ಆರೋಗ್ಯ

ನವಜಾತ ಶಿಶುಗಳಲ್ಲಿ ಕಡಿಮೆ ರಕ್ತದೊತ್ತಡಕ್ಕೆ ಕಾರಣ ಬಲ್ಲಿರಾ..?

Pinterest LinkedIn Tumblr

ತಮ್ಮ ಕರುಳ ಕುಡಿ ಕಡಿಮೆ ರಕ್ತದೊತ್ತಡಕ್ಕೆ ಗುರಿಯಾದಾಗ ಹೊಸದಾಗಿ ಅಪ್ಪ-ಅಮ್ಮನಾದವರು ಗಾಬರಿ ಪಟ್ಟುಕೊಳ್ಳುತ್ತಾರೆ. ಮಗುವಿಗೆ ಕಡಿಮೆ ರಕ್ತದೊತ್ತಡವೇಕೆ ಉಂಟಾಯಿತು, ಕಾರಣವೇನು,ಏನಾದರೂ ಗಂಭೀರ ಸಮಸ್ಯೆಯಿದೆಯೇ,ನವಜಾತ ಶಿಶುವಿಗೆ ಹೀಗಾದರೆ ಏನು ಮಾಡಬೇಕು ಎಂಬ ಚಿಂತೆಗಳು ಅವರನ್ನು ಕಾಡತೊಡಗುತ್ತವೆ.ನವಜಾತ ಶಿಶುಗಳಲ್ಲಿ ಕಡಿಮೆ ರಕ್ತದೊತ್ತಡ ಉಂಟಾಗುವುದು ಸಾಮಾನ್ಯವಾಗಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ಖಚಿತ ಕಾರಣವನ್ನು ಕಂಡುಕೊಳ್ಳುವುದು ಕಷ್ಟವಾಗಿದ್ದರೂ,ಶಿಶುಗಳಲ್ಲಿ ಕಡಿಮೆ ರಕ್ತದೊತ್ತಡ ದೊಡ್ಡ ಸಮಸ್ಯೆಯೇನಲ್ಲ ಈ ಕುರಿತು ವಿವರಗಳು ಇಲ್ಲಿವೆ….

ಕಾರಣಗಳು
ಹೆರಿಗೆಗೆ ಮುನ್ನ ಮತ್ತು ನಂತರ ವಿಪರೀತ ರಕ್ತಸ್ರಾವ,ಸೋಂಕು,ಹೆರಿಗೆಗೆ ಮುನ್ನ ತಾಯಿ ಸೇವಿಸಿದ ಔಷಧಿಗಳು,ಹೆರಿಗೆಯ ಬಳಿಕ ಅತಿಯಾದ ದ್ರವದ ಹರಿವು ಇವು ಶಿಶುಗಳಲ್ಲಿ ಕಡಿಮೆ ರಕ್ತದೊತ್ತಡಕ್ಕೆ ಕಾರಣಗಳಲ್ಲಿ ಸೇರಿವೆ. ತಾಯಿಯ ಗರ್ಭಕೋಶದಲ್ಲಿ ಬೆಚ್ಚಗಿದ್ದ ಮಗುವು ಧರೆಗೆ ಇಳಿದ ಬಳಿಕ ವಾತಾವರಣದಲ್ಲಿಯ ದಿಢೀರ ಬದಲಾವಣೆಯೂ ಈ ಸ್ಥಿತಿಗೆ ಮುಖ್ಯ ಕಾರಣವಾಗಿದೆ. ಶಿಶುವಿನಲ್ಲಿಯ ನಿಶ್ಶಕ್ತಿಯೂ ಕಡಿಮೆ ರಕ್ತದೊತ್ತಡವನ್ನುಂಟು ಮಾಡುತ್ತದೆ

ಆದರೆ ಕೆಲವೊಮ್ಮೆ ನವಜಾತ ಶಿಶುವಿನಲ್ಲಿ ಕಡಿಮೆ ರಕ್ತದೊತ್ತಡಕ್ಕೆ ಕಾರಣವನ್ನು ಕಂಡು ಹಿಡಿಯುವುದು ತುಂಬ ಕಷ್ಟವಾಗುತ್ತದೆ. ಹಲವು ಪ್ರಕರಣಗಳಲ್ಲಿ ನವಜಾತ ಶಿಶುವಿನಲ್ಲಿಯ ಉಸಿರಾಟದ ತೊಂದರೆಗಳು ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗುತ್ತವೆ.

ಚಿಕಿತ್ಸೆ
ನವಜಾತ ಶಿಶುವಿನ ರಕ್ತದೊತ್ತಡ ಕಡಿಮೆಯಾದಾಗ ವ್ಯಾಕ್ಸಿನ್ ಅಥವಾ ಇಂಜೆಕ್ಷನ್ ಮೂಲಕ ಹೆಚ್ಚುವರಿ ದ್ರವವನ್ನು ನೀಡಲಾಗುತ್ತದೆ.

ರಕ್ತದೊತ್ತಡವನ್ನು ಹೆಚ್ಚಿಸಲು ಶಿಶುವನ್ನು ಯಂತ್ರದಲ್ಲಿರಿಸಲಾಗುತ್ತದೆ,ಇದರಿಂದ ರಕ್ತದೊತ್ತಡ ಸಹಜ ಮಟ್ಟಕ್ಕೆ ಮರಳುತ್ತದೆ.

ಕೆಲವೊಮ್ಮೆ ಶಿಶುವಿನಲ್ಲಿ ರಕ್ತದ ಕೊರತೆಯೂ ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಇಂತಹ ಸಮಯದಲ್ಲಿ ಶಿಶು ಶೀಘ್ರ ಸಹಜ ಸ್ಥಿತಿಗೆ ಮರಳುವಂತಾಗಲು ರಕ್ತವನ್ನು ನೀಡಲಾಗುತ್ತದೆ.

ನವಜಾತ ಶಿಶುವಿನ ಆರೈಕೆಗೆ ಟಿಪ್ಸ್
ನವಜಾತ ಶಿಶುವಿಗೆ ಹೊರಗಿನ ಉಷ್ಣತೆಗೆ ಸ್ವಯಂ ಹೊಂದಿಕೊಳ್ಳಲು ಸಾಧ್ಯವಿಲ್ಲದ್ದರಿಂದ ಅದಕ್ಕೆ ಯಾವಾಗಲೂ ಬಟ್ಟೆಯನ್ನು ಹೊದಿಸಿರಬೇಕು. ಅದರ ಉಷ್ಣತೆ ಸುಮಾರು 37 ಡಿ.ಸೆಂ.ನಷ್ಟಿರಬೇಕು.

ನವಜಾತ ಶಿಶುವಿನ ಅಳು ಸದಾ ಕಳವಳಕ್ಕೆ ಕಾರಣವಾಗಬೇಕಿಲ್ಲ. ಹೆಚ್ಚಿನ ಶಿಶುಗಳು ಹಸಿವಾದಾಗ ಅಥವಾ ಹಾಸಿಗೆಯನ್ನು ಒದ್ದೆ ಮಾಡಿದಾಗ ಅಳತೊಡಗುತ್ತವೆ. ಮಗುವು ತುಂಬ ಸಮಯದವರೆಗೂ ಅಳು ನಿಲ್ಲಿಸದಿದ್ದರೆ ವೈದ್ಯರಿಗೆ ತೋರಿಸಬೇಕಾಗುತ್ತದೆ.

ಎಳೆಯ ಮಕ್ಕಳ ಮೈಗೆ ಮಸಾಜ್ ಮಾಡುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ, ಹೀಗಾಗಿ ಮಸಾಜ್ ಅತ್ಯಗತ್ಯವಾಗಿದೆ. ನವಜಾತ ಶಿಶುವಿನ ಮೈಗೆ ತಿಕ್ಕಲು ಬಾದಾಮ ಎಣ್ಣೆಯನ್ನು ಬಳಸಬಹುದು. ಜನಿಸಿದ 10 ದಿನಗಳ ಬಳಿಕ ಶಿಶುವಿಗೆ ಮಸಾಜ್ ಮಾಡುವುದನ್ನು ಆರಂಭಿಸಬಹುದು.

ತಾಯಿಯ ಹಾಲಿನಲ್ಲಿರುವ ಕೊಲೆಸ್ಟ್ರಾಮ್ ಮಗುವಿನ ಆರೋಗ್ಯಕ್ಕೆ ಅತ್ಯಂತ ಮುಖ್ಯವಾಗಿದೆ ಮತ್ತು ಅದು ಮಗುವನ್ನು ಭವಿಷ್ಯದ ಕಾಯಿಲೆಗಳಿಂದಲೂ ರಕ್ಷಿಸುತ್ತದೆ. ಹೀಗಾಗಿ ತಾಯಿಯ ಹಾಲು ಮಗುವಿಗೆ ಅತ್ಯುತ್ತಮ ಆಹಾರವಾಗಿದೆ.

ಮಗುವನ್ನು ಸ್ಪಲ್ಪ ಸಮಯ ಬಿಸಿಲಿಗೆ ಒಡ್ಡುವುದನ್ನು ‘ಫೋಟೊಥೆರಪಿ’ ಎಂದು ಕರೆಯಲಾಗುತ್ತದೆ. ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಕೆಲವು ಸಮಯ ಸೂರ್ಯನ ಬಿಸಿಲು ತೋರಿಸಿ. ಇದರಿಂದ ಅದರ ಮೂಳೆಗಳು ಬಲಗೊಳ್ಳುತ್ತವೆ.

ಆರು ತಿಂಗಳವರೆಗೆ ಮಗುವಿಗೆ ತಾಯಿಯ ಎದೆಹಾಲನ್ನು ಮಾತ್ರ ನೀಡಬೇಕು, ನಂತರ ಅದಕ್ಕೆ ಘನ ಆಹಾರವನ್ನು ನೀಡಬಹುದು. ಆದರೆ ಜೀರ್ಣಗೊಳ್ಳಲು ಕಷ್ಟವಾಗುವ ಯಾವುದೇ ಆಹಾರವನ್ನು ನೀಡಬೇಡಿ. ಮಗು ಅಸ್ವಸ್ಥಗೊಂಡಾಗ ವೈದ್ಯರ ಸಲಹೆ ಪಡೆಯಲು ಮರೆಯಬೇಡಿ.

Comments are closed.