ಕರಾವಳಿ

ಮುಂಡ ಪಳ್ಳ ಶ್ರೀ ರಾಜರಾಜೇಶ್ವರಿ ದೇವಳ ನಿರ್ಮಾತೃ ಕೆ.ಕೆ. ಶೆಟ್ಟಿ ಅವರಿಗೆ ಸನ್ಮಾನ

Pinterest LinkedIn Tumblr

ಮಂಗಳೂರು: ಇಚ್ಲಂಪಾಡಿ ದರ್ಬಾರ್ ಕಟ್ಟೆಯ ಮುಂಡಪಳ್ಳದಲ್ಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವನ್ನು ನಿರ್ಮಿಸಿ ಊರವರಿಗೆ ಹಸ್ತಾಂತರಿಸಿದ ಅಹ್ಮದ್ ನಗರದ ಉದ್ಯಮಿ ಕುತ್ತಿಕ್ಕಾರ್ ಕಿಂಞಣ್ಣ ಶೆಟ್ಟಿ ( ಕೆ.ಕೆ.ಶೆಟ್ಟಿ ) ಅವರನ್ನು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಅಹ್ಮದ ನಗರ ಸಾಯಿದೀಪ್ ಆಸ್ಪತ್ರೆಯ ಚೇರ್ಮನ್ ಡಾ.ಎಸ್.ಎನ್. ದೀಪಕ್ ವಹಿಸಿದ್ದರು.

ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕರ್ನಾಟಕದ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಕೆ.ಕೆ. ಶೆಟ್ಟಿ ಮತ್ತು ವಿನಯ ದಂಪತಿಯನ್ನು ಊರವರ ಪರವಾಗಿ ಸನ್ಮಾನಿಸಿದರು. ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್‌ ನ ‘ಸದಾಶಯ’ ತ್ರೈಮಾಸಿಕದ ಸಂಪಾದಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸನ್ಮಾನಿತರನ್ನು ಪರಿಚಯಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಕೆ.ಕೆ. ಶೆಟ್ಟಿಯವರ ಪುತ್ರರಾದ ಅನುಷ್ ಮತ್ತು ಯಶ್ ಉಪಸ್ಥಿತರಿದ್ದರು.

ದಾನ ಮಾರ್ತಾಂಡವರ್ಮ ರಾಮಂತರಸುಗಳು ಮಾಯಿಪ್ಪಾಡಿ ಅರಮನೆ, ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ, ಕಟೀಲು ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಸನತ್ ಕುಮಾರ್ ಶೆಟ್ಟಿ, ಪೊಳಲಿ ದೇವಳದ ಟ್ರಸ್ಟಿ ಯು.ಟಿ. ಆಳ್ವ, ಕಾಸರಗೋಡು ವಿಭಾಗದ ದೇವಸ್ವಂ ಬೋರ್ಡ್ ಅಧ್ಯಕ್ಷ ಸಿ.ಕೆ. ನಾರಾಯಣ ಪಣಿಕ್ಕರ್, ಡಾ. ಸತ್ಯಪ್ರಕಾಶ್ ಶೆಟ್ಟಿ ಮುಂಬೈ,ಎ. ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ಶೆಡ್ಡೆ ಮಂಜುನಾಥ ಭಂಡಾರಿ, ಜಯದೇವ ಖಂಡಿಗೆ, ರವಿ ರೈ ಕಳಸ, ಸುಭಾಷ್ ಅಡ್ಯಂತಾಯ ಮುಖ್ಯ ಅತಿಥಿಗಳಾಗಿದ್ದರು.

ಕಾರಿಂಜ ಹಳೆಮನೆ ಹೆಚ್. ಶಿವರಾಮ ಭಟ್ಟ ಸ್ವಾಗತಿಸಿದರು. ನ್ಯಾಯವಾದಿ ಐ.ಸುಬ್ಬಯ್ಯ ರೈ ಪ್ರಸ್ತಾವನೆಗೈದರು. ಮಂಜುನಾಥ ಆಳ್ವ ಮಡ್ವ ಧನ್ಯವಾದವಿತ್ತರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಸಿದ್ದ ಕಲಾವಿದರಿಂದ ‘ವಾಲಿಮೋಕ್ಷ’ ಯಕ್ಷಗಾನ ತಾಳಮದ್ದಳೆ ಜರಗಿತು.

Comments are closed.