ಕರಾವಳಿ

ಎಪ್ರಿಲ್ 26 ಹಾಗೂ ಮೇ 25 ಮಂಗಳೂರಿನಲ್ಲಿ ‘ಸಪ್ತಪದಿ-ಸಾಮೂಹಿಕ ವಿವಾಹ’ : ಫೆ.23ರಂದು ವಿಚಾರ ಸಂಕಿರಣ

Pinterest LinkedIn Tumblr

ಮಂಗಳೂರು ಫೆಬ್ರವರಿ 19 : ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ 2020ನೇ ಎಪ್ರಿಲ್ 26 ಹಾಗೂ ಮೇ 25 ರಂದು ನಡೆಯಲಿರುವ ‘ಸಪ್ತಪದಿ-ಸಾಮೂಹಿಕ ವಿವಾಹ’ ಕಾರ್ಯಕ್ರಮದ ಪೂರ್ವಭಾವಿಯಾಗಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ‘ವಿಚಾರ ಸಂಕಿರಣ’ ನಡೆಯಲಿದೆ.

ದ.ಕ. ಜಿಲ್ಲೆಗೆ ಸಂಬಂಧಿಸಿದಂತೆ, ಮಂಗಳೂರಿನಲ್ಲಿ ಫೆಬ್ರವರಿ 23 ರಂದು ಬೆಳಿಗ್ಗೆ 9.30 ಗಂಟೆಗೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ವಿಚಾರ ಸಂಕಿರಣ’ ನಡೆಯಲಿದ್ದು, ಕಾರ್ಯಕ್ರಮವನ್ನು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿರುವರು.

ಕಾರ್ಯಕ್ರಮಕ್ಕೆ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಶುಭಾಶಂಸನೆಗೈಯಲಿರುವರು. ಸಪ್ತಪದಿ ಸಾಮೂಹಿಕ ವಿವಾಹದ ಕುರಿತು ಉಪನ್ಯಾಸವನ್ನು ರಾಜ್ಯದ ಖ್ಯಾತ ಧಾರ್ಮಿಕ ಚಿಂತಕ ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ಹಿರಿಯ ಸದಸ್ಯ ಡಾ.ಮಹರ್ಷಿ ಆನಂದ ಗುರೂಜಿ ನೀಡಲಿರುವರು.

ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ 23 ರಂದು ಮಧ್ಯಾಹ್ನ 2.30 ಗಂಟೆಗೆ ಉಡುಪಿಯ ಪುರಭವನದಲ್ಲಿ ಸಪ್ತಪದಿ-ಸಾಮೂಹಿಕ ವಿವಾಹ ಕುರಿತು ‘ವಿಚಾರ ಸಂಕಿರಣ’ ನಡೆಯಲಿದೆ ಎಂದು ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಪ್ರಕಟಣೆ ತಿಳಿಸಿದೆ.

Comments are closed.