ಆರೋಗ್ಯ

ಕೊರೋನಾ ಭೀತಿ: ವಿದ್ಯಾರ್ಥಿಗಳು, ಪೋಷಕರೆ ಗಮನಿಸಿ- ರಜೆ, ಪರೀಕ್ಷೆ ವಿವರ ಹೀಗಿದೆ…

Pinterest LinkedIn Tumblr

ಬೆಂಗಳೂರು: ಕೊರೊನಾ ಭೀತಿ ಹಾಗೂ ವೈರಸ್ ಹರಡುವಿಕೆಯನ್ನು ತಡೆಯುವ ಮುಂಜಾಗೂರಕ ಕ್ರಮವಾಗಿ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ಸೂಕ್ತ ರೀತಿಯಾಗಿ ರಜೆ ಹಾಗೂ ಪರೀಕ್ಷೆ ನಡೆಸುವಂತೆ ಸರಕಾರ ಆದೇಶಿಸಿದ್ದು ಈ ಸಂಬಂದಪಟ್ಟ ಇಲಾಖೆ ಆದೇಶ ಹೊರಡಿಸಿದೆ.

(ಸಾಂದರ್ಭಿಕ ಚಿತ್ರ)

1 ರಿಂದ 6 ನೇ ತರಗತಿ ವಿದ್ಯಾರ್ಥಿಗಳಿಗೆ ಮಾಚ್೯ 14 ರಿಂದ(ನಾಳೆಯಿಂದಲೇ) ರಜೆ ಸಾರಲಾಗಿದೆ. 7 ರಿಂದ 9 ನೇ ತರಗತಿ – ನಿಗದಿಯಂತೆ ಶೀಘ್ರವೇ ಅಂದರೆ ಮಾಚ್೯ 23 ರೊಳಗೆ ಪರೀಕ್ಷೆ ಮುಗಿಸಿ, ಬಳಿಕ ರಜೆ ಘೋಷಿಸಲು ಆದೇಶಿಸಲಾಗಿದೆ. ಎಸ್ಸೆಲ್ಸಿ SSLC ಪರೀಕ್ಷೆಯನ್ನು ಈಗಾಗಲೇ ನಿಗದಿಯಾಗಿರುವಂತೆ ಮಾಚ್೯ 27 ರಿಂದ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಪ್ರಥಮ ಪಿಯುಸಿ (1 st PUC) ವಾರ್ಷಿಕ ಪರೀಕ್ಷೆ ಈಗಾಗಲೇ ಫೆಬ್ರವರಿಯಲ್ಲಿ ಮುಕ್ತಾಯಗೊಂಡು, ರಜೆ ನೀಡಲಾಗಿದೆ. ದ್ವಿತೀಯ ಪಿಯುಸಿ (2nd PUC)- ಪಬ್ಲಿಕ್ ಪರೀಕ್ಷೆ ಈಗಾಗಲೇ ಆರಂಭವಾಗಿದ್ದು, ನಿಗದಿಯಂತೆ ನಡೆಯಲಿವೆ.

ಇನ್ನು ಡಿಗ್ರಿ ಅಥವಾ ಪದವಿ ಕಾಲೇಜು, ಪಾಲಿಟೆಕ್ನಿಕ್, ಯುನಿವರ್ಸಿಟಿ( Degree Colleges/Polytechnic/University) ಗಳಿಗೆ ಮಾಚ್೯ 28ರವರೆಗೆ ರಜೆ ಸಾರಲಾಗಿದೆ.

Comments are closed.