ಉಡುಪಿ: ಸಾಗರ ತಾಲೂಕಿನ ಆನಂದಪುರ ಮಹಿಳೆಗೆ ಕೊರೊನಾ ವೈರಸ್ ಶಂಕೆ ಭೀತಿಯಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಸದ್ಯ ಆರೋಗ್ಯ ತಪಾಸಣೆಯ ವರದಿ ಬಂದ್ದಿದೆ. ಕೊರೋನಾ ನೆಗೆಟಿವ್ ಎಂದು ವೈದ್ಯಕೀಯ ವರದಿಯಲ್ಲಿ ತಿಳಿದಿದೆ.

ಮಹಿಳೆ ಫೆಬ್ರವರಿ ಕೊನೆಯ ತಿಂಗಳಿನಲ್ಲಿ ಮೆಕ್ಕಾ ಮದೀನಾ ಪ್ರವಾಸ ಮಾಡಿದ್ದರು. ಮಹಿಳೆಗೆ ಪ್ರವಾಸ ವೇಳೆಯೇ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಸೌದಿ ಅರೇಬಿಯಾದಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆದಿದ್ದರು.
ಬಳಿಕವೂ ಜ್ವರ, ಶೀತ, ಕಫ, ಉಸಿರಾಟ ಸಮಸ್ಯೆ ಇದ್ದ ಕಾರಣ ಮಹಿಳೆಯನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಕೊರೊನಾ ವೈರಸ್ ಭೀತಿಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಕೊರೊನಾ ವೈರಸ್ ಲಕ್ಷಣಗಳು ಇದ್ದ ಕಾರಣ ವೈದ್ಯರು ಪರೀಕ್ಷೆ ನಡೆಸಿದರು. ಗಂಟಲಿನ ದ್ರವ ಪರೀಕ್ಷೆ ಹಾಗೂ ರಕ್ತ ಪರೀಕ್ಷೆ ಮಾದರಿಯನ್ನು ಬೆಂಗಳೂರಿಗೆ ಕಳಿಸಲಾಗಿದ್ದು ಸದ್ಯ ಕೊರೊನಾ ವೈರಸ್ ನೆಗೆಟಿವ್ ಎನ್ನುವುದು ತಿಳಿದುಬಂದಿದೆ.
Comments are closed.