ಕರಾವಳಿ

ಲೇಡಿಸ್ ಬಾರ್ ಮಾಲೀಕನ ಕೊಲೆಯ ಕಿಂಗ್‌ಫಿನ್ ಎ.ಕೆ.ಎಂ.ಎಸ್ ಬಸ್ ಮಾಲಿಕ ಸೈಫ್ ಸೆರೆ

Pinterest LinkedIn Tumblr

ಉಡುಪಿ: ಮುಂಬಯಿ ಮೂಲದ ಲೇಡಿಸ್ ಬಾರ್ ಹೊಂದಿದ್ದ ಉದ್ಯಮಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯ ಕಿಂಗ್‌ಫಿನ್ ಆಗಿದ್ದ ಉಡುಪಿ ಎ.ಕೆ.ಎಂ.ಎಸ್. ಬಸ್ ಮಾಲಿಕ ಸೈಫ್ ಅಲಿಯಾಸ್ ಸೈಫುದ್ಧಿನ್ ಅತ್ರಾಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಿರಿಯಡ್ಕ ಪೋಲಿಸ್ ಠಾಣೆಯ ಬೆಳ್ಳಂಪಳ್ಳಿ ದೊಡ್ಡಣಗುಡ್ಡೆಯಲ್ಲಿ ನವಿ ಮುಂಬಯಿ ಹೋಟೆಲ್ ಉದ್ಯಮಿ ಮಾಯಾ ಬಾರ್ ಮಾಲೀಕ ವಶಿಷ್ಟ ಸತ್ಯನಾರಾಯಣ ಯಾದವ್ ಶವ ಫೆ.10 ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

(ಆರೋಪಿ ಸೈಫ್ ಅಲಿಯಾಸ್ ಸೈಫುದ್ಧಿನ್ ಅತ್ರಾಡಿ)

ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ದಿನದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಕೊಲೆಯ ಪ್ರಮುಖ ಆರೋಪಿ ಮಾಯಾ ಬಾರ್ ಉದ್ಯೋಗಿ ದೆಹಲಿ ಜಗಜಿತ್ ನಗರ ನ್ಯೂಸ್ ಹುಸಮನ್ ಪುರ ನಿವಾಸಿ ಸುಮಿತ್ ಮಿಶ್ರ್ (23), ಎ.ಕೆ.ಎಂ.ಎಸ್ ಬಸ್ ಉದ್ಯೋಗಿಗಳಾದ ಸುರತ್ಕಲ್ ಚೋಕ್ಕಬೆಟ್ಟು ನಿವಾಸಿ ಅಬ್ದುಲ್ ಶುಕೂರ್ @ ಅದ್ದು (35), ಮಂಗಳೂರು ತೆಂಕಮಿಜಾರು ಕಂದಾಲಬೆಟ್ಟು ನಿವಾಸಿ ಅವಿನಾಶ್ ಕರ್ಕೆರಾ ( 25), ಉಡುಪಿ ಶಿವಳ್ಳಿ ಕುಂಜಿಬೆಟ್ಟು ನಿವಾಸಿ ಮೊಹಮ್ಮದ್ ಶರೀಪ್ (32) ಬಂಧಿಯಾಗಿದ್ದರು. ಈ ಕೊಲೆ ಕೇಸಿನಲ್ಲಿ ಸೈಫುದ್ದಿನ್ ಹೆಸರು ಮೊದಲಿನಿಂದಲೂ ಕೇಳಿಬಂದಿತ್ತು.

(ಕೊಲೆಯಾದ ವಶಿಷ್ಟ)

ಇನ್ನು ಕೊಲೆಯಾದ ವಶಿಷ್ಟ ಯಾದವ್ ಮತ್ತು ಆರೋಪಿ ಸೈಫ್ ಕೆಲವು ವರ್ಷಗಳಿಂದ ಸ್ನೇಹಿತರಾಗಿದ್ದು ಮಾಯಾ ಲೇಡಿಸ್ ಬಾರಿನಲ್ಲಿ ವಶಿಷ್ಟನ ಜೊತೆ ಸೈಫ್ ಕೂಡ ಪಾಲುದಾರನಾಗಿದ್ದ. ಇತ್ತೀಚೆಗೆ ಇಬ್ಬರಿಗೂ ಕೂಡ ವ್ಯವಹಾರದಲ್ಲಿ ಮನಸ್ತಾಪ ಉಂಟಾಗಿತ್ತೆನ್ನಲಾಗಿದೆ. ಅದೇ ಕಾರಣಕ್ಕಾಗಿ ಸೈಫ್ ಈ ಕೊಲೆಗೆ ಸುಫಾರಿ ಕೊಟ್ಟಿದ್ದ ಎನ್ನಲಾಗಿದೆ. ಕೊಲೆಯ ಬಗ್ಗೆ ಸ್ಕೆಚ್ ತಿಂಗಳ ಹಿಂದೆ ಸಿದ್ಧವಾಗಿದ್ದು ಅವಿನಾಶ್ ಕರ್ಕೇರಾ ಮೂಲಕವಾಗಿ ವಶಿಷ್ಟನನ್ನು ಉಡುಪಿಗೆ ಕರೆಸಲಾಗಿದ್ದು ವ್ಯವಸ್ಥಿತವಾಗಿ ಕೊಲೆ ಮಾಡುವ ಸಂಚು ನಡೆಸಿ ಕೊಲೆ ಮಾಡಿದ್ದರು.

ಸೈಫ್ ಈ ಹಿಂದೆಯೂ ಕೂಡ ಬೇರೆಬೇರೆ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ-

ಉಡುಪಿಯ ಬೆಳ್ಳಂಪಳ್ಳಿಯಲ್ಲಿ ಹೊಟೇಲ್ ಉದ್ಯಮಿಯ ಕಡಿದು ಕೊಲೆ

ಲೇಡಿಸ್ ಬಾರ್ ಮಾಲೀಕನ ಕೊಲೆ; ಉಡುಪಿಯ ಮೂವರು ಬಸ್ ಉದ್ಯೋಗಿಗಳ ಸಹಿತ ನಾಲ್ವರು ಸೆರೆ

Comments are closed.