ಆರೋಗ್ಯ

ಥೈರಾಯ್ಡ್ ಹಾರ್ಮೋನ್‌ಗಳ ಮಟ್ಟ ಕುಸಿದರೆ ಗಳಗಂಡ ಉಂಟಾಗುವ ಅಪಾಯ ಹೆಚ್ಚು

Pinterest LinkedIn Tumblr

ಥೈರಾಯ್ಡ್ ಗ್ರಂಥಿಯು ನಮ್ಮ ಶರೀರದ ಪ್ರಮುಖ ಅಂಗವಾಗಿದೆ. ಥೈರಾಯ್ಡ್ ಹಾರ್ಮೋನ್‌ಗಳ ಮಟ್ಟ ಕುಸಿದರೆ ಅಂತಹ ಸ್ಥಿತಿಯನ್ನು ಹೈಪೊಥೈರಾಯ್ಡಿಸಂ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ನಿಯಮಿತವಾಗಿ ಔಷಧಿಗಳನ್ನು ಸೇವಿಸಬೇಕಾಗುತ್ತದೆ. ಹೈಪೊ ಥೈ ರಾಯ್ಡಿಸಂ ಅನ್ನು ಕಡೆಗಣಿಸಿದರೆ ಅಥವಾ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಅದು ಹೃದ್ರೋಗ, ಬಂಜೆತನ ಮತ್ತು ನರ ಸಮಸ್ಯೆಗಳಂತಹ ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ. ಅಂತಹ ಕೆಲವು ಸಾಮಾನ್ಯ ಸಮಸ್ಯೆಗಳ ಕುರಿತು ಮಾಹಿತಿಯಿಲ್ಲಿದೆ.

* ಗಳಗಂಡ: ಹೈಪೊಥೈರಾಯ್ಡಿಸಂ ಅನ್ನು ನಿರ್ಲಕ್ಷಿಸಿದರೆ ಅದು ಗಾಯ್ಟರ್ ಅಥವಾ ಗಳಗಂಡ ಉಂಟಾಗುವ ಅಪಾಯಕ್ಕೆ ಗುರಿಯಾಗಿಸ ಬಹುದು. ಥೈರಾಯ್ಡೆ ಗ್ರಂಥಿಯು ದೊಡ್ಡದಾದಾಗ ಅದನ್ನು ಗಳಗಂಡವೆಂದು ಕರೆಯಲಾಗುತ್ತದೆ. ಥೈರಾಯ್ಡೆ ಹಾರ್ಮೋನ್ ‌ಗಳ ಮಟ್ಟ ಕುಸಿದಾಗ ಪಿಟ್ಯುಟರಿ ಗ್ಲಾಂಡ್ ಅಥವಾ ಬೆಳವಣಿಗೆಯ ಮೇಲೆ ಮುಖ್ಯ ಪ್ರಭಾವ ಬೀರುವ ನಿರ್ನಾಳ ಗ್ರಂಥಿಗೆ ಸಂದೇಶ ರವಾನೆಯಾ ಗುತ್ತದೆ ಮತ್ತು ಅದು ಥೈರಾಯ್ಡಾನ್ನು ಪ್ರಚೋದಿಸುವ ಹಾರ್ಮೋನ್‌ನ್ನು ಸ್ರವಿಸುತ್ತದೆ. ಇದರ ಪರಿಣಾಮವಾಗಿ ಥೈರಾಯ್ಡ್ ಗ್ರಂಥಿಯ ಗಾತ್ರವು ಹೆಚ್ಚುತ್ತದೆ. ಅಯೊಡಿನ್ ಕೊರತೆಯಿಂದಾಗಿ ಉಂಟಾಗುವ ಹೈಪೊಥೈರಾಯ್ಡಿಸಂ ಇದಕ್ಕೆ ಮುಖ್ಯಕಾರಣವಾಗಿದೆ.

* ಹೃದಯನಾಳೀಯ ಸಮಸ್ಯೆಗಳು: ಅತ್ಯಂತ ಸೌಮ್ಯ ಸ್ವರೂಪದ ಹೈಪೊಥೈರಾಯ್ಡಿಸಂ ಕೂಡ ಹೃದಯದ ಆರೋಗ್ಯದ ಮೇಲೆ ಗಣನೀಯ ಪರಿಣಾಮ ವನ್ನುಂಟು ಮಾಡುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಥೈರಾಯ್ಡ್ ಹಾರ್ಮೋನ್ ಗಳ ಮಟ್ಟ ಕಡಿಮೆ ಯಾದಾಗ ಅದು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಲು ಕಾರಣವಾಗುತ್ತದೆ ಮತ್ತು ಇದು ವ್ಯಕ್ತಿಯು ಹೃದ್ರೋಗಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಅದು ಅಪಧಮನಿ ಕಾಠಿಣ್ಯವನ್ನು ಉಂಟು ಮಾಡುತ್ತದೆ ಮತ್ತು ಇದು ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.

ಥೈರಾಡ್ ಸೂಕ್ತವಾಗಿ ಕಾರ್ಯ ನಿರ್ವಹಿಸದಿದ್ದಾಗ ಅದು ಪೆರಿಕಾರ್ಡಿಯಲ್ ಎಫ್ಯುಸನ್ ಅಥವಾ ಹೃದಯದಲ್ಲಿ ಮತ್ತು ಅದರ ಸುತ್ತ ಹೆಚ್ಚುವರಿ ದ್ರವವು ಶೇಖರ ಗೊಳ್ಳಲು ಕಾರಣವಾಗುತ್ತದೆ. ಇದರಿಂದಾಗಿ ರಕ್ತವನ್ನು ಹೊರಕ್ಕೆ ಪಂಪ್‌ಮಾಡಲು ಹೃದಯಕ್ಕೆ ಕಷ್ಟ ವಾಗುತ್ತದೆ. ಪ್ರತಿ ಸಲ ಹೃದಯವು ಬಡಿದುಕೊಂಡಾಗ ಪಂಪ್ ಮಾಡಲ್ಪಡುವ ರಕ್ತದ ಪ್ರಮಾಣವು ಶೇ.30ರಿಂದ ಶೇ.50ರಷ್ಟು ಕಡಿಮೆಯಾಗುತ್ತದೆ ಎನ್ನುವುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಅಲ್ಲದೆ ಟಿ3 ಹಾರ್ಮೋನ್‌ಗಳ ಮಟ್ಟ ಕಡಿಮೆಯಾಗುವುದು ಕೂಡ ಹೃದಯ ವೈಫಲ್ಯಕ್ಕೆ ಕಾರಣವಾಗಬಲ್ಲದು.

* ಮೂತ್ರಪಿಂಡ ಕಾಯಿಲೆ: ತೀವ್ರ ಹೈಪೊಥೈರಾಯ್ಡಿಸಂ ಮೂತ್ರಪಿಂಡಗಳಿಗೆ ರಕ್ತದ ಹರಿವನ್ನು ತಗ್ಗಿಸುತ್ತದೆ ಮತ್ತು ಅವುಗಳ ಕಾರ್ಯಕ್ಕೆ ವ್ಯತ್ಯಯವನ್ನುಂಟು ಮಾಡುತ್ತದೆ. ಇದರಿಂದ ಹೆಚ್ಚುವರಿ ನೀರನ್ನು ಶರೀರದಿಂದ ಹೊರಹಾಕುವ ಮತ್ತು ಮತ್ತು ಮೂತ್ರದಿಂದ ಸೋಡಿಯಂ ಹೀರಿಕೊಳ್ಳುವ ಸಾಮರ್ಥ್ಯ ಕ್ಷೀಣಿಸುತ್ತದೆ. ಇದರ ಪರಿಣಾಮವಾಗಿ ಸೋಡಿಯಂ ಕೊರತೆಯುಂಟಾಗುತ್ತದೆ. ಅಲ್ಲದೆ ಥೈರಾಯ್ಡ್ ಹಾರ್ಮೋನ್ ಮೂತ್ರಪಿಂಡಗಳ ಬೆಳವಣಿಗೆಯ ಮೇಲೆ ಮಹತ್ವದ ಪರಿಣಾಮವನ್ನು ಹೊಂದಿದೆ.

* ನರಶಾಸ್ತ್ರೀಯ ಸಮಸ್ಯೆಗಳು: ದೀರ್ಘಕಾಲಿಕ ಮತ್ತು ಅನಿಯಂತ್ರಿತ ಹೈಪೊಥೈರಾಯ್ಡಿಸಂ ಬಾಹ್ಯ ಮತ್ತು ಕೇಂದ್ರ ನರಮಂಡಲದ ಮೇಲೆ ದುಷ್ಪರಿಣಾಮವ ನ್ನುಂಟು ಮಾಡುತ್ತದೆ. ನಿಷ್ಕ್ರಿಯ ಥೈರಾಯ್ಡ್ ಬಾಹ್ಯ ನರಮಂಡಲದ ನರಗಳಿಗೆ ಹಾನಿಯನ್ನುಂಟು ಮಾಡಬಲ್ಲದು ಮತ್ತು ಇದು ಕೈಕಾಲುಗಳಲ್ಲಿ ಮರಗಟ್ಟುವಿಕೆ, ಜುಮುಗುಡುವಿಕೆ,ಸ್ನಾಯು ನಿಶ್ಶಕ್ತಿ ಮತ್ತು ನೋವಿಗೆ ಕಾರಣವಾಗುತ್ತದೆ.

* ಬಂಜೆತನ: ಥೈರಾಯ್ಡ್ ಹಾರ್ಮೋನ್ ಮಟ್ಟ ಕುಸಿದರೆ ಅದು ಬಂಜೆತನಕ್ಕೆ ಕಾರಣವಾಗಬಲ್ಲದು. ಮಹಿಳೆಯರಲ್ಲಿ ಹೈಪೊಥೈರಾಯ್ಡಿಸಂ ಅಂಡೋತ್ಪತ್ತಿಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅನಿಯಮಿತ ಋತುಸ್ರಾವವನ್ನುಂಟು ಮಾಡುತ್ತದೆ ಮತ್ತು ಇದು ಬಂಜೆತನಕ್ಕೆ ಕಾರಣ ವಾಗುತ್ತದೆ. ಪುರುಷರಲ್ಲಿ ಹೈಪೊಥೈರಾಯ್ಡಿಸಂ ದೋಷಪೂರಿತ ವೀರ್ಯಾಣುಗಳು ಮತ್ತು ನಿಮಿರು ದೌರ್ಬಲ್ಯಕ್ಕೆ ಕಾರಣವಾಗಬಲ್ಲದು.

* ಗರ್ಭಾವಸ್ಥೆಯಲ್ಲಿ ತೊಂದರೆಗಳು: ಅನಿಯಂತ್ರಿತ ಹೈಪೊಥೈರಾಯ್ಡಿಸಂ ಮಹಿಳೆಯರ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆ ಸಮಯದಲ್ಲಿ ತೊಂದರೆಗಳನ್ನು ಉಂಟು ಮಾಡುವುದಲ್ಲದೆ,ಭ್ರೂಣದ ಬೆಳವಣಿಗೆಯ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ. ಅದು ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡ,ಅವಧಿಗೆ ಮುನ್ನವೇ ಹೆರಿಗೆ, ಗರ್ಭಪಾತ,ಹೆರಿಗೆ ನಂತರದ ಖಿನ್ನತೆ ಮತ್ತು ರಕ್ತಸ್ರಾವದ ಅಪಾಯಗಳಿಗೆ ಕಾರಣವಾಗು ತ್ತದೆ. ಗರ್ಭದಲ್ಲಿಯೇ ಭ್ರೂಣದ ಸಾವು,ಭ್ರೂಣದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ವ್ಯತ್ಯಯ ಮತ್ತು ಜನ್ಮಜಾತ ವೈಕಲ್ಯಗಳಿಗೂ ಕಾರಣವಾಗುತ್ತದೆ. ಹೈಪೊಥೈರಾಯ್ಡಿಸಂ ತಾಯಿ ಮತ್ತು ಮಗುವಿನ ಅನಾರೋಗ್ಯ ಮತ್ತು ಸಾವಿಗೂ ಕಾರಣವಾಗಬಹುದು.

* ಮೈಕ್ಸೆಡೆಮಾ: ಇದು ದೀರ್ಘಕಾಲಿಕ ಮತ್ತು ರೋಗನಿರ್ಧಾರವಾಗದ ಹೈಪೊಥೈರಾಯ್ಡಿಸಂ ಉಂಟು ಮಾಡುವ ಅಪರೂಪದ,ಆದರೆ ಮಾರಣಾಂತಿಕ ಸ್ಥಿತಿಯಾಗಿದೆ. ಚಳಿಗೆ ಅತ್ಯಂತ ಅಸಹಿಷ್ಣುತೆ,ದಣಿವು,ಮಂಪರು ಮತ್ತು ಪ್ರಜ್ಞಾಶೂನ್ಯತೆ ಇವು ಮೈಕ್ಸೆಡೆಮಾದ ಲಕ್ಷಣ ಗಳಾಗಿವೆ. ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಮೈಕ್ಸೆಡೆಮಾ ಕೋಮಾ ಎಂದು ಕರೆಯಲಾಗುವ ಸ್ಥಿತಿಗೆ ಕಾರಣವಾಗಬಹುದು.

Comments are closed.