ಆರೋಗ್ಯ

ದೇಹದಿಂದ ಹೋರ ಹೋಗುವ ಮೂತ್ರದಿಂದ ನಿಮ್ಮ ಆರೋಗ್ಯದ ಸ್ಥಿತಿಗತಿ ತಿಳಿದುಕೊಳ್ಳಿ.

Pinterest LinkedIn Tumblr

ಈ ಕಾರಣದಿಂದಾಗಿ ಮೂತ್ರ ನೊರೆಯಾಗಿರುತ್ತದೆ ಇದರಿಂದ ಈ ಕಾಯಿಲೆ ಬರಬಹುದು. ಮನುಷ್ಯನ ದೇಹವನ್ನು ಯಾವ ಅಭಿಯಂತರರಿಂದಲು ಸೃಷ್ಟಿಸಲು ಸಾಧ್ಯವಿಲ್ಲ ಏಕೆಂದರೆ ದೇಹದೊಳಗೆ ಅಷ್ಟೊಂದು ಅಂಗಗಳು ರಕ್ತನಾಳಗಳು ನರಗಳು ಇತ್ಯಾದಿಗಳು ಇವೆ ಅದರಲ್ಲೂ ಕೆಲವೊಂದು ಅಂಗಗಳು ದೇಹದ ಹೊರಗಡೆ ಇದ್ದರೆ ಇನ್ನು ಕೆಲವು ದೇಹದ ಒಳಗಡೆ ಇದ್ದು ತಮ್ಮ ಕಾರ್ಯ ನಿರ್ವಹಿಸುವವು ಇದರಿಂದ ದೇಹದ ಹೊರಗಿನ ಅಂಗಗಳಂತೆ ಒಳಗಿನ ಅಂಗಗಳ ಆರೋಗ್ಯವು ಅತಿ ಅಗತ್ಯವಾಗಿರುವುದು ಇವುಗಳು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ದೇಹ ಸರಿಯಾಗಿರಲು ಸಾದ್ಯ. ದೇಹದೊಳಗೆ ಇರುವಂತಹ ವಿಷಕಾರಿ ಅಂಶಗಳು ಮೂತ್ರದ ಮೂಲಕ ಹೊರಹೋಗುತ್ತವೆ. ಸಾಮಾನ್ಯವಾಗಿ ಮೂತ್ರವು ಹಗುರ ಹಳದಿಯಿಂದ ಹಿಡಿದು ಕಡು ಹಳದಿ ಮತ್ತು ಬಿಳಿಯಾಗಿರುವುದು ನೀವು ಸೇವಿಸುವಂತಹ ಆಹಾರ ಔಷಧಿಗಳು ಮತ್ತು ಅನಾರೋಗ್ಯಗಳು ಮೂತ್ರದ ಬಣ್ಣದ ಮೇಲೆ ಪ್ರಭಾವ ಬೀರುತ್ತವೆ. ಕೆಲವೊಮ್ಮೆ ಮೂತ್ರ ನೊರೆಯನ್ನು ಹೊಂದಿರುತ್ತದೆ ಆಗ ಮೂತ್ರಕೋಶವು ತುಂಬಿದೆ ಇದನ್ನು ಕಾಲಿಮಾಡಲು ಮೂತ್ರವು ತುಂಬಾ ವೇಗವಾಗಿ ಹೊರಗೆ ಬರುತ್ತದೆ ಎಂದು ಹೇಳಬಹುದು.

ಹಾಗೆ ಕೆಲವೊಂದು ಆರೋಗ್ಯ ಸಮಸ್ಯೆಯಿಂದಾಗಿ ಮೂತ್ರ ನೊರೆಯಾಗಿರುತ್ತದೆ. ಪದೇ ಪದೇ ಮೂತ್ರ ನೊರೆಯಾಗುತ್ತಿದ್ದರೆ ವೈದ್ಯರನ್ನು ಭೇಟಿಯಾಗಬೇಕು ಮೂತ್ರ ನೊರೆಯಾಗಲು ಏನು ಕಾರಣ ಅದನ್ನು ಹೇಗೆ ತಡೆಯುವುದು ಎಂದು ಈಗ ತಿಳಿಯೋಣ. ಪ್ರತಿಯೊಬ್ಬರಿಗೂ ಯಾವಾಗಲಾದರೂ ಒಮ್ಮೆ ಮೂತ್ರ ನೊರೆಯಾಗಿರುತ್ತದೆ ಇದು ಮೂತ್ರದ ವೇಗದಿಂದ ಬರುವುದು ಮೂತ್ರದಲ್ಲಿ ಪದೇ ಪದೇ ನೊರೆ ಬಂದರೆ ಹಾಗೆ ಹೆಚ್ಚಾಗುತ್ತಾ ಇದ್ದರೆ ಅದು ಯಾವುದೋ ಕಾಯಿಲೆಯ ಲಕ್ಷಣವೆಂದು ತಿಳಿಯಬೇಕು. ಕೈಕಾಲು ಮುಖ ಮತ್ತು ಹೊಟ್ಟೆಯು ಉದಿಕೊಳ್ಳುವುದು ಇದು ಮೂತ್ರ ಪಿಂಡ ಹಾನಿಯಾದಾಗ ದ್ರವ ಶೇಕರಣೆಯಾಗುವುದು ನಿಶಕ್ತಿ ಹಸಿವು ಇಲ್ಲದಿರುವದು ವಾಕರಿಕೆ ವಾಂತಿ ನಿದ್ರೆಯ ಕೊರತೆ ಮೂತ್ರದಲ್ಲಿನ ಪ್ರಮಾಣದಲ್ಲಿ ಬದಲಾವಣೆ ಮೊಡದಂತಹ ಮೂತ್ರ ಕಲ್ಲುಬಣ್ಣದ ಮೂತ್ರ ನೀವುಪುರುಷರಾಗಿದ್ದರೆ ಆಗ ಒಣ ಲೈಂ ಗಿಕ ಪರಾಕಾಷ್ಠೆ ಅಥವಾ ಪರಾಕಾಷ್ಠೆ ವೇಳೆ ವೀರ್ಯಬಿಡುಗಡೆ ಕಡಿಮೆಯಾಗುವುದು ಬಂಜೇತನ ಅಥವಾ ನಿಮ್ಮ ಸಂಗಾತಿಯು ಗರ್ಭಧರಿಸುವಂತೆ ಮಾಡಲು ವಿಫಲವಾಗುವುದು. ಮೂತ್ರದಲ್ಲಿ ನೊರೆಕಾಣಿಸಿಕೊಳ್ಳಲು ಕಾರಣಗಳು ವೇಗವಾಗಿ ಬರುವುದು ಕೆಲವೊಂದು ಸಲ ಕೇಂದ್ರೀಕೃತವಾದಾಗ ನೊರೆಕಾಣಿಸಿಕೊಳ್ಳುವುದು

ನೀವು ಹೆಚ್ಚು ನೀರು ಕುಡಿಯದೆ ಇದ್ದರೆ ಮತ್ತು ನಿಮ್ಮ ದೇಹವು ನಿರ್ಜಲೀಕರಣಕ್ಕೆ ಒಳಗಾದರೆ ಆಗ ಮೂತ್ರದಲ್ಲಿ ನೊರೆ ಬರುವುದು ಹಾಗೇನೆ ದೇಹದಲ್ಲಿ ಅತಿಯಾಗಿ ಪ್ರೊಟೀನ್ ಅಂಶ ಇರುವಾಗ. ಮೂತ್ರದಿಂದ ಹೊರಬರುವ ಪ್ರೊಟೀನ್ ಅಂಶವು ಗಾಳಿಯಲ್ಲಿ ಸೇರಿಕೊಂಡು ನೊರೆಉಂಟುಮಾಡುವುದು ಹೀಗೆ ಮೂತ್ರದಲ್ಲಿ ನೊರೆ ಬಂದರೆ ಆಗುವ ಅಪಾಯಗಳು. ಮೂತ್ರಕೋಶವು ತುಂಬಿದ್ದರೆ ಆಗ ಮೂತ್ರ ಕೋಶವು ಮೂತ್ರವನ್ನು ಬಲಪೂರ್ವಕ ಹಾಗೂ ವೇಗವಾಗಿ ಹೊರಹಾಕಲು ಪ್ರಯತ್ನಿಸುವುದು ಮೂತ್ರವು ಕೇಂದ್ರೀಕೃತವಾಗಿದ್ದರು ನೊರೆ ಬರುವುದು ಇದು ನಿರ್ಜಲೀಕರಣ ಮತ್ತು ಗರ್ಭಧಾರಣೆಯಿಂದಲು ಆಗಬಹುದು ಮೂತ್ರದಲ್ಲಿರುವ ಪ್ರೊಟೀನ್ ಅಂಶವನ್ನು ಪತ್ತೆಹಚ್ಚಲು ಮೂತ್ರ ಪರೀಕ್ಷೆ ಮಾಡಲು 24 ಗಂಟೆ ಬೇಕಾಗುತ್ತದೆ. ಇದು ಕ್ರಿಯಾಟಿನ್ ಮಟ್ಟವನ್ನು ಅಲ್ವಮಿನ್ ಗೆ ಹೋಲಿಸುತ್ತದೆ ಸ್ನಾಯುಗಳು ತುಂಡಾದಾಗ ಉತ್ಪತ್ತಿಯಾಗುವಂತಹ ದ್ರವವೇ ಕ್ರಿಯಾಟಿನ್ ಇದನ್ನು ಯುಎಸಿಆರ್ ಎಂದು ಕರೆಯಲಾಗುತ್ತದೆ. ಮೂತ್ರಪಿಂಡಗಳು ರಕ್ತವನ್ನು ಎಷ್ಟು ಚೆನ್ನಾಗಿ ಶುದ್ಧಿಕರಿಸುತ್ತಿದೆ ಎಂದು ಇದು ಹೇಳುತ್ತದೆ.

ಯುಎಸಿಆರ್ ಪ್ರತಿ ಗ್ರಾಮ್ ಗೆ 30 ಮಿಲಿಗ್ರಾಮ್ ಗಿಂತ ಹೆಚ್ಚಾಗಿದ್ದರೆ ಆಗ ನಿಮಗೆ ಮೂತ್ರಪಿಂಡದ ಕಾಯಿಲೆ ಇದೆ ಎಂದು ಹೇಳಬಹುದು ವೈದ್ಯರು ಬೇರೆ ಕೆಲವೊಂದು ಪರೀಕ್ಷೆಗಳನ್ನು ಮಾಡಿ ಮೂತ್ರ ಪಿಂಡಗಲು ಸರಿಯಾಗಿ ಕೆಲಸ ಮಾಡುತ್ತಿದೆಯ ಎಂದು ಕಂಡುಹಿಡಿಯುವರು ಇದಕ್ಕೆ ತದ್ವಿರುದ್ಧವಾಗಿ ಕಲನದ ವೇಳೆ ಬರುವಂತ ವೀರ್ಯವು ಮೂತ್ರದಲ್ಲಿರುವ ನೊರೆಗೆ ಕರಣವಾಗುತ್ತಿದ್ದರೆ ಆಗ ವೈದ್ಯರು ಮೂತ್ರದಲ್ಲಿನ ವೀರ್ಯವನ್ನು ಪತ್ತೆಮಾಡುವರು ಮೂತ್ರದಲ್ಲಿನ ನೊರೆಗೆ ಚಿಕಿತ್ಸೆಗಳು. ನಿಮ್ಮ ಮೂತ್ರವು ಕೇಂದ್ರೀಕೃತವಾಗಿ ನೊರೆ ಬರುತ್ತಿದ್ದರೆ ಆಗ ನೀವು ಹೆಚ್ಚು ನೀರು ಮತ್ತು ಇತರ ದ್ರವಾಹಾರ ಸೇವನೆ ಮಾಡುವ ಮೂಲಕ ನಿರ್ಜಲೀಕರಣ ತಪ್ಪಿಸಬೇಕು ಮತ್ತು ಮೂತ್ರದಲ್ಲಿನ ನೊರೆ ಕಡಿಮೆ ಮಾಡಬಹುದು ಮದುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆಗಳು ಮೂತ್ರಪಿಂಡಕ್ಕೆ ಹಾನಿಯಾಗಿರುವ ಕಾರಣದಿಂದ ಮೂತ್ರದಲ್ಲಿ ನೊರೆ ಕಾಣಿಸಿಕೊಳ್ಳುತ್ತಿದ್ದರೆ ಆಗ ನೀವು ಇದಕ್ಕೆ ಚಿಕಿತ್ಸೆ ಮಾಡಿಕೊಳ್ಳಬೇಕು ಹೆಚ್ಚಾಗಿ ಮಧುಮೇಹ ಅಧಿಕ ರಕ್ತದೊತ್ತಡ ಮೂತ್ರ ಪಿಂಡದ ಕಾಯಿಲೆಗೆ ಕಾರಣವಾಗುತ್ತವೆ. ಈ 2 ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡುವ ಮೂಲಕ ನೀವು ಮೂತ್ರಪಿಂಡಕ್ಕೆ ಆಗಿರುವ ಹಾನಿಯನ್ನು ನಿಧಾನಗೊಳಿಸಬಹುದು ನೀವು ಸಮತೋಲಿತ ಆಹಾರ ಸೇವನೆ ಮಾಡಿ ಎಂದು ವೈದ್ಯರು ಸೂಚಿಸುತ್ತಾರೆ ಮತ್ತು ಇದರೊಂದಿಗೆ ಮಧುಮೇಹ ಹದ್ದುಬಸ್ತಿನಲ್ಲಿ ಇಡಲು ಹಲವಾರು ವಿಧದ ವ್ಯಾಯಾಮ ಸೂಚಿಸಬಹುದು.

ನೀವು ಪದೇ ಪದೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷೆ ಮಾಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರ ಮೂತ್ರ ಪಿಂಡಗಳಿಗೆ ಕೂಡ ಹಾನಿಯಾಗುವುದು ಉಪ್ಪಿನ ಪ್ರಮಾಣ ಮತ್ತು ಪ್ರೋಟಿನನ್ನು ನಿಮ್ಮ ಆಹಾರದಲ್ಲಿ ಕಡಿಮೆ ಮಾಡಿದರೆ ಆಗ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಮತ್ತು ಮೂತ್ರಪಿಂಡಗಳು ತುಂಬಾ ಕಠಿಣವಾಗಿ ಕೆಲಸ ಮಾಡುವುದನ್ನು ತಡೆಯುವುದು.

Comments are closed.