ಆರೋಗ್ಯ

ನಿತ್ಯ ತಿನ್ನುವ ಆಹಾರದಲ್ಲಿ ಇವುಗಳನ್ನು ಬಳಸಿದರೆ ಆರೋಗ್ಯಕ್ಕೆ ಉತ್ತಮ.

Pinterest LinkedIn Tumblr

ಪ್ರಸ್ತುತ ದಿನಮಾನಗಳಲ್ಲಿ ಪ್ರೋಟೀನ್ ಕೊರತೆಯಿಂದ ಹಲವಾರು ಸಮಸ್ಯೆಗಳು ಕಾಡುತ್ತಿವೆ. ಇದರ ಕೊರತೆಯಿಂದ ಪಾರಾಗಲು ಪ್ರೋಟೀನ್ ಯುಕ್ತ ಆಹಾರ ಸೇವನೆ ಅವಶ್ಯಕ. ಸಸ್ಯಾಹಾರಿಗಳು ಪ್ರೋಟೀನ್ ಕೊರತೆ ನೀಗಿಸಲು ಮೊಳಕೆ ಕಾಳುಗಳು ಸೇವಿಸಬೇಕು.

ಮೊಳಕೆ ಕಾಳು:
ಮೊಳಕೆ ಕಾಳುಗಳನ್ನು ಬೇಯಿಸಿ ಸೇವಿಸುವುದರಿಂದ ದೇಹಕ್ಕೆ ಪೋಷಕಾಂಶ, ನರಗಳ ಕ್ರಿಯೆ ಚುರುಕು, ಚರ್ಮದ ಆರೋಗ್ಯ, ರೋಗ ನಿರೋಧಕ ಶಕ್ತಿ ವೃದ್ಧಿ, ಕಣ್ಣಿನ ಆರೋಗ್ಯಕ್ಕೆ ಉತ್ತಮ, ಅಧಿಕ ರಕ್ತದೊತ್ತಡ ಹತೋಟಿಗೆ ತರುತ್ತವೆ. ಮಕ್ಕಳಿಗೂ ಈ ಕಾಳು ನೀಡುವುದು ಒಳ್ಳೆಯದು.

ಸೌತೆಕಾಯಿ:
ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು. ಸೌತೆಕಾಯಿ ತಿರುಳಿನಿಂದ ಅಂಗಾಲು ಉಜ್ಜಿಕೊಂಡರೆ ಕಣ್ಣುಗಳ ಉರಿ ಶಾಂತವಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಮುಖ ಕಾಂತಿಯುಕ್ತವಾಗುವುದು.

ಮೆಂತ್ಯೆ ಸೊಪ್ಪು,ಕಾಳು:
ಮೆಂತ್ಯೆಯು ಉತ್ತಮ ಜೀರ್ಣಕಾರಕವಾಗಿದೆ. ಮೊಳಕೆ ಬಂದಿರುವ ಈ ಕಾಳುಗಳು ಕೆಮ್ಮು, ದಮ್ಮುಗಳಿಗೆ ಮದ್ದಾಗಿಯೂ ಬಳಸಲಾಗುತ್ತದೆ. ಹಾಲುಣಿಸುವ ತಾಯಂದಿರಿಗೂ ಅತ್ಯುತ್ತಮ ಆಹಾರ. ಅದರಲ್ಲೂ ಮಧುಮೇಹಿಗಳಿಗೂ ಇದು ಉತ್ತಮ ಔಷಧ. ಒಂದು ಲೋಟ ನೀರಿಗೆ ಒಂದು ಚಮಚ ಮೆಂತ್ಯೆ ಕಾಳಿನ ಪುಡಿಯನ್ನು ಬೆರೆಸಿ ಪ್ರತೀ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ.

ಮೆಂತೆ ಸೊಪ್ಪು ಆಯುರ್ವೇದದಲ್ಲಿ ಮಹತ್ತರವಾದ ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೆ ವಿವಿಧ ಆಹಾರ ಪದಾರ್ಥಗಳ ತಯಾರಿಯಲ್ಲಿ ಇದನ್ನು ವಿಶೇಷವಾಗಿ ಬಳಸುತ್ತಾರೆ. ಈ ಸಸ್ಯದ ಬೀಜವನ್ನು ಸುವಾಸನೆಗಾಗಿ ಹಾಗೂ ಎಲೆಗಳನ್ನು ವಿಶೇಷ ಪೋಷಣೆಗಳಿಗೆ ಉಪಯೋಗಿಸುತ್ತಾರೆ.

ಪೌಷ್ಟಿಕಾಂಶದ ಆಗರವಾದ ಮೆಂತೆಯ ಉಪಯೋಗಗಳು ಹಲವಾರು. ಹೊಟ್ಟೆ ನೋವು, ಪಿತ್ತ, ಅಜೀರ್ಣ, ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆಯಿಂದ ಮನೆ ಔಷಧಿ ತಯಾರಿಸಬಹುದು. ವಿಟಮಿನ್ ಕೆ, ಇನ್ಸುಲಿನ್ ನಿಯಂತ್ರಕ, ಪ್ರೋಟೀನ್, ಇರುವ ಮೆಂತ್ಯೆಯನ್ನು ನಿತ್ಯ ಬಳಸಿದರೆ ಆರೋಗ್ಯಕ್ಕೆ ಉತ್ತಮ.!

Comments are closed.