ಕರಾವಳಿ

ಉಡುಪಿಯ ಹೆಬ್ರಿಯಲ್ಲಿ ಬಂದೂಕುಗಳ ಕಳವು!

Pinterest LinkedIn Tumblr

ಉಡುಪಿ: ಕೋವಿ ಮಾರಾಟದ ಅಂಗಡಿಯಿಂದ ನಾಲ್ಕು‌ ಕೋವಿಗಳನ್ನು ಕಳವುಗೈದ ಘಟನೆ ನಡೆದಿದೆ.

ರೋಹಿದಾಸ್ ಶೆಣೈ ಎನ್ನುವವರು ಹೆಬ್ರಿ ಕೆನರಾ ಬ್ಯಾಂಕ್ ಬಳಿ ಲೈಸನ್ಸ್ ಹೊಂದಿರುವ ಮದ್ದುಗುಂಡು ಹಾಗೂ ಬಂದೂಕು ಡಿಪಾಸಿಟ್ ಮತ್ತು ಬಂದೂಕು ಮಾರಾಟದ ಅಂಗಡಿ ಹೊಂದಿದ್ದು ಜ.28 ರಂದು ರಾತ್ರಿ 07:30 ಗಂಟೆಯಿಂದ ಜ. 28ರಂದು ಬೆಳಿಗ್ಗೆನ ಮದ್ಯೆ ಯಾರೋ ಕಳ್ಳರು ಅಂಗಡಿಯ ಮೇಲಿನ ಹೆಂಚನ್ನು ತೆರೆದು ಒಳಗೆ ಹೋಗಿ ಮರದ ಕನ್ನಡಿ ಕಪಾಟಿನಲ್ಲಿ ಸುಮಾರು 2001 ನೇ ಇಸವಿಯಲ್ಲಿ ಡಿಪಾಸಿಟ್ ಇಟ್ಟಿರುವ ಹಳೆಯ SBML 2 ಸಾವಿರ ಮೌಲ್ಯದ 2 ಕೋವಿ, 5 ಸಾವಿರ ಮೌಲ್ಯದ SBBL ಕೋವಿ, 4 ಸಾವಿರ ಮೌಲ್ಯದ 0.177 ಮಾಡೆಲ್ ಏರ್ ಗನ್ ಕಳವು ಮಾಡಿದ್ದು ಕಳವು ಆದ ಕೋವಿಗಳ ಒಟ್ಟು ಮೌಲ್ಯ ಸುಮಾರು 11 ಸಾವಿರ ರೂ ಆಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.