ಆರೋಗ್ಯ

ಪಾದಗಳ ಬಿರುಕು ನಿವಾರಣೆಗೆ ಮೇಣ ತುಂಬಾ ಉತ್ತಮ ಮನೆ ಮದ್ದು.

Pinterest LinkedIn Tumblr

ಅನೇಕ ಜನರು ತಮ್ಮ ಕೆಲಸದಲ್ಲಿ ತುಂಬಾ ಬ್ಯುಸಿ ಇರುವ ಕಾರಣ ಹಾಳಾಗುತ್ತಿರುವ ತಮ್ಮ ಪಾದದ ಬಗ್ಗೆ ಗಮನ ಹರಿಸುವುದಿಲ್ಲ, ಹೌದು ಸ್ನೇಹಿತರೆ ಪಾದಗಳ ರಕ್ಷಣೆಯ ಬಗ್ಗೆ ನಾವು ಬಹಳ ಜಾಗ್ರತೆ ವಹಿಸುವುದು ತುಂಬಾ ಅವಶ್ಯಕ, ಯಾಕೆ ಅಂದರೆ ಪಾದಗಳು ನಮಗೆ ನಡೆಯಲು ತುಂಬಾ ಸಹಕಾರಿ. ಬಿರುಕು ಬಿಟ್ಟ ಪಾದಗಳು ನಮಗೆ ತುಂಬಾ ಹಿಂಸೆಯನ್ನ ನೀಡುತ್ತದೆ, ಇನ್ನು ಚಳಿಗಾಲದಲ್ಲಿ ನಮ್ಮ ಪಾದಗಳು ತುಂಬಾ ಬಿರುಕು ಬಿಡುವುದಕ್ಕೆ ಆರಂಭಿಸುತ್ತದೆ ಮತ್ತು ಬಿರುಕು ಬಿಟ್ಟ ಪಾದಗಳು ನಮಗೆ ತುಂಬಾ ಹಿಂಸೆಯನ್ನ ನೀಡುತ್ತದೆ. ಇನ್ನು ಪಾದಗಳ ಬಿರುಕುಗಳನ್ನ ಸರಿಪಡಿಸಲು ನಾವು ಆಸ್ಪತ್ರೆ ಮತ್ತು ಇತರೆ ಔಷಧಿಗಳ ಬಳಕೆ ಮಾಡುವ ಬದಲು ಮನೆಯಲ್ಲೇ ತಯಾರಿಸುವ ಈ ಔಷದಿಯ ಮೂಲಕ ನಿಮ್ಮ ಪಾದಗಳ ಬಿರುಕನ್ನ ಸರಿ ಮಾಡಿಕೊಳ್ಳಬಹುದು.

ಹಾಗಾದರೆ ಆ ಮನೆಮದ್ದು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಪಾದಗಳು ಕೂಡ ಬಿರುಕು ಬಿಟ್ಟಿದ್ದರೆ ನೀವು ಕೂಡ ಈ ಮನೆ ಮದ್ದಿನ ಸಹಾಯದಿಂದ ನಿಮ್ಮ ಪಾದದ ಬಿರುಕುಗಳನ್ನ ಸರಿಪಡಿಸಿಕೊಳ್ಳಿ. ಹೌದು ಸ್ನೇಹಿತರೆ ಕ್ಯಾಂಡಲ್ ಅಂದರೆ ಮೇಣದ ಬತ್ತಿಯ ಮೇಣವನ್ನು ಸಾಸಿವೆ ಎಣ್ಣೆಯ ಜೊತೆ ಬೆರೆಸಿ ರಾತ್ರಿ ಮಲಗು ವಾಗ ಬಿರುಕು ಬಿಟ್ಟ ಕಾಲಿನ ಪಾದಗಳಿಗೆ ಹಚ್ಚಿ ಮಲಗುವುದರಿಂದ ಬೆಳಗಾಗುವುದರ ಒಳಗೆ ನಿಮ್ಮ ಪಾದಗಳು ಮೃದುವಾಗಿ ಬಿರುಕುಗಳು ಮಾಯವಾಗಲಿದೆ, ಇನ್ನು ಹೀಗೆ ಸುಮಾರು ಒಂದು ವಾರಗಳ ಕಾಲ ಮಾಡುವುದರಿಂದ ನಿಮಗೆ ಉತ್ತಮವಾದ ಫಲಿತಾಂಶ ಸಿಗಲಿದೆ.

ಇನ್ನು ಎಳ್ಳೆಣ್ಣೆ ಪಾದಗಳ ಚಿಕಿತ್ಸೆಗೆ ರಾಮಭಾಣವಿದ್ದಂತೆ ಮತ್ತು ಪ್ರತಿ ದಿನ ರಾತ್ರಿ ಪಾದಗಳಿಗೆ ಎಳ್ಳೆಣ್ಣೆಯ ಹಚ್ಚಿಕೊಂಡು ಮಲಗುವು ದರಿಂದ ನಿಮ್ಮ ಪಾದಗಳ ಸೌಂದರ್ಯ ಇಮ್ಮಡಿಯಾಗುತ್ತದೆ. ಇನ್ನು ಬಿಸಿ ನೀರಿಗೆ ಸ್ವಲ್ಪ ಶಂಪೂ ಬೆರೆಸಿ ಅದರಲ್ಲಿ ನಮ್ಮ ಪಾದಗಳನ್ನ ಇಡಬೇಕು, ಇನ್ನು ಹೀಗೆ ಮಾಡುವುದರಿಂದ ನಿಮ್ಮ ಸತ್ತಿರುವ ಪಾದದ ಚರ್ಮಗಳಿಗೆ ಮತ್ತೆ ಜೀವ ಬರುತ್ತದೆ ಹಾಗೆ ಪಾದಗಳ ಬಿರುಕು ಗಳಲ್ಲಿನ ಮಣ್ಣುಗಳು ದೂರವಾಗವುದು. ಇನ್ನು ಅರಿಸಿನ ಮತ್ತು ಆಲಿನ್ ಆಯಿಲ್ ಪಾದಗಳ ಬಿರುಕುಗಳಿಗೆ ಒಳ್ಳೆಯ ಮನೆಮದ್ದು ಆಗಿದೆ, ಅರಿಶಿನಕ್ಕೆ ಆಲಿನ್ ಆಯಿಲ್ ಸೇರಿಸಿ ಪೇಸ್ಟನ್ನ ಸಿದ್ಧಪಡಿಸಿಕೊಂಡು ನಂತರ ಅದನ್ನ ಒಡೆದ ಪಾದಗಳಿಗೆ ಹೆಚ್ಚಿಕೊಳ್ಳಬೇಕು ಮತ್ತು ಕೆಲವು ದಿನಗಳ ಹೀಗೆ ಮಾಡುವುದರಿಂದ ನಿಮ್ಮ ಕಾಲಿನಲ್ಲಿ ಇರುವ ಬಿರುಕುಗಳು ಮಾಯವಾಗುತ್ತದೆ.

ಇನ್ನು ವ್ಯಾಕ್ಸ್ ಮತ್ತು ತೆಂಗಿನ ಎಣ್ಣೆಯ ಕುದಿಸಿ ರಾತ್ರಿ ಮಲಗುವಾಗ ನಮ್ಮ ಕಾಲುಗಳಿಗೆ ಹಚ್ಚಿ ಮಲಗುವುದರಿಂದ ಪಾದಗಳ ಬಿರುಕು ಗಳಲ್ಲಿನ ಉರಿ ಕಡಿಮೆಯಾಗುತ್ತದೆ. ಇನ್ನು ಹಾಲು ಮತ್ತು ಜೇನು ತುಪ್ಪವನ್ನ ಬೆರೆಸಿ ಕಾಲುಗಳ ಪಾದಗಳಿಗೆ ಹಚ್ಚಿ ಮಲಗುವುದರಿಂದ ಪಾದಗಳಲ್ಲಿನ ಬಿರುಕುಗಳು ಮಾಯವಾಗುತ್ತದೆ, ಹಾಗೆ ಸ್ವಲ್ಪ ಬೆಚ್ಚಗಿನ ನೀರಿಗೆ ನಿಂಬೆ ರಸ ಮತ್ತು ಉಪ್ಪನ್ನ ಬೆರೆಸಿ ಅದರಲ್ಲಿ ಕಾಲನ್ನ ಅರ್ಧ ಗಂಟೆ ಇಟ್ಟರೆ ನಮ್ಮ ಪಾದಗಳ ಬಿರುಕುಗಳಲ್ಲಿನ ಮಣ್ಣುಗಳು ದೂರವಾಗುತ್ತದೆ.

Comments are closed.