ಆರೋಗ್ಯ

ಕುಡಿಯೋ ಹಾಲು ನಕಲಿಯೋ, ಅಸಲಿಯೋ ಎಂದು ಕಂಡುಹಿಡಿಯುವುದು ಹೇಗೆ ಗೋತ್ತೆ .?

Pinterest LinkedIn Tumblr

ನೀವು ಕುಡಿಯೋ ಪ್ಯಾಕೆಟ್ ಹಾಲಿನಲ್ಲಿ ನೀರು ಸೋಪಿನ ಪುಡಿ ಎಣ್ಣೆ ಹಾಗೂ ಯೂರಿಯಾ ಮಿಶ್ರಣ ಆಗಿರುವುದನ್ನು ಹೀಗೆ ಮಾಡಿ ಕಂಡುಹಿಡಿಯಿರಿ. ಪ್ರತಿಯೊಬ್ಬರು ಸಹ ಹಾಲನ್ನು ಬಳಸುತ್ತಾರೆ ಬೆಳಿಗ್ಗೆ ಎದ್ದ ತಕ್ಷಣ ಮಕ್ಕಳಿಗೆ ಹಾಲು ಕುಡಿಯಲು ಕೊಡುವುದರ ಜೊತೆಗೆ ತಾವು ಕೂಡ ಹಾಲಿನಲ್ಲಿ ಚಹಾ ಕಾಫಿ ಮಾಡಿಕೊಂಡು ಕುಡಿಯುತ್ತಾರೆ ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಎಲ್ಲರೂ ಸಹ ಕುಡಿಯುತ್ತಾರೆ ಆದರೆ ಈಗ ಈ ಹಾಲು ಮಾರುವವರು ದುಡ್ಡಿನ ಆಸೆಗೆ ಹಾಲಿನಲ್ಲಿ ಏನೆಲ್ಲ ಸೇರಿಸಿ ಕೊಂಡು ಅಂದರೆ ಯೂರಿಯಾ ರಿಫೈನ್ಡ್ ಎಣ್ಣೆ ಹಾಗೂ ಸೋಪಿನ ಪುಡಿಯನ್ನು ಕೂಡ ಸೇರಿಸಿ ಎರಡು ಲೀಟರ್ ಹಾಲನ್ನು 5 ಲೀಟರ್ ಹಾಲಾಗಿ ಮಾಡುತ್ತಾರೆ ಇವರು ನಮ್ಮ ಜೀವದ ಜೊತೆ ಆಟವಾಡುತ್ತಾರೆ ಇದರಿಂದ ನಮಗೆ ಅನೇಕ ರೋಗಗಳು ಬರುತ್ತವೆ ಹಾಗಿದ್ದರೆ ನೀವು ನಿಮ್ಮ ಮನೆಗೆ ತಂದಿರುವ ಹಾಲಿನಲ್ಲಿ ಅದು ಶುದ್ಧ ಹಾಲೋ ಅಥವಾ ಅದರಲ್ಲಿ ಏನಾದರೂ ಮಿಶ್ರಣ ಆಗಿದೆಯೋ ಅನ್ನುವುದು ಹೇಗೆ ತಿಳಿಯುವುದೂ ಎನ್ನುವುದನ್ನು ಇವತ್ತಿನ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಮೊದಲನೆಯದು ಹಾಲನ್ನು ಫ್ರಿಜ್ ನಲ್ಲಿ ಇಡುತ್ತಾರೆ ಹಾಗೇನೆ ಐಸ್ ನಲ್ಲೂ ಇಡುತ್ತಾರೆ ಅಥವಾ ತಣ್ಣಗೆ ಇರುವ ಜಾಗದಲ್ಲಿ ಕೂಡ ಇಡುತ್ತಾರೆ ಈಗ ನಿಮ್ಮ ಮನೆಯ ಕೊನೆಯ ವಾತಾವರಣಕ್ಕಿಂತ ಅದು ತಣ್ಣಗಿದೆಯ ಎಂಬುದನ್ನು ಮೊದಲು ತಿಳಿದುಕೊಳ್ಳಿ.

ಎರಡನೆಯದು ನೀವು ಪ್ಯಾಕೆಟ್ ಹಾಲನ್ನು ತೆಗೆದುಕೊಂಡಾಗ ಮೊದಲು ಮೇಲುಗಡೆ ಇರುವ ಕಟ್ಟಿನಲ್ಲಿ ಸರಿಯಾಗಿ ನೋಡಿಕೊಳ್ಳಿ ಏಕೆಂದರೆ ಹಾಲು ಮಾರುವವರು ಇದನ್ನು ಕತ್ತರಿಸಿ ಇದರಲ್ಲಿರುವ ಹಾಲನ್ನು ತೆಗೆದು ಅವರು ತಯಾರಿಸಿದ ಅಂದರೆ ಯೂರಿಯಾ ಸ್ಟಾರ್ಚ್ ರಿಫೈನ್ಡ್ ಎಣ್ಣೆ ಹಾಕಿ ತಯಾರಿಸಿರುವ ಹಾಲನ್ನು ಇದರಲ್ಲಿ ತುಂಬಿ ಮತ್ತೆ ಸೀಲ್ ಮಾಡುತ್ತಾರೆ ಅದು ಹಾಗೆ ಇದೆಯೋ ಇಲ್ಲವೋ ಎನ್ನುವುದನ್ನು ನೋಡಿಕೊಳ್ಳಿ. ಮೂರನೆಯದು ಹಾಲನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ ಇದರಲ್ಲಿ ಸೋಪಿನ್ ಪುಡಿ ಮಿಶ್ರಣ ಇದೆಯ ಎನ್ನುವುದನ್ನು ತಿಳಿಯಲು ಒಂದು ಚಿಕ್ಕ ಬಟ್ಟಲಿನಲ್ಲಿ ಸ್ವಲ್ಪ ಹಾಲನ್ನು ತೆಗೆದುಕೊಳ್ಳಿ ಇದರಲ್ಲಿ ಅರ್ಧ ಚಮಚ ಅರಿಷಿಣದ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಹಾಲು ಹಳದಿ ಬಣ್ಣದಲ್ಲಿ ಇದ್ದರೆ ಈ ಹಾಲಿನಲ್ಲಿ ಯಾವುದೇ ರೀತಿಯ ದಿಟರ್ಜೆಂಟ್ ಮಿಶ್ರಣ ಇಲ್ಲ ಎಂದು ಅರ್ಥ ಆದರೆ ಹಾಲಿನಲ್ಲಿ ಅರಿಷಿಣ ಪುಡಿ ಹಾಕಿದ ನಂತರ ಹಾಲು ಕೆಂಪು ಬಣ್ಣಕ್ಕೆ ಬಂದರೆ ಅದರಲ್ಲಿ ಸೋಪಿನ ಪುಡಿ ಮಿಶ್ರಣ ಇದೆ ಎಂದು ಅರ್ಥ ನೀವು ಬಟ್ಟೆಗೆ ಅರಿಷಿಣ ಕಲೆಯಾದರೆ ಅದನ್ನು ನೀವು ಸೋಪಿನ ಪುಡಿಯಿಂದ ತೊಳೆದರೆ ಅದು ಕೆಂಪು ಬಣ್ಣಕ್ಕೆ ಬರುತ್ತದೆ ಹಾಗೆನೆ ಹಾಲು ಕೆಂಪಾದರೆ ಇದರಲ್ಲಿ ಸೋಪಿನ ಪುಡಿ ಸೇರಿದೇ ಎಂದು ನೀವು ತಿಳಿಯಬಹುದು.

ಹಾಗೇನೆ ಹಾಲಿನಲ್ಲಿ ರಿಫೈನ್ಡ್ ಎಣ್ಣೆ ಮಿಶ್ರಣ ಆಗಿರುವುದನ್ನು ತಿಳಿಯಲು ನಿಮ್ಮ ಕೈಯಲ್ಲಿ ಒಂದೆರಡು ಹನಿ ಹಾಲನ್ನು ಹಾಕಿ ಚೆನ್ನಾಗಿ ಉಜ್ಜಿ ದಾಗ ಹಾಲು ಜಿಡ್ಡಾಗಿರುವುದಿಲ್ಲ ಎಂದರೆ ಅದರಲ್ಲಿ ರಿಫೈನ್ಡ್ ಎಣ್ಣೆ ಮಿಶ್ರಣ ಆಗಿಲ್ಲ ಎಂದರ್ಥ ಜೊತೆಗೆ ಉಜ್ಜಿದಾಗ ವಾಸನೆ ತೆಗೆದುಕೊಳ್ಳಿ ಆಗ ಕೂಡ ನಿಮಗೆ ಗೊತ್ತಾಗುತ್ತದೆ ಹಾಗೇನೇ ಸ್ವಲ್ಪ ಹಾಲನ್ನು ತೆಗೆದುಕೊಂಡು ಎರಡು ಬೆರಳುಗಳಿಂದ ಉಜ್ಜಿ ಮೇಲಕ್ಕೆ ಎತ್ತಿದಾಗ ನೊರೆ ಬರದೆ ಇದ್ದರೆ ಸೋಪಿನ್ ಪುಡಿ ಇಲ್ಲ ಎಂದು ಅರ್ಥ ಹಾಗೇನೇ ಹಾಲಿನಲ್ಲಿ ನೀರು ಮಿಶ್ರಣ ಆಗಿರುವುದನ್ನು ತಿಳಿಯಲು ಒಂದು ಪ್ಲೇಟನಲ್ಲಿ ಒಂದು ಹನಿ ಹಾಲು ಹಾಕಿ ಅದನ್ನು ಹರಿಯಲು ಬಿಡಿ ಹಾಲು ಹರಿಯುವಾಗ ಹಾಲಿನ ಬಿಳಿ ಬಣ್ಣ ಬಿಡುತ್ತಿದ್ದರೆ ಅದರಲ್ಲಿ ನೀರು ಮಿಶ್ರಣವಾಗಿಲ್ಲ ಎಂದರ್ಥ ಅಥವಾ ನೀರು ಮಿಶ್ರಣವಾಗಿದ್ದರೆ ಬಿಳಿ ಬಣ್ಣ ಇರುವುದಿಲ್ಲ ಒಮ್ಮೆಲೇ ಇದು ಹರಿದು ಹೋಗುತ್ತದೆ. ಆದ್ದರಿಂದ ಈ ಒಂದು ಸಲಹೇಗಳನ್ನು ಅನುಸರಿಸುವುದರಿಂದ ನೀವು ಹಾಲನ್ನು ಬೇಗನೆ ಗುರುತಿಸಬಹುದು ಹಾಗೇನೇ ಮನೆಯವರ ಆರೋಗ್ಯವನ್ನು ಕೂಡ ಕಾಪಾಡಬಹುದು.

Comments are closed.