ಆರೋಗ್ಯ

ರೋಗ ನಿರೋಧಕ ಶಕ್ತಿ ಹೆಚ್ಚಿರುವ ಈ ಹಣ್ಣನ್ನು ಯಾವ ಸಮಯದಲ್ಲಿ ಸೇವಿಸಿದರೆ ಒಳ್ಳೆಯದು.

Pinterest LinkedIn Tumblr

ಕಿತ್ತಲೆ ಹಣ್ಣು ನಮ್ಮ ದೇಹಕ್ಕೆ ಒಂದು ಶಕ್ತಿವರ್ಧಕ. ನಮ್ಮ ದೇಹವನ್ನು ನಾವು ಶಕ್ತಿಯುತವಾಗಿ ಹಾಗೇನೇ ಆರೋಗ್ಯಕರವಾಗಿ ಇರುವಂತೆ ಮಾಡಲು ಕೆಲವು ಪೌಷ್ಟಿಕಾಂಶಗಳು ಇರುವಂತಹ ಆಹಾರ ಸೇವಿಸಿದರೆ ಸಾಲದು ಜೋತೆಗೆ ಹಣ್ಣು ಹಂಪಲು ಹಸಿ ತರಕಾರಿಗಳನ್ನು ಕೂಡ ಸೇವಿಸಬೇಕು ಈ ಹಣ್ಣುಗಳಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ ಅಂತಹ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಶಕ್ತಿ ಹೆಚ್ಚುವುದನ್ನು ನಾವು ಕಾಣಬಹುದು ಇನ್ನು ಹಣ್ಣುಗಳು ಎಂದಮೇಲೆ ಎಲ್ಲ ಒಂದೇ ರೀತಿ ಇರುವುದಿಲ್ಲ ಎಲ್ಲ ಹಣ್ಣುಗಳು ಸಹ ತಮ್ಮದೇ ಆದಂತಹ ಸತ್ವ ಪೂರ್ಣ ಅಂಶಗಳನ್ನು ಒಳಗೊಂಡಿರುತ್ತದೆ ಅದ ಕಾರಣ ಅವುಗಳನ್ನು ಸೇವಿಸಿದಾಗ ನಮ್ಮ ದೇಹದಲ್ಲಿ ಚಮತ್ಕಾರಿ ಅಂಶಗಳನ್ನು ರಚಿಸುವಲ್ಲಿ ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತವೆ ಹಣ್ಣುಗಳು ಅಂದ ಮೇಲೆ ಸಿಹಿ ಜೊತೆಗೆ ಹುಳಿಯು ಇರುತ್ತದೆ ಅದರಲ್ಲಿ ಕಿತ್ತಲೆ ಹಣ್ಣು ಕೂಡ ಒಂದು ಇದು ಸಿಹಿ ಮತ್ತು ಹುಳಿ ಸಮವಾದ ಹಣ್ಣಾಗಿದೆ ಇದು ಎಲ್ಲ ಕಡೆ ಸುಲಭವಾಗಿ ಕಡಿಮೆ ಬೆಲೆಗೆ ಸಿಗುವಂತಹ ಒಂದು ಹಣ್ಣಾಗಿದೆ

ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಹೊಂದಿರುತ್ತದೆ ಹಾಗೇನೇ ಈ ಹಣ್ಣಿನಲ್ಲಿ ದ್ರವ ಅಂಶವಿರುತ್ತದೆ ಇದು ಕೇವಲ ದೇಹಕ್ಕೆ ಮಾತ್ರವಲ್ಲದೆ ನಮ್ಮ ತ್ವಚೆಗೆ ಸಂಬಂಧಿಸಿದಂತೆ ತುಂಬಾ ಉಪಯುಕ್ತವಾಗಿದೆ ಕಲೆ ರಹಿತ ಆರೋಗ್ಯದಿಂದ ಕುಡಿದ ಚರ್ಮದ ಕಾಂತಿ ನಮಗೆ ಸಿಗುತ್ತದೆ ಕಿತ್ತಲೆ ಫೇಸ್ ಮಾಸ್ ಕಿತ್ತಲೆ ಕ್ಯಾಂಡಿ ಹೀಗೆ ಕಿತ್ತಲೆ ಹಣ್ಣನ್ನು ತುಂಬಾ ವಿಧಗಳಲ್ಲಿ ಬಳಸಬಹುದು ಇದರಿಂದ ತುಂಬಾ ಪ್ರಯೋಜನ ಕೂಡ ಇದೆ ಹಾಗಾದರೆ ಈ ಕಿತ್ತಲೆ ಹಣ್ಣು ತಿನ್ನುವುದರಿಂದ ನಮ್ಮ ದೇಹಕ್ಕೆ ಸಿಗುವ ಆರೋಗ್ಯಕರ ಅಂಶಗಳು ಯಾವುವು ಎಂದು ನೋಡೋದಾದ್ರೆ ಕಿತ್ತಲೆ ಹಣ್ಣಿನಲ್ಲಿ ಇರುವ ಪ್ಲೋವೆನೈಡ್ಸ್ ಎಸ್ಪ್ಯರೀಡಿನ ಎಂಬ ಸಂಯುಕ್ತವೂ ಅಧಿಕ ರಕ್ತದೊತ್ತಡವನ್ನು ನಿಯಮಿತಗೊಳಿಸಲು ನೆರವಾಗುತ್ತದೆ ಕಿತ್ತಲೆಯಲ್ಲಿ ಇರುವ ಮೆಗ್ನೇಷಿಯಮ ರಕ್ತದೊತ್ತಡವನ್ನು ಆರೋಗ್ಯದ ಮಟ್ಟದಲ್ಲಿ ಕಾಪಾಡಿಕೊಳ್ಳಲು ನೆರವಾಗುತ್ತದೆ ಹಾಗೇನೇ ಕಿತ್ತಲೆ ಹಣ್ಣು ಕೊಬ್ಬನ್ನು ಕೂಡ ನಿಯಂತ್ರಿಸುತ್ತದೆ ಇದರಲ್ಲಿ ಕರಗಬಲ್ಲ ನಾರಿನಂಶ ಹೇರಳವಾಗಿ ಇರುತ್ತದೆ ಇದು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಅತ್ಯಧಿಕ ನಾರಿನಂಶವಲ್ಲದ ಆಹಾರ ವಸ್ತುಗಳನ್ನು ಸೇವಿಸುವಾಗ ಮಧುಮೇಹದಿಂದ ಬಳಲುತ್ತಿರುವವರು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತಾರೆ

ಮತ್ತು ಮಧುಮೇಹದಿಂದ ಬಳಲುತ್ತಿರುವವರು ರಕ್ತದಲ್ಲಿ ಸುಧಾರಿತ ಮಟ್ಟದಲ್ಲಿ ಸಕ್ಕರೆ ಅಂಶವನ್ನು ಮತ್ತು ಲಿಪಿಡ್ ಗಳನ್ನು ಇನ್ಸುಲಿನ್ ಮಟ್ಟವನ್ನು ಹೊಂದಿರಬೇಕು. ಆದ್ದರಿಂದ ಒಂದು ಮಧ್ಯಮ ಗಾತ್ರದ ಕಿತ್ತಲೆ ಹಣ್ಣು ತಿನ್ನುವುದರಿಂದ 3 ಗ್ರಾಮ್ ನಷ್ಟು ನಾರಿನಂಶ ನಮ್ಮ ದೇಹಕ್ಕೆ ಸಿಗುತ್ತದೆ.ಕಿತ್ತಲೆ ಹಣ್ಣಿನಲ್ಲಿ ಪೊಟ್ಯಾಷಿಯಂ ಎಂಬ ಖನಿಜಾಂಶವು ಸಮೃದ್ಧವಾಗಿ ಇರುತ್ತದೆ ಹೃದಯವು ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಈ ಕಿತ್ತಲೆ ಕಾಪಾಡುತ್ತದೆ.

ಶರೀರದಲ್ಲಿ ಪೊಟ್ಯಾಷಿಯಂ ಮಟ್ಟವನ್ನು ಅತಿ ಕಡಿಮೆಯಾದಾಗ ಹೃದಯ ಬಡಿತ ಲಯದಲ್ಲಿ ವ್ಯತ್ಯಾಸವು ಉಂಟಾಗುತ್ತದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ ಹೃದಯವನ್ನು ಕಾಪಾಡುತ್ತದೆ. ಹಾಗೇನೇ ಕಿತ್ತಲೆ ಸಿಪ್ಪೆಯಲ್ಲಿ ಇರುವ ಆಂಟಿಆಕ್ಸಿಡೆಂಟ್ ಗಳು ಮತ್ತು ಇತ್ತಮ ಪ್ರಮಾಣದ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಿಂದ ವಿಶೇಷವಾಗಿ ಉಸಿರಾಟದ ತೊಂದರೆಯಾದ ಅಸ್ತಮಾ ಮೊದಲಾದ ಉಸಿರಾಟದ ಸಂಬಂದಿ ತೊಂದರೆಗಳು ದೂರವಾಗುತ್ತವೆ ಹಾಗಾಗಿ ನಮ್ಮ ದಿನನಿತ್ಯದ ಆಹಾರ ಕ್ರಮಗಳಲ್ಲಿ ಕಿತ್ತಲೆ ಹಣ್ಣನ್ನು ಸೇವಿಸುವುದರಿಂದ ಇಂತಹ ಸಮಸ್ಯೆಯಿಂದ ನಾವು ದೂರ ಇರಬಹುದು ಮತ್ತು ಕಿತ್ತಲೆ ಹಣ್ಣು ಅಷ್ಟೇ ಅಲ್ಲದೆ ಕಿತ್ತಲೆ ಸಿಪ್ಪೆ ಸಹ ಉಪಯೋಗಕ್ಕೆ ಬರುತ್ತವೆ.

ಕೆಲವು ಹಣ್ಣುಗಳಲ್ಲಿ ಮಾತ್ರವಲ್ಲ ಇದರ ಸಿಪ್ಪೆಯು ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಒಂದು ವೇಳೆ ಏನಾದರೂ ನಿಮ್ಮ ಹಲ್ಲುಗಳು ಹಳದಿ ಆಗಿದ್ದರೆ ಈ ಕಿತ್ತಲೆ ಸಿಪ್ಪೆಯನ್ನು ಅರೆದು ಮಾಡಿದ ಮಿಶ್ರಣವನ್ನು ಬಳಸಿ ಹಲ್ಲುಗಳಿಗೆ ಉಜ್ಜುವ ಮೂಲಕ ಹಳದಿ ಬಣ್ಣವನ್ನು ನಾವು ಹೋಗಲಾಡಿಸಬಹುದು. ಹಾಗೇನೇ ಈ ಕಿತ್ತಲೆ ತ್ವಚೆಯನ್ನು ಕಾಪಡುತ್ತದೆ ಬಿಸಿಲಿನ ಕಾರಣದಿಂದ ಚರ್ಮ ಕಪ್ಪದಾಗ ಆ ಸ್ಥಳದಲ್ಲಿ ಕಿತ್ತಲೆಸಿಪ್ಪೆ ಅರೆದು ಲೇಪಿಸುವುದರಿಂದ ಉತ್ತಮ ಪರಿಣಾಮ ನಾವು ಕಾಣಬಹುದು ತುಂಬಾ ಹಳೆಯ ಗಾಯದ ಕಲೆಗಳು ಮತ್ತು ಸುಟ್ಟಿರುವ ಕಲೆಗಳನ್ನು ಇದು ಹೋಗಲಾಡಿಸುತ್ತದೆ ಆದ್ದರಿಂದ ಸ್ನೇಹಿತರೆ ಪ್ರತಿದಿನ ಒಂದು ಚಿಕ್ಕ ಕಿತ್ತಲೆಹಣ್ಣು ತಿನ್ನಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

Comments are closed.