ಆರೋಗ್ಯ

ಸಬ್ಬಕ್ಕಿ ಸೇವನೆಯಿಂದ ಸಿಗುವ ಆರೋಗ್ಯ ಭಾಗ್ಯ ಬಲ್ಲಿರಾ?

Pinterest LinkedIn Tumblr

ಸಬ್ಬಕ್ಕಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಈ ಸಬ್ಬಕ್ಕಿಯನ್ನ ಭಾರತೀಯ ಅಡುಗೆಯನ್ನ ಹೆಚ್ಚಾಗಿ ಬಳಸುತ್ತಾರೆ ಮತ್ತು ಕರಾವಳಿಗಳಲ್ಲಿ ಪಾಯಸವನ್ನ ಮಾಡಲು ಈ ಸಬ್ಬಕ್ಕಿಯನ್ನ ಹೆಚ್ಚಾಗಿ ಬಳಸುತ್ತಾರೆ. ಈ ಸಬ್ಬಕ್ಕಿ ಹೆಚ್ಚು ಕಾರ್ಬೋ ಹೈಡ್ರೇಡ್ ಗಳನ್ನ ಹೊಂದಿರುತ್ತದೆ ಮತ್ತು ಉಪವಾಸ ಮಾಡುವವರು ಇದನ್ನ ಹೆಚ್ಚಾಗಿ ಬಳಸುತ್ತಾರೆ. ಇನ್ನು ಸಬಕ್ಕೂ ಕೆಲವರಿಗೆ ಇಷ್ಟ ಆದರೆ ಇನ್ನು ಕೆಲವರಿಗೆ ಇಷ್ಟ ಆಗುವುದಿಲ್ಲ, ಆದರೆ ಸಬ್ಬಕ್ಕಿ ತಿನ್ನುವುದರಿಂದ ದೇಹಕ್ಕೆ ಆಗುವ ಲಾಭಗಳ ಬಗ್ಗೆ ನೀವು ತಿಳುದುಕೊಂಡರೆ ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ. ಹಾಗಾ ದರೆ ಸಬ್ಬಕ್ಕಿ ತಿನ್ನುವುದರಿಂದ ದೇಹಕ್ಕೆ ಆಗುವ ಲಾಭಗಳೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ.

ಹೌದು ಆಟವಾಡುವ ಮಕ್ಕಳು ನಿಶಕ್ತಿಯನ್ನ ಹೊಂದಿದಾಗ ಈ ಸಬ್ಬಕ್ಕಿಯನ್ನ ಸೇವನೆ ಮಾಡಿದರೆ ಅವರ ನಿಶಕ್ತಿಯೂ ದೂರವಾಗುತ್ತದೆ, ಇದರಲ್ಲಿ ಇರುವ ಪಿಷ್ಟ ಮತ್ತು ಕಾರ್ಬೋ ಹೈಡ್ರೇಡ್ ಗಳು ಅದ್ಭುತವಾದ ಶಕ್ತಿ ಮತ್ತು ತ್ವರಿತ ವರ್ಧಕವನ್ನ ನೀಡುತ್ತದೆ. ಜೀರ್ಣ ಶಕ್ತಿ ಕಡಿಮೆ ಇರುವವರು ಇದರಲ್ಲಿ ತಯಾರಾದ ಆಹಾರವನ್ನ ಸೇವನೆ ಮಾಡಿದರೆ ಅವರ ಜೀರ್ಣ ಶಕ್ತಿ ಸುಧಾರಿಸುತ್ತದೆ, ಇನ್ನು ಸಬ್ಬಕ್ಕಿಯಲ್ಲಿ ಪ್ರೊಟೀನ್, ಕ್ಯಾಲಸಿಯಂ ಮತ್ತು ಇರಾನ್ ಅಂಶಗಳು ಹೇರಳವಾಗಿ ಸಿಗುತ್ತದೆ ಹಾಗಾಗಿ ಇದು ನಮ್ಮ ಆರೋಗ್ಯಕ್ಕೆ ತುಂಬಾ ಸಹಕಾರಿ. ಇನ್ನು ಸಬ್ಬಕ್ಕಿಯನ್ನ ಕೆಲವು ಆಹಾರಗಳನ್ನ ಜೊತೆ ಸೇರಿಸಿ ತಿನ್ನುವುದರಿಂದ ನಮ್ಮ ಮುಖವನ್ನ ಬಿಳುಪಾಗಿ ಕಾಣುವಂತೆ ನಾವು ಮಾಡಿಕೊಳ್ಳಬಹುವುದು ಮತ್ತು ನಮ್ಮ ಕೂದಲುಗಳು ಕಪ್ಪಾಗುವಂತೆ ಮಾಡಿಕೊಳ್ಳಬಹುದಾಗಿದೆ.

ಸಬ್ಬಕ್ಕಿಯನ್ನ ಪುಡಿ ಮಾಡಿ ಅದಕ್ಕೆ ಹಾಲನ್ನ ಸೇರಿಸಿ ಅದನ್ನ ಮುಖಕ್ಕೆ ಹಚ್ಚಿಕೊಂಡರೆ ಮುಖದ ಬಣ್ಣ ಬಿಳಿಯಾಗುತ್ತದೆ, ಸಬ್ಬಕ್ಕಿಯನ್ನ ಜೇನು ಮತ್ತು ನಿಂಬೆಯ ರಸದ ಜೊತೆಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಮೇಲಿನ ಎಲ್ಲಾ ಕಲೆಗಳು ದೂರವಾಗುತ್ತದೆ. ಇನ್ನು ಸಬ್ಬಕ್ಕಿ ಪುಡಿಯನ್ನ ಮೊಸರಿನ ಜೊತೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿದರೆ ನಿಮ್ಮ ಚರ್ಮ ಹೊಳೆಯುತ್ತದೆ, ಸಬ್ಬಕ್ಕಿಯನ್ನ ಆಲಿವ್ ಎಣ್ಣೆಯಲ್ಲಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ ಒಂದು ಘಂಟೆಯ ನಂತರ ತೊಳೆದರೆ ನಿಮ್ಮ ಕೂದಲು ಉದುರುವಿಕೆ ನಿವಾರಣೆ ಆಗುತ್ತದೆ. ಸಬ್ಬಕ್ಕಿ ಪುಡಿಯನ್ನ ಮೊಸರು, ಜೇನು ಮತ್ತು ರೋಜ್ ವಾಟರ್ ಜೊತೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿದರೆ ನಿಮ್ಮ ಕೂದಲು ಹೊಳೆಯುತ್ತದೆ.

ಇನ್ನು ಸಬ್ಬಕ್ಕೂ ಪುಡಿಯನ್ನ ಹಾಲು ಮತ್ತು ಅರಿಶಿನದ ಜೊತೆಗೆ ಸೇರಿಸಿ ಚರ್ಮಕ್ಕೆ ಹಚ್ಚುವುದರಿಂದ ಸ್ಕಿನ್ ಕ್ಯಾನಿನ್ ದೂರವಾಗುತ್ತದೆ. ಇನ್ನು ಸಬ್ಬಕ್ಕಿಯನ್ನ ಪುಡಿ ಮಾಡಿ ಅದಕ್ಕೆ ಮೊಟ್ಟೆಯ ಹಳದಿ ಭಾಗವನ್ನ ಮಿಶ್ರಣ ಮಾಡಿ ಮುಖದ ಸುಕ್ಕು ನಿವಾರಣೆ ಆಗುತ್ತದೆ, ಇನ್ನು ಸಬ್ಬಕ್ಕಿ ಪುಡಿಗೆ ಹಳದಿ ಮತ್ತು ರೋಜ್ ವಾಟರ್ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿದರೆ ನಿಮ್ಮ ಮುಖದ ಮೇಲಿನ ಮೊಡವೆಗಳು ಹೋಗುತ್ತದೆ. ಗೋಧಿ ಬಣ್ಣವನ್ನ ದೂರಮಾಡಿ ಬಿಳಿಯ ತ್ವಚೆ ನಿಮ್ಮದಾಗಬೇಕಾದರೆ ಸಬ್ಬಕ್ಕಿ ಪುಡಿ ಮಾಡಿ ಅದಕ್ಕೆ ಕಡಲೆ ಹಿಟ್ಟು ಮತ್ತು ಮೊಸರನ್ನ ಸೇರಿಸಿ ಮುಖಕ್ಕೆ ಹಚ್ಚಿಕೊಂಡರೆ ನಿಮ್ಮ ಮುಖ ಬಿಳುಪಾಗುತ್ತದೆ. ಇನ್ನು ಉಪವಾಸ ಮಾಡುವವರು ಸಬ್ಬಕ್ಕಿಯನ್ನ ಸೇವನೆ ಮಾಡುವುದರಿಂದ ಅವರಿಗೆ ಹಸಿವು ಕಾಣಿಸುದಿಲ್ಲ, ಸಬ್ಬಕ್ಕಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ತುಂಬಾ ಪ್ರಯೋಜನ ಇದೆ,

Comments are closed.