ಆರೋಗ್ಯ

ಒಣಕೆಮ್ಮು ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಟಿಪ್ಸ್

Pinterest LinkedIn Tumblr

ಪದೇ ಪದೇ ಒಣಕೆಮ್ಮು ಕಾಡುತ್ತಿದೆಯೇ ಹಾಗಾದರೆ ಇದನ್ನು ಒಮ್ಮೆ ಸೇವಿಸಿ ನೋಡಿ. ನಾವು ಪ್ರತಿನಿತ್ಯ ಒಂದಲ್ಲ ಒಂದು ಆಹಾರದಲ್ಲಿ ಎಣ್ಣೆಯುಕ್ತ ಆಹಾರವನ್ನು ಸೇವಿಸುತ್ತಾ ಬರುತ್ತೇವೆ ಅದರಲ್ಲೂ ಚಳಿಗಾಲ ಮಳೆಗಾಲದ ಸಮಯದಲ್ಲಿ ಆ ಮೈ ಕೊರೆಯುವ ಚಳಿಗೆ ಹೊರಗಡೆ ಅಂಗಡಿಗಳಲ್ಲಿ ಮಾಡುವಂತಹ ಎಣ್ಣೆ ಪಧಾರ್ಥಗಳನ್ನು ಹೆಚ್ಚಾಗಿ ತಿನ್ನುತ್ತೇವೆ ಆ ಎಣ್ಣೆ ಅದೆಷ್ಟು ಸೂಚಿಯಾಗಿರುತ್ತದೆಯೋ ಅದು ನಮಗೆ ಗೊತ್ತಾಗುವುದಿಲ್ಲ ಹೀಗೆ ಎಣ್ಣೆ ಪಧಾರ್ಥಗಳನ್ನು ತಿನ್ನುವುದರಿಂದ ನಮ್ಮ ಗಂಟಲು ಹಿಡಿದಂತಾಗಿ ಕೆಮ್ಮು ಪ್ರಾರಂಭವಾಗುತ್ತದೆ. ಮಳೆಗಾಲ ಚಳಿಗಾಲ ಅಥವಾ ಬೇಸಿಗೆಕಾಲ ಈ ಮೂರು ಕಾಲಗಳಲ್ಲೂ ನಮ್ಮನ್ನು ಕಾಡುವ ರೋಗಗಳಲ್ಲಿ ಈ ಒಣಕೆಮ್ಮು ಸಹ ಒಂದು ಪ್ರತಿಯೊಬ್ಬ ವ್ಯಕ್ತಿಯೂ ಈ ಒಣಕೆಮ್ಮಿನ ಸಮಸ್ಯೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಾನೆ.

ನಮ್ಮ ಆಯುರ್ವೇದದ ಪದ್ಧತಿಯಂತೆ ದಿನನಿತ್ಯ ನಮ್ಮ ಮನೆಯಲ್ಲಿಯೇ ಉಪಯೋಗಿಸುವ ವಸ್ತುಗಳಿಂದ ಸುಲಭವಾಗಿ ಈ ಒಣಕೆಮ್ಮಿನಿಂದ ಪಾರಾಗಬಹುದು. ಹಾಗಾದರೆ ಯಾವ ವಸ್ತುಗಳನ್ನು ಹೇಗೆ ಬಳಸಿ ಈ ಒಣಕೆಮ್ಮಿನಿಂದ ಮುಕ್ತಿಯನ್ನು ಪಡೆಯಬಹುದು ಎಂಬುದನ್ನು ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಒಂದು ಚಮಚದಷ್ಟು ಹಸಿಶುಂಠಿ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಪದೇ ಪದೇ ಸೇವಿಸಿದರೂ ಒಣಕೆಮ್ಮು ಕಡಿಮೆಯಾಗುತ್ತದೆ. ಒಣಶುಂಠಿ ಕರಿಮೆಣಸು ಹಾಗೂ ಕಲ್ಲುಸಕ್ಕರೆ ಸೇರಿಸಿ ಪುಡಿಮಾಡಿ ಎರಡು ಚಿಟೀಕೆ ಪುಡಿಯನ್ನು ಪದೇ ಪದೇ ಬಾಯಿಗೆ ಹಾಕಿ ಚೀಪಿದರೆ ಒಣಕೆಮ್ಮು ಗುಣಮುಖವಾಗುತ್ತದೆ ಹಸಿ ಈರುಳ್ಳಿ ರಸವನ್ನು ದಿನಕ್ಕೆ ಒಂದು ಚಮಚದಷ್ಟು ಮೂರರಿಂದ ನಾಲ್ಕು ಬಾರಿ ಕುಡಿದರೆ ಒಣಕೆಮ್ಮು ಶಮನವಾಗುತ್ತದೆ.

ಹಾಗೇನೇ ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದರೆ ಅವರಿಗೂ ಸಹ ಇರೀತಿ ಒಣಕೆಮ್ಮು ಆಗಾಗ ಕಾಣಿಸಿಕೊಂಡರೆ ನೀವು ತುಂಬಾನೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಏಕೆಂದರೆ ಮಕ್ಕಳಿಗೆ ಶೀತ ಕೆಮ್ಮು ಜ್ವರ ಇಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ಬೇಗನೆ ಹೋಗುವುದಿಲ್ಲ ಹಾಗಾಗಿ ಮಕ್ಕಳು ಒಣಕೆಮ್ಮಿನಿಂದ ಬಳಲುತ್ತಿದ್ದರೆ ಒಣ ದ್ರಾಕ್ಷಿಯನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಕಾಲು ಚಮಚದಿಂದ ಅರ್ಧ ಚಮಚ ಕಷಾಯವನ್ನು ಪದೇ ಪದೇ ಕುಡಿಸಿದರೆ ಕೆಮ್ಮು ಬೇಗನೆ ನಿಲ್ಲುತ್ತದೆ. ರಾತ್ರಿ ಮಲಗುವ ಮುಂಚೆ ಒಂದು ಲೋಟ ಹಸುವಿನ ಹಾಲನ್ನು ಬಿಸಿಮಾಡಿ ಅದಕ್ಕೆ ಅರ್ಧ ಚಮಚ ಬಾದಾಮಿ ಎಣ್ಣೆ ಬೆರಸಿ ಕುಡಿಸಿದರೆ ಒಣಕೆಮ್ಮು ಶಮನವಾಗುತ್ತದೆ ಹಾಗೇನೇ ಬಿಸಿಹಾಲಿಗೆ ಒಂದು ಚಿಟಿಕೆ ಅರಿಷಿಣ ಪುಡಿ ಹಾಕಿ ಕುಡಿದರೆ ಒಣಕೆಮ್ಮು ಶೀಘ್ರವೇ ಉಪಶಮನವಾಗುತ್ತದೆ.

ಇದರ ಜೊತೆಗೆ ಒಣಕೆಮ್ಮನ್ನು ಹೋಗಲಾಡಿಸಲು ಮನೆಯ ಮುಂದೆ ಬೆಳೆದಿರುವಂತಹ ತುಳಸಿ ಎಲೆಗಳನ್ನು ಸ್ವಚ್ಛವಾಗಿ ತೊಳೆದು ಅದರಿಂದ ಚಹಾ ತಯಾರಿಸಿ ಕುಡಿದರೆ ಒಣಕೆಮ್ಮು ನಿವಾರಣೆಯಾಗುತ್ತವೆ. ಮನೆಯಲ್ಲಿಯೇ ಅಂದರೆ ನಾವು ದಿನನಿತ್ಯ ನಮ್ಮ ಅಡುಗೆಯಲ್ಲಿ ಬಳಸುವಂತಹ ವಸ್ತುಗಳನ್ನು ಬಳಸಿಕೊಂಡು ಹೀಗೆ ಬಿಡದೆ ಕಾಡುವ ಒಣಕೆಮ್ಮನ್ನು ನಿವಾರಿಸಿಕೊಳ್ಳಬಹುದು

Comments are closed.