ಆರೋಗ್ಯ

ಬಾಯಿ, ಮೂಗು ಮತ್ತಿತರ ಭಾಗಗಳಿಂದ ರಕ್ತ ಸುರಿಯುವುದರ ನಿವಾರಣೆಗೆ ಈ ಹೂವು ಸಹಕಾರಿ.

Pinterest LinkedIn Tumblr

ಆಯುರ್ವೇದವು ನಿನ್ನೆ ಮೊನ್ನೆ ಪದ್ದತಿ ಅಲ್ಲ ನಮ್ಮ ಪೂರ್ವಜರು ನಡೆಸುತ್ತಿದ್ದ ಒಂದು ವೈದ್ಯಕೀಯ ಪದ್ದತಿ ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಒಂದೊಂದು ಸಸ್ಯದಲ್ಲಿ ಕೂಡ ಒಂದೊಂದು ವೈದ್ಯಕೀಯ ಗುಣಗಳನ್ನು ಹೊಂದಿಕೊಂಡಿಡೆ ಆ ಸಸ್ಯಗಳ ಉಪಯೋಗವನ್ನು ನಿಮಗೆ ತಿಳಿಸುವ ಪ್ರಯತ್ನ ನನ್ನದು. ಆಯುರ್ವೇದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ ನಮ್ಮ ಋಷಿ ಮುನಿಗಳು ಕಂಡು ಹಿಡಿದಿದ್ದ ಮದ್ದುಗಳು ಕ್ಯಾನ್ಸರ್, ಎಡ್ಸ್ ನಂತಹ ಮದ್ದು ಇಲ್ಲವೇ ಇಲ್ಲ ಎನ್ನುವ ಖಾಯಿಲೆಗಳು ಸಂಪೂರ್ಣವಾಗಿ ಗುಣ ಮಾಡುವ ಶಕ್ತಿ ಅದಕ್ಕೆ ಇತ್ತು. ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಆದ್ಯತೆ ನೀಡಿ ನಮ್ಮತನ ನಾವೇ ಮರೆತು ಹೋಗಿದ್ದೇವೆ. ನಾನು ನಿಮಗೆ ಇಂದು ಒಂದು ವಿಶೇಷ ಹೂವಿನ ಬಗ್ಗೆ ತಿಳಿಸುತ್ತೇನೆ, ಇದ್ರಲ್ಲಿ ಇರುವ ಗುಣಗಳು ತಿಳಿಯಿರಿ.

ನಂದಿ ಬಟ್ಟಲು ಇದಕ್ಕೆ ವೈಜ್ಞಾನಿಕ ಹೆಸರು ಟ್ರ್ಯಾಬ್ರಾಣಿಯ ಮೊನೊಟಾನ ಕೊರೊನೋರಿಯ ಈ ಸಸ್ಯವು ಆಪೋಷಿಯಣಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿರುತ್ತದೆ ಇದಕ್ಕೆ ಕನ್ನಡದಲ್ಲಿ ನಂದಿಬಟ್ಟಲು ಎಂದು ಕರೆಯುತ್ತಾರೆ, ಮನೆಗಳ ಮುಂದೆ ಉದ್ಯಾನವನಗಳ ಮುಂದೆ ಮತ್ತು ಹುದೋಟಗಳಲ್ಲಿ ಅಲಂಕಾರಕವಾಗಿ ಬೆಳೆಸುತ್ತಾರೆ ಬಿಳಿ ಹೂವುಗಳು ಅರಳಿದಾಗ ನೋಡಲು ಚಂದ ಹೂವಿನ ಪರಿಮಳ ಮನಮೋಹಕವಾಗಿರುತ್ತದೆ. ಎಲೆಗಳು ಹಸಿರು ಮತ್ತು ಮಾವಿನ ಎಲೆಗಳನ್ನು ಹೋಲುತ್ತವೆ ನರಗಳು ಬಹಳ ಸ್ಪಷ್ಟ ಕಾಣುತ್ತವೆ ಎಲೆ ಮುರಿದರೆ ಬಿಳಿ ಬಣ್ಣದ ಹಾಲು ಬರುತ್ತದೆ. ಕವಲುಗಳು ನುಣುಪಾಗಿ ಇರುತ್ತವೆ. ಜುಲೈ ಮತ್ತು ಆಕ್ಟೊಬರ್ ತಿಂಗಳಲ್ಲಿ ಗಿಡದ ತುಂಬಾ ಮೊಗ್ಗು ಮತ್ತು ಹೂವುಗಳು ಬಿಡುತ್ತವೆ

ಇದರ ಪ್ರಮುಖ ಉಪಯೋಗಗಳು ಏನೆಂದರೆ, ಮೂಗು ಬಾಯಿ ಮತ್ತಿತರ ಭಾಗಗಳಿಂದ ರಕ್ತ ಸುರಿಯುವುದರ ನಿವಾರಣೆಗೆ 2 ಟೀ ಚಮಚ ಸ್ವಚ್ಛ ಮಾಡಿದ ಜೀರಿಗೆ ಮತ್ತು 2 ಟೀ ಚಮಚ ಸಕ್ಕರೆ 2 ನಂದಿಬಟ್ಟಲು ಹೂವುಗಳು ಮತ್ತು 2 ಟೀ ಚಮಚ ಆಕಲುಹಾಳು ಸೇರಿಸಿ ನುಣ್ಣಗೆ ಅರಿಯಬೇಕು ಈ ಕಲ್ಕವನ್ನು ತೆಳು ಬಟ್ಟೆಯಲ್ಲಿ ಶೋಧಿಸಿ ವೇಳೆಗೆ ಒಂದೇ ಟೀ ಚಮಚ ಸೇವಿಸುವುದು ಹೀಗೆ ಪ್ರತಿನಿತ್ಯ 2 ವೇಳೆ 7 ದಿನಗಳ ಕಾಲ ಕೊಡಬೇಕು ಕಣ್ಣಿನ ಪೊರೆ ಮತ್ತು ಕಣ್ಣಿನ ಸಮಸ್ತ ವ್ಯಾದಿ ನಿವಾರಣೆಗೆ 20 ಗ್ರಾಮ್ ತಾಜಾ ಹೂವುಗಳು ಮತ್ತು 20 ಗ್ರಾಮ್ ಹಸುವಿನ ಬೆಣ್ಣೆ ಮತ್ತು 2 ಚಿಟಿಕೆ ಅಚ್ಚ ಕರ್ಪುರವನ್ನು ಸೇರಿಸಿ ನುಣ್ಣಗೆ ಅರೆದು ಬರಣಿಯಲ್ಲಿ ಶೇಖರಿಸುವುದು, ಅಮೇಲೆ ಪ್ರತಿನಿತ್ಯ 4 ರಿಂದ 5 ಸಾರಿ ಕಣ್ಣುಗಳಿಗೆ ನಂಜನ ಬಿಡಬೇಕು.

ಸರ್ಪದ ವಿಷದ ಶಮನಕ್ಕೆ ಹಾವು ಕಚ್ಚಿ ವಿಷವೇರಿ ಪ್ರಜ್ಞೆ ತಪ್ಪಿದರೆ ನಂದಿಬಟ್ಟಲು ಗಿಡದ ಬೇರನ್ನು ತಂದು ಚನ್ನಾಗಿ ತೊಳೆದು ನೀರಿನಲ್ಲಿ ತೇಯ್ದು ಮೂಗಿನ 2 ಹೋಳೆಗಳಿಗೆ ತೊಟ್ಟು ತೊಟ್ಟಗಿ ಬಿಡುವುದು ಮತ್ತು ಇದೆ ಗಂದವನ್ನು ಸ್ವಲ್ಪ ಸ್ವಲ್ಪಾಗಿ ನೆಕ್ಕಿಸುವುದು ಹಲ್ಲು ನೋವು ನಿವಾರಣೆಗೆ ನಂದಿಬಟ್ಟಲು ಗಿಡದ ಬಲಿತ ಬೇರನ್ನು ತಂದು ಜಜ್ಜಿ ಬಾಯಿಯಲ್ಲಿ ಹಾಕಿಕೊಂಡು ಚಪ್ಪರಿಸುವುದು ಬಾಯಿಯಲ್ಲಿ ಬರುವ ನೀರನ್ನು ಉಗುಳುವುದು.

Comments are closed.