ಆರೋಗ್ಯ

ಮೂತ್ರದ ಕೊಳವೆಗಳಲ್ಲಿ ಕಲ್ಲಿನ ಸಮಸ್ಯೆ ನಿವಾರಣೆಗೆ ಈ ವಿಧಾನ

Pinterest LinkedIn Tumblr

ಮೊದಲು ಮನುಷ್ಯರು ಬಳಸುವ ಆಹಾರ ತರಕಾರಿಗಳು ಎಲ್ಲವೂ ಕೂಡ ನೈಸರ್ಗಿಕವಾಗಿ ಮಳೆ ನೀರಿನ ಆಶ್ರಯದಲ್ಲಿ ಚೆನ್ನಾಗಿ ಬೆಳೆಯು ತ್ತಿದ್ದವು ಅವುಗಳನ್ನು ತಂದು ನಾವು ಸ್ವಚ್ಛಗೊಳಿಸಿ ಉಪಯೋಗಿಸಿದಾಗ ಅವುಗಳು ಸುಲಭವಾಗಿ ನಮ್ಮ ಹೊಟ್ಟೆಯಲ್ಲಿ ಜೀರ್ಣವಾಗು ತ್ತಿದ್ದವು ಆದರೆ ಕಾಲ ಕಳೆದಂತೆ ಮನುಷ್ಯರು ಸಹ ಬದಲಾದರು ಜೊತೆಗೆ ಕೃಷಿ ಚಟುವಟಿಕೆಗಳು ಸಹ ಬದಲಾವನೆ ಹೊಂದಿದವು ಈಗ ಪ್ರತಿಯೊಂದು ತರಕಾರಿ ಹಣ್ಣು ಹಂಪಲು ಮುಂತಾದವುಗಳನ್ನು ಬೆಳೆಯಲು ಸಹ ಕ್ರೀಮಿನಾಶಕ ರಾಸಾಯನಿಕಗಳನ್ನು ಬಳಸುತ್ತಾರೆ ಅವಧಿ ಪೂರ್ವದಲ್ಲಿಯೇ ಕಾಯಿಗಳಿಗೆ ಚುಚ್ಚುಮದ್ದು ಹಾಗೇನೇ ರಾಸಾಯನಿಕಗಳ ಸಹಾಯದಿಂದ ಅವುಗಳು ಹಣ್ಣಾಗುವಂತೆ ಮಾಡುತ್ತಾರೆ ಇದರ ಪರಿಣಾಮವಾಗಿ ಅವುಗಳು ತಮ್ಮ ಸತ್ವವನ್ನು ಕಳೆದುಕೊಂಡು ಮನುಷ್ಯ ಅವುಗಳನ್ನು ಸೇವಿಸಿದಾಗ ಮನುಷ್ಯನಿಗೆ ಅವುಗಳು ಮಾರಕವಾಗಿ ಪರಿಣಮಿಸುತ್ತವೆ ಇಂತಹ ವಸ್ತುಗಳನ್ನು ನಾವು ಬಳಸಿದಾಗ ನಮಗೆ ಎಲ್ಲಿಲ್ಲದ ಕಾಯಿಲೆಗಳು ಅಂಟಿಕೊಳ್ಳುತ್ತವೆ

ಅದರಲ್ಲಿ ಈ ಮೂತ್ರ ಪಿಂಡದ ಕಾಯಿಲೆ ಕೂಡ ಒಂದು ಮನುಷ್ಯನಿಗೆ ತಾನು ತಿನ್ನುವ ಆಹಾರ ಕುಡಿಯುವ ನೀರು ಹೀಗೆ ತಾನು ಬಳಸುವ ವಸ್ತುಗಳಿಂದಲೇ ತಾನು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಾನೆ ಅದರಲ್ಲಿ ಕಡಿಮೆ ನೀರು ಕುಡಿಯುವುದರಿಂದ ಮೂತ್ರ ಪಿಂಡದಲ್ಲಿ ಕಲ್ಲುಗಳು ಆಗುತ್ತವೆ ಹೀಗೆ ಮೂತ್ರ ಪಿಂಡದಲ್ಲಿ ಕಲ್ಲುಗಳು ಆಗಲು ಹಲವಾರು ಕಾರಣಗಳಿವೆ ಹಾಗೇನೇ ನಾವು ಸೇವಿಸುವ ಆಹಾರದಲ್ಲಿ ಬೀಜಗಳು ಇದ್ದರೆ ಅದರಿಂದಲು ಕೂಡ ಮೂತ್ರಪಿಂಡದಲ್ಲಿ ಕಲ್ಲುಗಳು ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಮೂತ್ರ ಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ಆಹಾರದ ಬಗ್ಗೆ ತುಂಬಾ ಕಾಳಜಿ ವಹಿಸಬೇಕು ಬೀಜಗಳಿರುವ ಸೀಬೆಹಣ್ಣು ದಾಳಿಂಬೆ ಬದನೆಕಾಯಿ ಮೊದಲಾದವುಗಳನ್ನು ಸೇವಿಸಬಾರದು ಹಾಗೇನೇ ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿಕೊಳ್ಳಲು ಮತ್ತೊಂದು ಪ್ರಮುಖ ಕಾರಣ ಎಂದರೆ ಕಡಿಮೆ ನೀರು ಕುಡಿಯುವುದು ಆದ್ದರಿಂದ ನಾವು ಆಹಾರಕ್ಕಿಂತ ಹೆಚ್ಚಾಗಿ ನೀರನ್ನು ಸೇವಿಸಬೇಕು ಆದರೆ ನಿಮ್ಮ ದೇಹದಲ್ಲಿ ಅಂದರೆ ಮೂತ್ರಪಿಂಡದಲ್ಲಿ 5 ಮಿಲಿ ಮೀಟರ್ ನಷ್ಟು ಗಾತ್ರದ ಕಲ್ಲು ಇದ್ದರೆ ಅದನ್ನು ಶಸ್ತ್ರ ಚಿಕಿತ್ಸೆ ಮೂಲಕವೇ ತಗೆಯಲು ಸಾಧ್ಯ.

ಆದರೆ ಅದಕ್ಕಿಂತ ನಮ್ಮ ದೇಹದಲ್ಲಿ ಸಣ್ಣ ಗಾತ್ರದ ಕಲ್ಲು ಇದ್ದರೆ ಅದನ್ನು ತೆಗೆಯಲು ಔಷಧಿ ಬಳಸಬಹುದು ಔಷಧಿ ಸೇವಿಸುವ ಮೂಲಕ ಮೂತ್ರ ಪಿಂಡದ ಕಲ್ಲನ್ನು ಕರಗಿಸಬಹುದು ಅದೇ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ಕೂಡ ತುಂಬಾ ಮುಖ್ಯವಾಗುತ್ತದೆ ಮೂತ್ರಪಿಂಡ ಪಿತ್ತಕೋಶ ಮತ್ತು ಮೂತ್ರದ ಕೊಳವೆಗಳಲ್ಲಿ ಕಲ್ಲಿನ ಸಮಸ್ಯೆ ಇರಬಹುದು ಈ ಸಮಸ್ಯೆ ಎದುರಾದರೆ ಸಾಕಷ್ಟು ನೋವನ್ನು ನಾವು ಅನುಭವಿಸಬೇಕಾಗುತ್ತದೆ ಈ ಮೂತ್ರ ಪಿಂಡದ ಕಲ್ಲು ಸಮಸ್ಯೆ ಎಲ್ಲಿಲ್ಲದ ನೋವನ್ನು ಉಂಟು ಮಾಡುತ್ತದೆ ಹಾಗಾಗಿ ನೀವು ಸೇವಿಸುವ ಪ್ರತಿಯೊಂದು ಆಹಾರವು ಕೂಡ ಪೌಷ್ಟಿಕವಾಗಿದ್ದು ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸಿ. ಹೀಗೆ ಮೂತ್ರ ಪಿಂಡದಲ್ಲಿ ಕಲ್ಲುಗಳು ನಮ್ಮ ಬೇಜಾವಾಬ್ದಾರಿಯಿಂದಲೇ ಉತ್ಪತ್ತಿ ಆಗುತ್ತವೆ ಅದರ ಬಗ್ಗೆ ನಾವು ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು.

Comments are closed.