೆ ದಾಖಲು

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇಂದು ಇಬ್ಬರ ಕೊರೋನಾ ಪರೀಕ್ಷಾ ವರದಿ ಬಂದಿದ್ದು ಅದು ಪಾಸಿಟಿವ್ ಆಗಿದೆ ಎಂದು ಉಡುಪಿ‌ ಡಿ.ಎಚ್.ಓ ಮಾಹಿತಿ ನೀಡಿದ್ದಾರೆ.

ಮಾರ್ಚ್ 17 ರಂದು ದುಬೈ ನಿಂದ ಆಗಮಿಸಿದ ಉಡುಪಿಯ 35 ವರ್ಷದ ವ್ಯಕ್ತಿ ಕರೋನ ಲಕ್ಷಣ ಹಿನ್ನಲೆಯಲ್ಲಿ 27 ರಂದು ಕಾರ್ಕಳದ ಆಸ್ಪತ್ರೆಗೆ ದಾಖಲಾಗಿದ್ದು, ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು ಇಂದು ವರದಿ ಬಂದಿದ್ದು ಪಾಸಿಟಿವ್ ಆಗಿದೆ.

ಕೆಲಸದ ಪ್ರಯುಕ್ತ ತ್ರಿವೇಂಡ್ರಮ್ ಗೆ ತೆರಳಿದ್ದ ಉಡುಪಿಯ 29 ವರ್ಷದ ವ್ಯಕ್ತಿ , ಕರೋನ ಲಕ್ಷಣ ಕಾರಣ ಮಾರ್ಚ್ 26 ರಂದು ಆಸ್ಪತ್ರೆಗೆ ದಾಖಲಾಗಿದ್ದು , ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಇಂದು ವರದಿ ಪಾಸಿಟಿವ್ ಬಂದಿದೆ.

ಸದ್ಯ ಇಬ್ಬರು ರೋಗಿಗಳನ್ನು ಮಣಿಪಾಲ KMC ಗೆ ದಾಖಲು ಮಾಡಲಾಗಿದೆ ಎಂದು ಉಡುಪಿ ಡಿ.ಎಚ್.ಒ ತಿಳಿಸಿದ್ದಾರೆ.

Comments are closed.