ಆರೋಗ್ಯ

ದೇಹದ ಯಾವ ಭಾಗಕ್ಕೆ ತುಂಬಾ ವೇಗವಾಗಿ ವಯಸ್ಸು ಅಗುವುದು ಗೋತ್ತೆ.?

Pinterest LinkedIn Tumblr

ದೇಹದ ಯಾವ ಅಂಗಕ್ಕೆ ಬೇಗನೆ ವಯಸ್ಸು ಆಗುವುದು ಗೊತ್ತೇ ವಯಸ್ಸು ಎನ್ನುವುದು ಮನುಷ್ಯನಿಗೆ ಒಂದು ಶಾಪವೇ ಎಂದು ಹೇಳಬಹುದು ದೇಹದಲ್ಲಿ ನೆರಿಗೆಗಳು ಕಾಣಿಸಿಕೊಳ್ಳುವ ತನಕ ಎಲ್ಲವೂ ಸರಿಯಾಗಿಯೇ ಇರುತ್ತದೆ ಅಥವಾ ಕೂದಲು ಬಿಳಿ ಆಗಲು ಆರಂಭಿಸಿದ ಮೇಲೆ ವಯಸ್ಸು ಆಗಲು ಆರಂಭ ಆಗಿದೆ ಎಂದೇ ಹೇಳಬಹುದು ದೇಹದ ಯಾವ ಭಾಗಕ್ಕೆ ಬೇಗನೆ ವಯಸ್ಸು ಆಗುವುದು ಎಂದು ನಿಮಗೆ ತಿಳಿದಿದೆಯೇ? ವಯಸ್ಸು ಆಗುವುದರೊಂದಿಗೆ ವ್ಯವಹರಿಸುವುದು ಕೂಡ ತುಂಬಾ ಕಠಿಣ ಯಾಕೆಂದರೆ ಮನುಷ್ಯನಿಗೆ ವಯಸ್ಸು ಆಗುತ್ತಾ ಇದೆ ಎಂದು ತಿಳಿದ ಮೇಲೆ ಹಲವಾರು ರೀತಿಯ ಚಿಂತೆಗಳು ಕಾಡುತ್ತದೆ ಹೀಗೆ ನಮ್ಮ ದೇಹದಲ್ಲಿ ಕೆಲವೊಂದು ಭಾಗಗಳಿಗೆ ಕೂಡ ಬೇಗನೆ ವಯಸ್ಸಾಗುತ್ತದೆ. ನೀವು 25 ನೆ ಹರಯಕ್ಕೆ ಬರುತ್ತಿದ್ದ ಹಾಗೆ ನಿಮಗಿಂತ 10 ವರ್ಷ ಅಧಿಕ ವಯಸ್ಸಿನವರು ಖಿನ್ನತೆ ಹಾಗೂ ಬೇಸರ ವ್ಯಕ್ತ ಪಡಿಸುವುದನ್ನು ನೋಡಬಹುದು ನಿಮ್ಮಲ್ಲಿ ಈಗ ಈ ರೀತಿಯ ಆಕರ್ಷಣೆ ಮತ್ತು ಯೌವನ ವೂ ಇಲ್ಲ ಎಂದು ಭಾವಿಸಬಹುದು ನಿಮ್ಮ ಯೌವನ ಮರಳಿ ಪಡೆಯಲು ಸೂಪರ್ ಮಾರ್ಕೆಟ್ ಗಳಿಗೆ ಭೇಟಿ ನೀಡಿ ಮಾತ್ರೆ ಅಥವಾ ಕ್ರೀಂ ಅನ್ನು ಖರೀದಿ ಮಾಡಬಹುದು ದೇಹದ ಭಾಗಕ್ಕೆ ಬೇಗನೆ ವಯಸ್ಸಾಗುವುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ದೇಹದ ಬೇರೆ ಯಾವುದೇ ಭಾಗಕ್ಕಿಂತ ಚರ್ಮಕ್ಕೆ ತುಂಬಾ ವೇಗವಾಗಿ ವಯಸ್ಸು ಆಗುವುದು ಎಂದು ಹೇಳಬಹುದು ಮೊದಲನೆಯದು ಕುತ್ತಿಗೆ ಮತ್ತು ಕತ್ತು. ಕುತ್ತಿಗೆ ಮತ್ತು ಕತ್ತು ಬಿಸಿಲಿಗೆ ಒಡ್ಡಲಪಡುವ ದೇಹದ ಅತಿ ಪ್ರಮುಖ ಭಾಗ ಆಗಿದೆ ಬಿಸಿಲಿನಲ್ಲಿ ವಿಕಿರಣಗಳು ಇರುವ ಕಾರಣವಾಗಿ ಇದು ಕುತ್ತಿಗೆ ಮತ್ತು ಕತ್ತಿಗೆ ಹಾನಿ ಉಂಟು ಮಾಡುತ್ತದೆ. ಮುಖದ ಮೇಲೆ ಇರುವ ಚರ್ಮ ಕ್ಕಿಂತ ಕುತ್ತಿಗೆಯ ಬಳಿ ಇರುವ ಚರ್ಮವು ತುಂಬಾ ತೆಳುವಾಗಿ ಇರುವುದು ಎಂದು ತಿಳಿಯಬೇಕು ಮತ್ತು ಇದರಿಂದ ಅದಕ್ಕೆ ವೇಗವಾಗಿ ಅದಕ್ಕೆ ವಯಸ್ಸು ಆಗುವುದು. ಈ ಭಾಗಕ್ಕೆ ದಿನಾಲೂ ಲೋಷನ್ ಅಥವಾ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಬೇಕು ಇನ್ನೂ ಕುತ್ತಿಗೆಯ ಸುತ್ತ ಕಪ್ಪಾಗಿ ಇದ್ದರೆ ಇಂತಹ ಕೆಲವು ಮನೆ ಮದ್ದುಗಳನ್ನು ಪ್ರಯತ್ನ ಕೂಡ ಮಾಡಿ ನೋಡಬಹುದು.

ಒಂದು ಚಮಚದಷ್ಟು ಲಿಂಬೆ ರಸ ಮತ್ತು ರೋಸ್ ವಾಟರ್ ಅನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಹತ್ತಿಯ ಉಂಡೆಯಿಂದ ಕುತ್ತಿಗೆಯ ಕಪ್ಪು ವರ್ತುಲದ ಭಾಗಕ್ಕೆ ಹಚ್ಚಿಕೊಳ್ಳಬೇಕು ರಾತ್ರಿ ಪೂರ್ತಿ ಹಾಗೇ ಬಿಡಬೇಕು ಮರುದಿನ ಇದನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕು. ತಾಜಾ ಲಿಂಬೆ ರಸ ಮತ್ತು ಈ ಹಣ್ಣಿನಷ್ಟು ಜೇನುತುಪ್ಪ ಬೆರೆಸಿಕೊಳ್ಳಿ ಇದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ ಇಪ್ಪತ್ತರಿಂದ ಇಪ್ಪತೈದು ನಿಮಿಷಗಳ ಕಾಲ ಹಾಗೆಯೇ ಬಿಡಬೇಕು ನಂತರ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ ಕುತ್ತಿಗೆಯ ಕಪ್ಪು ವರ್ತುಲವನ್ನು ಹೋಗಲಾಡಿಸಲು ಇದು ಕೂಡ ಸಹಕಾರಿ ಆಗುತ್ತದೆ.

Comments are closed.