ಕರಾವಳಿ

ಕೊಲ್ಲೂರು ರಸ್ತೆ ದ್ವಿಪಥ ಕಾಮಗಾರಿ ವೇಗ: ನೆಂಪು ಸರ್ಕಲ್ ದೀಪ ಸೌಕರ್ಯ

Pinterest LinkedIn Tumblr

ಕುಂದಾಪುರ: ದಕ್ಷಿಣ ಭಾರತದ ಅತ್ಯಂತ ಪ್ರಮುಖ ಕಾರಣಿಕ ಸ್ಥಳವಾದ ಕೊಲ್ಲೂರು ದೇವಳಕ್ಕೆ ತೆರಳುವ ಮಾರ್ಗ ಕೊಲ್ಲೂರು – ಹೆಮ್ಮಾಡಿ ಮುಖ್ಯರಸ್ತೆ 11 ಮೀ ಅಗಲದ ರಸ್ತೆಯಾಗಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆ ನೆಂಪು ಸರ್ಕಲ್ ಬಳಿ ವಿದ್ಯುತ್ ದೀಪವನ್ನು ಸಾಂಕೇತಿಕವಾಗಿ ಉದ್ಘಾಟಿಸಲಾಯಿತು.

ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿ, ಪ್ರಸಿದ್ಧ ಕೊಲ್ಲೂರು ದೇವಸ್ಥಾನಕ್ಕೆ ತೆರಳುವ ರಸ್ತೆಯು ದ್ವಿಪಥಗೊಳ್ಳುತ್ತಿದೆ. ಇದರಿಂದ ಯಾತ್ರಾರ್ಥಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಇದಕ್ಕೆ ಜೊತೆಯಾಗಿ ಚಿತ್ತೂರು ವೃತ್ತ, ನೆಂಪು ವೃತ್ತ ಹಾಗೂ ಮಾರ್ಗದ ಕೆಲವೆಡೆಗಳಲ್ಲಿ ರಸ್ತೆ ಈಗಾಗಲೇ ಅಗಲವಾಗಿದೆ. ಉತ್ತಮ ರೀತಿಯಲ್ಲಿ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚಿಸಿದ್ದಾಗಿ ತಿಳಿಸಿದರು.

Comments are closed.