ಎಲೆಕೋಸು ಅಂದರೆ ಸಾಮಾನ್ಯವಾಗಿ ಕೆಲವರಿಗೆ ಇಷ್ಟ ಆಗುವುದಿಲ್ಲ, ಮೂಗು ಮುರಿಯುವಂತಹ ತರಕಾರಿಗಳ ಸಾಲಿನಲ್ಲಿ ಎಲೆಕೋಸನ್ನ ಇಟ್ಟುಕೊಂಡಿದ್ದಾರೆ, ಎಲೆಕೋಸಿನಿಂದ ತುಂಬಾ ಅಡುಗೆಗಳನ್ನ ಮಾಡಲು ಸಾಧ್ಯವಾಗುವುದಿಲ್ಲ ಅನ್ನುವ ಕಾರಣಕ್ಕೆ ಬಹುತೇಕ ಜನರು ಈ ಎಲೆಕೋಸನ್ನ ಬಳಕೆ ಮಾಡುವುದಿಲ್ಲ. ನೀವು ಎಲೆಕೋಸಿನಿಂದ ಮಾಡಿದ ಪದಾರ್ಥಗಳನ್ನ ಮಾತ್ರ ತಿಂದಿರುವಿರಿ ಆದರೆ ಎಲೆಕೋಸಿನ ರಸವನ್ನ ತೆಗೆದು ಅದನ್ನ ಸೇವನೆ ಮಾಡಿದರೆ ಆಗುವ ಲಾಭಗಳು ಇನ್ನು ಹಲವು ಜನರಿಗೆ ತಿಳಿದಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಎಲೆಕೋಸಿನ ನೀರನ್ನ ಸೇವನೆ ಮಾಡಿದರೆ ದೇಹಕ್ಕೆ ಎಷ್ಟು ಉಪಕಾರಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಸ್ನೇಹಿತರೆ ಎಲೆಕೋಸಿನ ನೀರನ್ನ ತಗೆದು ಸೇವನೆ ಮಾಡಿದರೆ ದೇಹಕ್ಕೆ ತುಂಬಾ ಉಪಯೋಗವಾಗಲಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ, ಹೌದು ಸ್ನೇಹಿತರೆ ಎಲೆಕೋಸು ನಮ್ಮ ಜೀವಕೋಶವನ್ನ ಆರೈಕೆ ಮಾಡುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ, ಎಲೆಕೋಸು ಸೇವನೆಯಿಂದ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಗಳು ನಮ್ಮ ದೇಹಕ್ಕೆ ಹೇರಳವಾಗಿ ಸಿಗುತ್ತದೆ. ಹಿನ್ನು ಎಲೆಕೋಸನ್ನ ಹೆಚ್ಚಾಗಿ ಸೇವನೆ ಮಾಡಿದರೆ ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಎಲೆಕೋಸು ನಮ್ಮ ದೇಹದ ಹೆಚ್ಚಿನ ಉಷ್ಣಾಂಶವನ್ನ ಕಡಿಮೆ ಮಾಡಿ ನಮ್ಮ ದೇಹ ತಂಪಾಗಿರುವಂತೆ ನೋಡಿಕೊಳ್ಳುತ್ತದೆ ಮತ್ತು ಇದರಲ್ಲಿ ಹೆಚ್ಚಿನ ಪೋಷಕಾಂಶ ಕೂಡ ಇರುತ್ತದೆ. ನಿತ್ಯವೂ ಒಂದು ಲೋಟ ಎಲೆಕೋಸಿನ ರಸವನ್ನ ಸೇವನೆ ಮಾಡಿದರೆ ನಮ್ಮ ದೇಹದಲ್ಲಿ ಅನೇಕ ರೋಗಗಳು ನಿವಾರಣೆ ಆಗುತ್ತದೆ, ಚರ್ಮಕ್ಕೆ ತಗುಲಿರುವ ಸೋಂಕುಗಳನ್ನ ತಡೆಗಟ್ಟುವಲ್ಲಿ ಎಲೆಕೋಸು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಎಲೆಕೋಸು ಬೀಟಾ ಕ್ಯಾರೋಟಿನ್ ಅಂಶವನ್ನು ಹೆಚ್ಚು ಒಳಗೊಂಡಿರುವುದರಿಂದ ದಿನಾಲೂ ಒಂದು ಲೋಟ ಎಲೆಕೋಸಿನ ರಸವನ್ನು ಸೇವನೆ ಮಾಡಿದರೆ ನಮ್ಮ ದೃಷ್ಟಿ ಸಮಸ್ಯೆಯನ್ನ ಕಡಿಮೆ ಮಾಡುತ್ತದೆ ಮತ್ತು ಕಣ್ಣಿಗೆ ತಂಪನ್ನ ನೀಡುತ್ತದೆ ಮತ್ತು ಕಣ್ಣಿನ ಆರೋಗ್ಯವನ್ನ ಕಾಪಾಡಿಕೊಳ್ಳಬಹುದಾಗಿದೆ. ಹೌದು ದಿನಾಲೂ ಒಂದು ಲೋಟ ಎಲೆಕೋಸಿನ ರಸವನ್ನ ಸೇವನೆ ಮಾಡಿದರೆ ಚರ್ಮದ ಕ್ಯಾನ್ಸರ್ ನಿಂದ ಮುಕ್ತಿಯನ್ನ ಪಡೆಯಬಹುದಾಗಿದೆ. ಇನ್ನು ಎಲೆಕೋಸಿನಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶ ಇರುವುದರಿಂದ ನಮ್ಮ ದೇಹದ ಮೂಳೆಗಳನ್ನ ಗಟ್ಟಿ ಮಾಡುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ ಮತ್ತು ಮೂಳೆ ದುರ್ಬಲವಾದಂತೆ ನೋಡಿಕೊಳ್ಳುತ್ತದೆ. ಹೆಚ್ಚಿನ ಪ್ರಮಾಣದ ಮದ್ಯಪಾನವನ್ನ ಮಾಡಿದ ಮರುದಿನ ಬೆಳಿಗ್ಗೆ ಒಂದು ಲೋಟ ಎಲೆಕೋಸಿನ ನೀರನ್ನ ಸೇವನೆ ಮಾಡಿದರೆ ಮದ್ಯಪಾನದ ಅಮಲನ್ನ ಬೇಗನೆ ಇಳಿಸಿಕೊಳ್ಳಬಹುದು. ದಿನಾಲೂ ಒಂದು ಲೋಟ ಎಲೆಕೋಸಿನ ರಸವನ್ನ ಸೇವನೆ ಮಾಡಿದರೆ ನಮ್ಮ ಹೊಟ್ಟೆಯಲ್ಲಿನ ಹುಣ್ಣು ಕಡಿಮೆ ಆಗುತ್ತದೆ ಮತ್ತು ಆಸಿಡಿಟಿ ಸಮಸ್ಯೆಯನ್ನ ತಡೆಗಟ್ಟುವಲ್ಲಿ ಎಲೆಕೋಸಿ ಪ್ರಮುಖ ಪಾತ್ರವನ್ನ ವಹಿಸುತ್ತದೆ.
ಇನ್ನು ಎಲೆಕೋಸಿನ ರಸವನ್ನ ದಿನಾಲೂ ಸೇವನೆ ಮಾಡಿದರೆ ನಮ್ಮ ರಕ್ತ ಶುದ್ಧವಾಗುವುದರ ಜೊತೆಗೆ ನಮ್ಮ ಹೆಚ್ಚಿನ ತೂಕವನ್ನ ಕೂಡ ಇಳಿಸಿಕೊಳ್ಳಬಹುದು. ಇನ್ನು ಎಲೆಕೋಸಿನ ನೀರು ಪಿತ್ತಜನಕವನ್ನ ಶುದ್ಧ ಮಾಡುವುದರಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ ಮತ್ತು ಜಕೃತ್ತಿನ ಆರೋಗ್ಯವನ್ನ ಕಾಪಾಡಲು ಇದು ಸಹಕಾರಿ. ಇನ್ನು ಎಲೆಕೋಸಿನ ನೀರನ್ನ ಸುಲಭವಾಗಿ ತಯಾರಿಸಿಕೊಳ್ಳಬಹುದು, ಒಂದು ಪಾತ್ರೆಯಲ್ಲಿ ಎಲೆಕೋಸಿನ ನೀರನ್ನ ಹಾಕಿ ನಂತರ ನೀರನ್ನ ಹಾಕಿ ಮತ್ತು ಸ್ವಲ್ಪ ಉಪ್ಪನ್ನ ಹಾಕಿ ಒಂದು ರಾತ್ರಿ ನೆನೆಯಲಿ ಬಿಡಬೇಕು, ಬೆಳಿಗ್ಗೆ ಆ ನೀರನ್ನ ಬೇರೆ ಪಾತ್ರೆಗೆ ಹಾಕಿ ರುಚಿಗೆ ತಕ್ಕಸ್ಟು ನಿಂಬೆ ರಸವನ್ನ ಹಾಕಿ ನಾವು ಸೇವನೆ ಮಾಡಬಹುದು,
Comments are closed.