ಆರೋಗ್ಯ

ಈ ಒಂದು ಮನೆಮದ್ದನ್ನು ಬಳಸಿ, ನಿಮ್ಮ ಯಕೃತ್ ನ್ನು ಸ್ವಚ್ಛಗೊಳಿಸಿ ಆರೋಗ್ಯವಾಗಿರಿ.

Pinterest LinkedIn Tumblr

ನಮ್ಮ ದೇಹಕ್ಕೆ ಏನಾದರೂ ಕಾಯಿಲೆ ಬಂದಿದೆ ಎಂದರೆ ಅದನ್ನು ಕೂಡಲೇ ತಾನೇ ದೂರ ಮಾಡಿಕೊಳ್ಳುವ ಸಾಮರ್ಥ್ಯ ನಮ್ಮ ದೇಹಕ್ಕೆ ಹೆಚ್ಚಾಗಿದೆ ನಮ್ಮ ದೇಹದಲ್ಲಿ ಹೆಚ್ಚಾಗಿ ರಿಪೇರಿ ಮತ್ತು ಸ್ವಚ್ಛ ಮಾಡುವ ಕೆಲಸವನ್ನು ಈ ಯಕೃತ್ ನಿರ್ವಹಿಸುತ್ತದೆ ಇದು ಈ ಯಕೃತನ್ನು ಹೇಗೆ ಕಾಪಾಡಿ ಕೊಳ್ಳಬೇಕು ಎನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿಯೋಣ ಬನ್ನಿ ಈ ಯಕೃತ್ ಒಂದೂವರೆ ಕೆಜಿಯಷ್ಟು ಭಾರವಿರುತ್ತದೆ ನಮ್ಮ ದೇಹದ ಬೇರೆ ಬೇರೆ ಅಂಗಗಳು ಒಂದು ಅಥವಾ ಎರಡು ಕೆಲಸಗಳನ್ನು ಮಾಡುತ್ತವೆ ಆದರೆ ಈ ಯಕೃತ್ ನೂರಕ್ಕೂ ಹೆಚ್ಚು ಕೆಲಸಗಳನ್ನು ನಮ್ಮ ದೇಹದಲ್ಲಿ ಮಾಡುತ್ತಿರುತ್ತದೆ ನಮ್ಮ ದೇಹದ ಎಲ್ಲ ಅಂಗಗಳೊಂದಿಗೆ ಈ ಯಕೃತನ್ನು ಹೋಲಿಕೆ ಮಾಡಿದರೆ ಈ ಯಕೃತ ಮಾಡುವ ಕೆಲಸದಲ್ಲಿ 10ರಷ್ಟು ಸಹ ಬೇರೆ ಅಂಗಗಳು ಮಾಡುವುದಿಲ್ಲ ಆದ್ದರಿಂದ ಇಂತಹ ಯಕೃತನ್ನು ನಾವು ಆಗಾಗ ಸ್ವಚ್ಛಗೊಳಿಸಿದರೆ ಇನ್ನು ತುಂಬಾ ವರ್ಷಗಳ ಕಾಲ ಈ ಯಕೃತ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಈ ಒಂದು ಮನೆಮದ್ದನ್ನು ಬಳಸಿ ನೀವು ನಿಮ್ಮ ಯಕೃತ್ ನ್ನು ಸ್ವಚ್ಛಗೊಳಿಸ ಬಹುದು ಅದು ಹೇಗೆ ಎನ್ನುವುದನ್ನು ನೋಡೋಣ

ಈ ಸಾಮಗ್ರಿಗಳನ್ನು ಬಳಸಿಕೊಂಡು ಒಂದು ಪಾನೀಯವನ್ನು ತಯಾರಿಸೋಣ ಮೊದಲು ಒಂದು ಸೋರೆಕಾಯಿ ತೆಗೆದುಕೊಳ್ಳಿ ಇದರಲ್ಲಿ ಇರುವ ಬೀಜವನ್ನು ತೆಗೆದು ಇದನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ ಹಾಗೇನೇ ಇದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಿ ನಂತರ ಇದಕ್ಕೆ ಅರಿಷಿಣದ ಪುಡಿ ನಂತರ ನಿಂಬೆಹಣ್ಣಿನ ರಸ ಜೊತೆಗೆ ಉಪ್ಪು ಇವೆಲ್ಲವನ್ನು ತೆಗೆದುಕೊಳ್ಳಿ ಈಗ ಒಂದು ಮಿಕ್ಸಿ ಜಾರಿನಲ್ಲಿ ಕತ್ತರಿಸಿದ ಸೋರೆಕಾಯಿ ಕೊತ್ತಂಬರಿ ಸೊಪ್ಪು ಒಂದು ಚಿಟಿಕೆ ಅರಿಷಿಣದ ಪುಡಿ ಹಾಕಿ ಮಿಕ್ಸಿ ಮಾಡಿಕೊಳ್ಳಿ. ಈಗ ಇದನ್ನು ಸೋಸಬೇಡಿ ಹಾಗೇನೇ ಒಂದು ಲೋಟಕ್ಕೆ ಹಾಕಿಕೊಳ್ಳಿ ಈಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಹಾಗೇನೇ ಒಂದು ಚಮಚ ನಿಂಬೆಹಣ್ಣಿನ ರಸವನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಈಗ ಈ ಒಂದು ಪಾನೀಯ ತಯಾರಾಗಿದೆ ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿಯಬೇಕು ಇದರಲ್ಲಿ ಬಳಸಿರುವ ಸೋರೆಕಾಯಿ ಮತ್ತು ಕೊತ್ತಂಬರಿ ಸೊಪ್ಪು ಯಕೃತನ್ನು ತಂಪಾಗಿ ಇರಿಸುತ್ತದೆ ಇದರಿಂದ ಯಕೃತ್ ತುಂಬಾ ಚಟುವಟಿಕೆಯಿಂದ ಕೆಲಸ ಮಾಡುತ್ತದೆ

ಈ ಪಾನೀಯವನ್ನು ಪ್ರತಿದಿನ ತಪ್ಪದೆ ಒಂದು ವಾರ ಕುಡಿಯುವುದರಿಂದ ಯಕೃತ ನಲ್ಲಿ ಇರುವ ಕೆಟ್ಟ ಪಧಾರ್ಥವೆಲ್ಲ ಹೊರಗೆ ಹೋಗಿ ಯಕೃತ್ ಸ್ವಚ್ಛವಾಗುತ್ತವೆ ಹಾಗೇನೇ ನೀವು ಮೂಲಂಗಿ ಸೊಪ್ಪಿನ ರಸವನ್ನು ಕುಡಿಯುವುದರಿಂದಲೂ ಕೂಡ ಯಕೃತ್ ಸ್ವಚ್ಛವಾಗುತ್ತದೆ ಮೂಲಂಗಿ ಸೊಪ್ಪು ಯಕೃತ್ ನಲ್ಲಿ ಇರುವ ಕೆಟ್ಟ ಪಧಾರ್ಥಗಳನ್ನು ಹೊರಹಾಕಲು ಒಂದು ಸಂಜೀವಿನಿಯಾಗಿ ಕೆಲಸ ಮಾಡುತ್ತದೆ ಈ ಸೊಪ್ಪಿನಲ್ಲಿ ಪೈಭರ್ ಅಂಶ ಇರುವುದರಿಂದ ನಮ್ಮ ಜೀರ್ಣಕ್ರಿಯೆಯನ್ನು ಇದು ಹೆಚ್ಚಿಸಿ ಯಕೃತ್ ಕೆಲಸದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಈ ಮೂಲಂಗಿ ಸೊಪ್ಪಿನ ರಸವನ್ನು ಊಟದ ನಂತರ ಕುಡಿಯಬೇಕು ಹಾಗೇನೆ ಇದನ್ನು ಒಂದು ವಾರ ನಿರಂತರವಾಗಿ ದಿನಕ್ಕೆ ಒಂದು ಬಾರಿ ಊಟದ ನಂತರ ಕುಡಿಯುವುದರಿಂದ ಯಕೃತ್ ಗೆ ಸಂಬಂದಿಸಿದ ಸಮಸ್ಯೆಗಳೆಲ್ಲವು ಕಡಿಮೆ ಆಗುತ್ತವೆ ಹಾಗೆಯೇ ಯಕೃತ್ ತುಂಬಾನೇ ಚೆನ್ನಾಗಿ ಕೆಲಸ ಮಾಡುವಂತೆ ಇದು ಮಾಡುತ್ತದೆ.

Comments are closed.