ಉಡುಪಿ: ಕೊರೊನಾ ವೈರಸ್ ತನ್ನ ಕರಾಳ ಹಸ್ತ ಚಾಚುತ್ತಲ್ಲೇ ಇದ್ದು ಇದೀಗ ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದೆ.

34 ವರ್ಷದ ವ್ಯಕ್ತಿ ಮಾರ್ಚ್ 18 ರಂದು ದುಬೈನಿಂದ ಉಡುಪಿಗೆ ಬಂದಿದ್ದು ಜ್ವರದ ಕಾರಣ ಮಾರ್ಚ್ 23 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.
ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿಯಲ್ಲಿ ಕೊರೊನಾ ಇರುವುದು ತಿಳಿದು ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
Comments are closed.