ಗಲ್ಫ್

ನಾಳೆ ದುಬೈನಲ್ಲಿ ‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ತುಳು ಸಿನಿಮಾದ ವರ್ಲ್ಡ್ ಪ್ರೀಮಿಯರ್ ಶೋ; ಸಿನೆಮಾ ನೋಡುವ ಕಾತುರದಲ್ಲಿ ತುಳು ಸಿನಿರಸಿಕರು

Pinterest LinkedIn Tumblr

ದುಬೈ: ACME (ಅಕ್ಮೆ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ದುಬೈಯ ಖ್ಯಾತ ಉದ್ಯಮಿ, ಕನ್ನಡ ಚಲನಚಿತ್ರದ ನಿರ್ಮಾಪ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ತುಳು ಸಿನಿಮಾದ ‘ವರ್ಲ್ಡ್ ಪ್ರೀಮಿಯರ್ ಶೋ’ ಮಾರ್ಚ್ 13 ರಂದು ಸಂಜೆ 6 ಗಂಟೆಗೆ ದುಬೈಯ Al Ghurair centre Deiraದಲ್ಲಿ ಪ್ರದರ್ಶನಗೊಳ್ಳಲಿದೆ.

ಮಾರ್ಚ್ 20 ರಂದು ದಕ್ಷಿಣ ಕನ್ನಡ, ಉಡುಪಿ, ಹಾಗೂ ಗಲ್ಫ್‌ ರಾಷ್ಟ್ರಗಳಲ್ಲಿ ಏಕಕಾಲದಲ್ಲೇ ತೆರೆಕಾಣಲಿದೆ. ಮಾರ್ಚ್ 27ರಂದು ಬೆಂಗಳೂರು ಹಾಗೂ ಎಪ್ರಿಲ್ 5ರಂದು ಪುಣೆ ಮತ್ತು ಮುಂಬೈಯಲ್ಲಿ ತೆರೆಕಾಣಲಿದೆ.

ದುಬೈಯ Al Ghurair centre Deiraದಲ್ಲಿ ನಡೆಯಲಿರುವ ವರ್ಲ್ಡ್ ಪ್ರೀಮಿಯರ್ ಶೋನಲ್ಲಿ ವಿಶೇಷ ಅತಿಥಿಗಳಾಗಿ ತುಳು ಚಿತ್ರರಂಗದ ಹಾಸ್ಯ ದಿಗ್ಗಜರಾದ ಅರವಿಂದ ಬೋಳಾರ್, ನವೀನ್ ಡಿ. ಪಡೀಲ್ ಭಾಗಿಯಾಗಲಿದ್ದಾರೆ.

ತುಳು ಸಿನೆಮಾರಂಗದ ಇತಿಹಾಸದಲ್ಲಿಯೇ ಬಹಳ ಅದ್ದೂರಿಯಾಗಿ ಮೂಡಿಬರುವ ಜೊತೆಗೆ ತುಳು ಸಿನೆಮಾ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿರುವ ‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ಸಿನೆಮಾದ ಟ್ರೇಲರ್, ಟೀಸರ್ ನೋಡಿಯೇ ಜನ ಕೀನ್ ಬೌಲ್ಡ್ ಆಗಿದ್ದಾರೆ.

ಸಿನೆಮಾದ ಟ್ರೇಲರ್, ಟೀಸರ್, ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದ್ದು, ತುಳು ಸಿನಿಮಾಭಿಮಾನಿಗಳಲ್ಲಿ ಹೊಸ ಸಂಚಲನವನ್ನುಂಟು ಮಾಡುವುದಂತೂ ಖಚಿತ.

ಕನ್ನಡದ ಮೇರು ನಟ ಅನಂತ್ ನಾಗ್ ಇದೇ ಮೊದಲ ಬಾರಿ ತುಳು ಸಿನೆಮಾಗೆ ಎಂಟ್ರಿ ನೀಡಿದ್ದು, ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ತುಳು ಚಿತ್ರರಂಗದ ಹಾಸ್ಯ ದಿಗ್ಗಜರಾದ ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಾಂಜೂರು, ಉಮೇಶ್ ಮಿಜಾರ್, ದೀಪಕ್ ರೈ, ಮೋಹನ್ ಕೊಪ್ಪಲ, ವಿಸ್ಮಯ ವಿನಾಯಕ ನಟಿಸಿದ್ದಾರೆ, ಚಿತ್ರದ ನಾಯಕ ನಟ-ನಟಿಯಾಗಿ ಪ್ರಥ್ವಿ ಅಂಬರ್ ಗಾಹು ನವ್ಯಾ ಪೂಜಾರಿ ನಟಿಸಿದ್ದಾರೆ.

Comments are closed.