ಈ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಿದರೆ ಕಿಡ್ನಿ ಸ್ಟೋನ್ ಆಗುವುದು ಖಚಿತ ಮನುಷ್ಯನ ದೇಹದಲ್ಲಿ ಮೂತ್ರಪಿಂಡಗಳು ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಇವು ರಕ್ತವನ್ನು ಹಾಳು ಮಾಡುವ ಕೆಟ್ಟ ಪದಾರ್ಥಗಳನ್ನು ಬೇರ್ಪಡೆ ಮಾಡಿ ಮೂತ್ರದ ಮೂಲಕ ಹೊರ ಹಾಕಿ ಲವಣಗಳ ಸಮತೋಲವನ್ನು ಕಾಪಾಡುತ್ತದೆ ಯಾವಾಗ ಮೂತ್ರದಲ್ಲಿ ಅಧಿಕವಾಗಿರುವ ಲವಣಗಳು ಸ್ಫಟಿಕ ರೂಪದಲ್ಲಿ ಮಾರ್ಪಟ್ಟು ಘನ ಪದಾರ್ಥವಾಗಿ ಪರಿವರ್ತನೆ ಆಗುತ್ತದೆಯೋ ಅದನ್ನು ಮೂತ್ರಕೋಶದ ಕಲ್ಲು ಅಥವಾ ಕಿಡ್ನಿ ಸ್ಟೋನ್ ಎಂದು ಕರೆಯಲಾಗುತ್ತದೆ ಈ ಸಮಸ್ಯೆಯಿಂದ ಬಳಲುತ್ತಾ ಇರುವವರಿಗೆ ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆ ಗಳನ್ನ ಮಾಡಿಕೊಳ್ಳಬೇಕಾಗುತ್ತದೆ. ಬೀಜ ಇರೋ ಟೊಮೆಟೊ ಬದನೆಕಾಯಿ, ಸೀಬೇಹಣ್ಣು ದಾಳಿಂಬೆ ಮುಂತಾದವುಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಸಹಾ ಕಿಡ್ನಿ ಸ್ಟೋನ್ ಸಮಸ್ಯೆ ಕಂಡು ಬರುತ್ತದೆ.
ಕಿಡ್ನಿ ಸ್ಟೋನ್ ಸಮಸ್ಯೆ ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ ಆದರೆ ಈ ಸಮಸ್ಯೆಗೆ ಸಾಕಷ್ಟು ಕಾರಣಗಳು ಕೂಡ ಇವೆ ಕಡಿಮೆ ನೀರು ಕುಡಿಯುವುದು ಸಹಾ ಈ ಸಮಸ್ಯೆಗೆ ಮುಖ್ಯ ಕಾರಣಗಳಲ್ಲಿ ಒಂದಾಗಿದೆ.ಅಲ್ಲದೆ ಬೀಜಗಳು ಇರುವ ಆಹಾರ ಸೇವನೆಯಿಂದ ಕಿಡ್ನಿಯಲ್ಲಿ ಕಲ್ಲು ನಿರ್ಮಾಣ ಆಗುತ್ತದೆ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಾ ಇರುವವರು ಆಹಾರದ ಬಗ್ಗೆ ಸಂಪೂರ್ಣ ಕಾಳಜಿಯನ್ನು ವಹಿಸಬೇಕು ಬೀಜಗಳು ಇರುವ ಟೊಮೆಟೊ ಸೀಬೆ ಹಣ್ಣು ಬದನೇಕಾಯಿ ದಾಳಿಂಬೆ ಮೊದಲಾದುವುಗಳ ಸೇವನೆ ನಿಲ್ಲಿಸಬೇಕು. ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿಕೊಳ್ಳಲು ಮತ್ತೊಂದು ಪ್ರಮುಖ ಕಾರಣ ಎಂದರೆ ಕಡಿಮೆ ನೀರು ಕುಡಿಯುವುದು ಆದರೆ ನಿಮ್ಮ ದೇಹದಲ್ಲಿ ಐದು ಮಿಲಿ ಮೀಟರ್ ಅಷ್ಟು ಕಲ್ಲು ಇದ್ದರೆ ಅದನ್ನು ಶಸ್ತ್ರ ಚಿಕಿತ್ಸೆಯಿಂದ ಮಾತ್ರ ತಗೆಯಲು ಸಾಧ್ಯ ಇದೆ ಆದರೆ ನಿಮ್ಮ ದೇಹದಲ್ಲಿ ಸಣ್ಣ ಕಲ್ಲು ಇದ್ದರೆ ಅದನ್ನು ತೊಡೆದು ಹಾಕಲು ಔಷಧಿಗಳನ್ನು ತೆಗೆದುಕೊಳ್ಳಬಹುದು ಅದೇ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯುವುದು ಕೂಡ ಅಷ್ಟೆ ಮುಖ್ಯವಾಗಿದೆ ಮುತ್ರ ಪಿಂಡ ಪಿತ್ತಕೋಶ ಮತ್ತು ಮೂತ್ರದ ಕೊಳವೆಗಳಲ್ಲಿ ಕಲ್ಲಿನ ಸಮಸ್ಯೆ ಇರಬಹುದು.
ಈ ಸಮಸ್ಯೆ ಎದುರಾದರೆ ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ ಹಾಗಾಗಿ ನೀವು ಸೇವಿಸುವ ಪ್ರತಿಯೊಂದು ಆಹಾರವು ಪೌಷ್ಠಿಕವಾಗಿ ಇದ್ದು ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸಬೇಕು. ನೋಡಿದಿರಾ ಸ್ನೇಹಿತರೆ ನಾವು ನಮ್ಮ ನಿತ್ಯ ಜೀವನದಲ್ಲಿ ಯಾವೆಲ್ಲ ಬದಲಾವಣೆಗಳನ್ನು ಮಾಡಿಕೊಂಡರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ಹಾಗಾದರೆ ನಾವು ತಿಳಿಸಿದ ಈ ಆಹಾರಗಳನ್ನು ನಾವು ನಮ್ಮ ಮಿತಿಯಲ್ಲಿ ಉಪಯೋಗಿಸಿದರೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರುತ್ತದೆ.

Comments are closed.