ಆರೋಗ್ಯ

ಈ ಎಣ್ಣೆಯನ್ನು ಚೆನ್ನಾಗಿ ಕುದಿಸಿ,ಬಿಸಿ ಹಾರಿದ ಮೇಲೆ ಕೂದಲಿಗೆ ಮಸಾಜ್ ಮಾಡುವುದರ ಲಾಭ ಬಲ್ಲಿರಾ?

Pinterest LinkedIn Tumblr

ಪ್ರಸ್ತುತ ದಿನಗಳಲ್ಲಿ ಕೇವಲ ವಯಸ್ಕರಿಗೆ ಮತ್ತು ವಯಸ್ಸಾದವರಿಗೆ ಮಾತ್ರವಲ್ಲ ಹದಿ ಹರೆಯದವರಿಗೆ ಕೂಡ ಬಿಳಿ ಕೂದಲ ಚಿಂತೆ ಕಾಡುತ್ತದೆ ಹೀಗಾಗಿ ಕೆಲವು ಮನೆ ಮದ್ದುಗಳನ್ನು ಪಾಲಿಸಿ ಕೂದಲು ಬೆಳ್ಳಗೆ ಆಗಿರುವುದನ್ನು ತಡೆಗಟ್ಟಬಹುದು. ಈ ಉಪಾಯಗಳು ಖಂಡಿತವಾಗಿ ಶೇಕಡಾ 100% ಫಲಿತಾಂಶವನ್ನು ಕೊಡುತ್ತದೆ ಕೇವಲ ಒಂದೆರಡು ದಿನ ಉಪಯೋಗಿಸಿ ಬಿಟ್ಟರೆ ಖಂಡಿತ ಯಾವುದೇ ಫಲಿತಾಂಶ ಸಿಗುವುದಿಲ್ಲ ಕನಿಷ್ಟ 40 ದಿನಗಳ ಕಾಲ ಆದರೂ ನೀವು ತಪ್ಪದೇ ಉಪಯೋಗಿಸಲೇ ಬೇಕಾಗುತ್ತದೆ. ಹಾಗಾದರೆ ಬನ್ನಿ ನಾವೇ ಮಾಡಿಕೊಳ್ಳ ಬಹುದಾದ ಸುಲಭ ಪರಿಹಾರಗಳು ಯಾವುವು ಎಂದು ನೋಡೋಣ.

ಕಾದ ತೆಂಗಿನ ಎಣ್ಣೆಗೆ ಮೂರ್ನಾಲ್ಕು ನೆಲ್ಲಿಕಾಯಿ ತುಂಡನ್ನು ಹಾಕಿ ಚೆನ್ನಾಗಿ ಕುದಿಸಿ ಆರಿಸಿದ ಮೇಲೆ ತಲೆಗೆ ಹಚ್ಚಿಕೊಂಡು ನಂತರ ರಾತ್ರಿ ಪೂರ್ತಿ ಹಾಗೆ ಬಿಟ್ಟು ಸ್ನಾನ ಮಾಡುವುದರಿಂದ ವಿಟಮಿನ್ ಸಿ ಅಧಿಕವಾಗಿದ್ದು ಮುಪ್ಪಿನ ಲಕ್ಷಣಗಳನ್ನು ಮುಂದೂಡುತ್ತದೆ. ಇನ್ನು ನೆಲ್ಲಿ ಕಾಯಿ ಜೊತೆ ಮೆಂತ್ಯೆಯನ್ನು ಮಾಡಿದ ಪ್ಯಾಕ್ ಹಚ್ಚಿ ಹತ್ತು ಒಣಗಿದ ನೆಲ್ಲಿಕಾಯಿ ತುಂಡು ಆರು ಚಮಚ ಮೆಂತ್ಯ ಪುಡಿಯನ್ನು ಪುಡಿ ಮಾಡಿಟ್ಟುಕೊಂಡು ಕಾದ ತೆಂಗಿನ ಎಣ್ಣೆಗೆ ಹಾಕಿ ಆರಿದ ಮೇಲೆ ತಲೆಗೆ ಹಚ್ಚಿಕೊಂಡರೆ ಬಿಳಿ ಕೂದಲ ಸಮಸ್ಯೆ ಮಾಯವಾಗುತ್ತದೆ. ಇನ್ನು ಕರಿಬೇವಿನ ಎಲೆ ಅಂದರೆ ತೆಂಗಿನ ಎಣ್ಣೆಗೆ ಕರಿಬೇವಿನ ಎಲೆ ಹಾಕಿ ಚೆನ್ನಾಗಿ ಕುದಿಸಿ ತಣ್ಣಗಾದ ಮೇಲೆ ಅದನ್ನು ಕೂದಲಿಗೆ ಮಸಾಜ್ ಮಾಡಿ 30 ರಿಂದ 45 ನಿಮಿಷ ಬಿಟ್ಟು ತೊಳೆದುಕೊಳ್ಳಿ

ಹೀಗೆ ಮಾಡುವುದರಿಂದ ಕೂದಲು ಬೆಳ್ಳಗೆ ಆಗುವುದನ್ನು ನೀವು ತಡೆಗಟ್ಟಬಹುದು. ಅಷ್ಟೇ ಅಲ್ಲದೆ ಕಾಂತಿಯುತವಾಗಿ ಕಪ್ಪು ಕೂದಲನ್ನು ನೀವು ಹೊಂದುವುದರ ಮೂಲಕ ಯೌವನದ ಕಳೆಯನ್ನು ನೀವು ನಿಮ್ಮ ಜೀವನ ಪರ್ಯಂತ ಸಾಗಿಸಬಹುದು. ಕೂದಲಿನ ಆರೋಗ್ಯಕ್ಕೆ ಈರುಳ್ಳಿ ತುಂಬಾ ಉತ್ತಮ. ಈರುಳ್ಳಿಯನ್ನು ಪೇಸ್ಟ್ ಮಾಡಿಕೊಂಡು ಕೂದಲಿಗೆ ಹಚ್ಚಿಕೊಂಡು ಅರ್ಧಗಂಟೆ ಬಿಟ್ಟು ತಲೆ ಸ್ನಾನ ಮಾಡಿ ಹೀಗೆ ನಿಯಮಿತವಾಗಿ ಮಾಡುತ್ತಿದ್ದರೆ ಕೂದಲು ಬೇಗ ಬೆಳ್ಳಗೆ ಆಗುವುದಿಲ್ಲ. ಕೂದಲು ಬಿಳಿ ಆಗದಂತೆ ತಡೆಯಲು ನೆಲ್ಲಿಕಾಯಿ ಹಾಗೂ ನಿಂಬೆ ಹಣ್ಣು ನಮಗೆ ಸುಲಭ ರೂಪದಲ್ಲಿ ಸಿಗುತ್ತದೆ ಇವೆರಡನ್ನೂ ಕೂದಲಿಗೆ ನಿಯಮಿತವಾಗಿ ಹಚ್ಚುತ್ತಿದ್ದರೆ ಕೂದಲು ಬೇಗ ಬೆಳ್ಳಗೆ ಆಗುವುದಿಲ್ಲ.

ಪ್ರತಿ ದಿನ ಕರಿ ಎಳ್ಳಿನ ಎಣ್ಣೆಯನ್ನು ಕೂದಲಿಗೆ ಹಚ್ಚುತ್ತಾ ಬಂದರೆ ಮೂರು ತಿಂಗಳಲ್ಲಿ ಪರಿಣಾಮ ನೋಡಬಹುದಾಗಿದೆ. ಎಳ್ಳೆಣ್ಣೆ ಕೂಡ ಅರೆಕಾಲಿಕ ಬಿಳಿ ಕೂದಲು ತಪ್ಪಿಸುವಲ್ಲಿ ಸಹಾಯ ಮಾಡಲಿದೆ. ಅಶ್ವ ಗಂಧವನ್ನು ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಹಚ್ಚಿದರೆ ಕೂದಲು ಸೊಂಪಾಗಿ ಕಪ್ಪಾಗಿ ಬೆಳೆಯುತ್ತದೆ. ಸ್ನೇಹಿತರೆ ಈ ಸುಲಭ ಮನೆ ಮದ್ದುಗಳನ್ನು ನಿಮ್ಮ ಮನೆಯಲ್ಲಿ ಮಾಡಿ ಉಪಯೋಗಿಸಿ ನೋಡಿ ಚಮತ್ಕಾರ ನಿಮಗೆ ತಿಳಿಯುತ್ತದೆ.

Comments are closed.