ಹೆಣ್ಣು ಮಕ್ಕಳು ಸಾಮಾನ್ಯವಾಗಿ ತಲೆ ಸ್ನಾನ ಮಾಡಿ ಪೂಜೆ ಮಾಡಿದರೆ ಅದು ಮಡಿ ಶ್ರೇಷ್ಠವಾದುದು ಎಂದು ಹೇಳುತ್ತಾರೆ ಮೊದಲಿನಿಂದಲೂ ಕೂಡ ಹೆಣ್ಣು ಮಕ್ಕಳು ವಿಶೇಷ ದಿನ ಪೂಜೆ ಮಾಡುವಾಗ ಅಥವಾ ಹಬ್ಬ ಹರಿದಿನಗಳಲ್ಲಿ ತಾನೇ ಸ್ನಾನ ಮಾಡಿ ಪೂಜೆ ಮಾಡುವುದು ಒಳ್ಳೆಯದು ಎಂದು ಹೇಳುತ್ತಾರೆ ಆದರೆ ಕೆಲವರು ಕೆಲವೊಂದು ದಿನ ತಲೆ ಸ್ನಾನ ಮಾಡಬಾರದು ಎಂದು ಕೂಡ ಹೇಳುತ್ತಾರೆ ಬನ್ನಿ ಸ್ನೇಹಿತರೆ ಹಾಗಾದರೆ ಯಾವ ಯಾವ ದಿನ ತಲೆ ಸ್ನಾನ ಮಾಡಬಾರದು ಒಂದು ವೇಳೆ ಆ ದಿನ ತಲೆ ಸ್ನಾನ ಮಾಡಿದರೆ ಏನೆಲ್ಲ ತೊಂದರೆಗಳು ಅಥವಾ ಅಪಾಯಗಳು ಆಗುತ್ತವೆ ಎನ್ನುವುದನ್ನು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ.
ಸಾಕಷ್ಟು ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ಮಂಗಳವಾರ ಮದುವೆ ಆಗಿರುವ ಒಂದು ಹೆಂಗಸು ಮಂಗಳವಾರದ ದಿನ ತಲೆ ಸ್ನಾನ ಮಾಡಬಾರದು ಎಂದು ಹೇಳಲಾಗುತ್ತದೆ ಆದರೆ ಅದೇ ಮಂಗಳವಾರ ಇನ್ನು ಮದುವೆ ಆಗದೆ ಇರುವ ಹೆಣ್ಣು ಮಗಳು ಅಥವಾ ಗಂಡು ಮಕ್ಕಳು ಅವರು ಬೇಕಾದರೆ ತಲೆ ಸ್ನಾನ ಮಾಡಬಹುದು ಆದರೆ ಮದುವೆ ಆದಂತವರು ಗಂಡು ಮಕ್ಕಳಾಗಲಿ ಅಥವಾ ಹೆಣ್ಣು ಮಕ್ಕಳಾಗಲಿ ಈ ದಿನ ತಲೆ ಸ್ನಾನ ಮಾಡಬಾರದು ಎಂದು ಹೇಳುತ್ತಾರೆ.
ಇನ್ನು ಎರಡನೆಯದು ಗುರುವಾರ ಗುರುವಾರ ಕೂಡ ಒಂದು ಬೃಹಸ್ಪತಿ ಕಥೆ ಬರುತ್ತದೆ ಅದರಲ್ಲಿ ಒಂದು ಸನ್ನಿವೇಶದಲ್ಲಿ ಒಂದು ಹೆಣ್ಣು ಮಗಳು ಗುರುವಾರದ ದಿನ ಯಾವಾಗಲೂ ತಲೆ ಸ್ನಾನ ಮಾಡುತ್ತಿರುತ್ತಾಳೆ. ಹಾಗೆ ತನ್ನ ಎಲ್ಲ ಸಂಪತ್ತನ್ನು ಕಳೆದುಕೊಳ್ಳುತ್ತಾಳೆ ಹಾಗಾಗಿ ಶಾಸ್ತ್ರಗಳ ಪ್ರಕಾರ ವಿಶೇಷವಾಗಿ ಹೆಣ್ಣು ಮಕ್ಕಳು ಗುರುವಾರ ದಿನ ತಲೆಸ್ನಾನ ಮಾಡಬಾರದು ಎಂದು ಹೇಳಲಾಗುತ್ತದೆ ಆದರೆ ಸ್ನೇಹಿತರೆ ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಗಂಡು ಮಕ್ಕಳು ಮಂಗಳವಾರ ದಿನ ಮಾತ್ರ ತಲೆ ಸ್ನಾನ ಮಾಡಬಾರದು ಬೇರೆ ಯಾವುದೇ ದಿನ ಗಂಡು ಮಕ್ಕಳು ತಲೆ ಸ್ನಾನ ಮಾಡಿದರೆ ಯಾವುದೇ ತೊಂದರೆ ಆಗುವುದಿಲ್ಲ
ಮೂರನೇ ದಿನ ಅಂದರೆ ಅದು ಶನಿವಾರ ಈ ಶನಿವಾರದ ದಿನ ಕೂಡ ಮದುವೆ ಆಗಿರುವ ಹೆಣ್ಣು ಮಕ್ಕಳು ತಲೆಸ್ನಾನ ಮಾಡಬಾರದು ಏಕೆಂದರೆ ಹೀಗೆ ಶನಿವಾರ ಮದುವೆ ಆದ ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಿದರೆ ಅವರ ಗಂಡಂದಿರಿಗೆ ತೊಂದರೆ ಆಗುತ್ತದೆ ಎಂದು ಹೇಳಲಾಗುತ್ತದೆ ಹಾಗೇನೇ ಏನೇ ಒಂದು ಕೆಲಸ ಕಾರ್ಯಗಳನ್ನು ಮಾಡಬೇಕಾದರು ಕೂಡ ಕಾರ್ಯ ಕ್ಷೇತ್ರಗಳಲ್ಲಿ ತೊಂದರೆ ಆಗುತ್ತದೆ ಜೊತೆಗೆ ಶತ್ರುಗಳು ಕೂಡ ಹುಟ್ಟಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ ಆದರೆ ಅವಿವಾಹಿತ ಹೆಣ್ಣು ಮಕ್ಕಳು ಈ ದಿನ ಸ್ನಾನ ಮಾಡಬಹುದು ಹಾಗೇನೇ ಅಮವಾಷ್ಯ ದಿನ ಕೂಡ ತಲೆಸ್ನಾನ ಮಾಡಬಾರದು ಎಂದು ಹೇಳಲಾಗುತ್ತದೆ ಆದ್ದರಿಂದ ಇಂತಹ ದಿನಗಳಲ್ಲಿ ನೀವು ತಲೆಸ್ನಾನ ಮಾಡದಿದ್ದರೆನೆ ಒಳ್ಳೆಯದು ಅಂತ ಹೇಳಲಾಗುತ್ತದೆ.

Comments are closed.