ಆರೋಗ್ಯ

ನೀವು ಮದ್ಯಪಾನ ಸೇವನೆ ಮಾಡುತ್ತೀರ, ಹಾಗದರೆ ಇದನ್ನೊಮ್ಮೆ ಓದಿ..

Pinterest LinkedIn Tumblr

ಮನುಷ್ಯನ ಕೆಟ್ಟ ಅಭ್ಯಾಸಗಳಲ್ಲಿ ಮದ್ಯಪಾನ ಸೇವನೆ ಸಹ ಒಂದು ಇದು ಮನುಷ್ಯನ ಆರೋಗ್ಯವನ್ನು ಕೆಡಿಸುವುದರ ಜೊತೆಗೆ ಮಿತಿಮೀರಿದರೆ ಪ್ರಾಣವನ್ನೇ ತಗೆದು ಬಿಡುತ್ತದೆ ಇಂತಹ ಈ ಮದ್ಯ ಸೇವನೆ ಒಳ್ಳೆಯದಲ್ಲ ಅಂತ ಗೊತ್ತಿದ್ದರೂ ಕೂಡ ಇದನ್ನು ಸೇವಿಸುವುದನ್ನು ಬಿಡುವುದಿಲ್ಲ ಮದ್ಯಪಾನ ಸೇವನೆಯನ್ನು ಬಿಡೋಕೆ ಅಂತು ಆಗುವುದಿಲ್ಲ ಸ್ವಲ್ಪ ಪ್ರಮಾಣದಲ್ಲಿ ಮದ್ಯಪಾನ ಸೇವನೆ ಮಾಡಿದರೆ ಆರೋಗ್ಯಕ್ಕೆ ಅಷ್ಟೇನು ಹಾನಿ ಆಗುವುದಿಲ್ಲ ಆದರೆ ಜನರು ಮದ್ಯಪಾನ ಕಂಡರೆ ಸಾಕು ಕುಡಿದು ತಮ್ಮ ಮೇಲೆ ತಾವೇ ನಿಯಂತ್ರಣ ಇಲ್ಲದ ಹಾಗೆ ಮಾಡಿಕೊಂಡು ಅಪಾಯ ತಂದು ಕೊಳ್ಳುತ್ತಾರೆ ಅಥವಾ ವಾಹನ ಚಾಲನೆ ಮಾಡಿ ಅಪಘಾತವನ್ನು ಮಾಡಿಕೊಳ್ಳುತ್ತಾರೆ ಮದ್ಯಪಾನದ ಮೇಲೆ ಬರೋಬ್ಬರಿ 5 ವರ್ಷ ಅಧ್ಯಯನ ನಡೆಸಿದ ಅಮೆರಿಕದ ಸಂಶೋಧಕರು ಹಲವು ದೇಶಗಳನ್ನು ಸುತ್ತಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ

ಇದಕ್ಕಾಗಿ ಈಗಾಗಲೇ ಮದ್ಯಪಾನದ ಮೇಲೆ 500 ಅಧ್ಯಯನದ ವರದಿಗಳನ್ನು ಪ್ರಕಟಿಸಿದ್ದಾರೆ ಇವುಗಳನ್ನು ಅಜ್ಞಾಪಿಸಿ 650 ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಈ ವೇಳೆ ಸಂಶೋಧಕರಿಗೆ ತಿಳಿದು ಬಂದ ಅಚ್ಚರಿಯ ವಿಷಯವೇನೆಂದರೆ ಜಾಸ್ತಿ ಪ್ರಮಾಣದಲ್ಲಿ ಮದ್ಯಪಾನ ಸೇವಿಸಿದರೆ ಅನಾರೋಗ್ಯ ಆಗುವುದು ಖಚಿತ ಎಂದು ಹೇಳಿದ್ದಾರೆ ಅವರು ಮಾಡಿದ ಸಂಶೋಧನೆಯಲ್ಲಿ ಮದ್ಯಪಾನ ಎಷ್ಟು ಮಾಡಬೇಕು ಎಂದು ಹೇಳಿದ್ದಾರೆ. ಕೇಂಬ್ರಿಡ್ಜ್ ವಿಶ್ವ ವಿದ್ಯಾನಿಲಯದ ಸಂಖ್ಯಾ ಶಾಸ್ತ್ರಜ್ಞ ಡೇವಿಡ್ ಸ್ಪೈಗೇಲ್ ವಾರ ಹೇಳುವಂತೆ ನಮ್ಮ ದೇಹದ ಒಳಗಡೆ ಮದ್ಯಪಾನ ಪ್ರವೇಶಿಸಿದರೆ ಆರೋಗ್ಯಕ್ಕೆ ಮಾರಕ ಅದಕ್ಕೆ ಖನಿಷ್ಠ ಅಥವಾ ಗರಿಷ್ಠ ಎಂಬ ಮಿತಿ ಇರುವುದಿಲ್ಲ ಎಂದು ತಿಳಿಸಿಕೊಟ್ಟಿದ್ದಾರೆ. ವಿಶ್ವದಲ್ಲಿ ಮಾರಾಟವಾಗುವ ಮದ್ಯದ ಒಟ್ಟು ಪ್ರಮಾಣವನ್ನು ಜನಸಂಖ್ಯಯಿಂದ ವಿಭಾಗಿಸಿದರೆ ಪ್ರತಿ ವ್ಯಕ್ತಿ ದಿನಕ್ಕೆ 10 ಗ್ರಾಮ್ ನಷ್ಟು ಶುದ್ಧ ಮದ್ಯಪಾನವನ್ನು ಸೇವಿಸುತ್ತಾನಂತೆ 100 ಗ್ರಾಮ್ ವೈನ್ ಕುಡಿದರೆ 10 ಗ್ರಾಮ್ ಮದ್ಯಪಾನ ದೇಹವನ್ನು ಸೇರುತ್ತದೆ.

ಬಿಯರ್ನಿಂದ 10ಗ್ರಾಮ್ ಮದ್ಯಪಾನ ಸೇರಬೇಕಾದರೆ 340 ಗ್ರಾಮ್ ಬಿಯರ ಮತ್ತು ಕೇವಲ 28 ಗ್ರಾಮ್ ವಿಸ್ಕಿಯಿಂದ 10 ಗ್ರಾಮ್ ಮದ್ಯಪಾನ ದೇಹ ಸೇರುತ್ತದೆ ಪ್ರತಿವರ್ಷ ಹೆಚ್ಚು ಜನರ ಸಾವಿಗೆ ಕಾರಣವಾಗುವ ಜಾಗತಿಕ ಸಮಸ್ಯೆಗಳ ಪೈಕಿ ಮದ್ಯಪಾನ 7 ನೆ ಸ್ಥಾನದಲ್ಲಿದೆ ಮದ್ಯಪಾನ ಸೇವನೆ ಮತ್ತು ಧೂಮಪನಗಳ ನಡುವೆ ಪ್ರಮುಖ ವತ್ಯಾಸಗಳಿವೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ ಆದರೆ ಮದ್ಯಪಾನದ ಬಗ್ಗೆ ಇದೆ ಮಾತನ್ನು ಹೇಳಿದರೆ ಯಾರು ನಂಬುವುದಿಲ್ಲ ನಿಯಮಿತವಾಗಿ ಮದ್ಯಪಾನ ಮಾಡುವುದರಿಂದ ತೊಂದರೆ ಇಲ್ಲ ಎಂಬುದು ಜನರಲ್ಲಿ ನಂಬಿಕೆ ಇದೆ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ನಿಯಮಿತ ಬಿಯರ್ ಸೇವನೆಯಿಂದ ವೃದ್ರೋಗಗಳು ಕಡಿಮೆಯಾಗುತ್ತದೆ ಎಂದು ನಂಬಲಾಗುತ್ತದೆ ಇಲ್ಲ ಮಧ್ಯಪಾನದಿಂದ ದಪ್ಪ ಆಗಬಹುದು ಅಂತ ನಂಬುತ್ತಾರೆ ಆದರೆ ಇವೆಲ್ಲ ಮದ್ಯವ್ಯಾಸನವನ್ನು ಸಮರ್ಥಿಸಿಕೊಳ್ಳಲು ಇರುವ ಕೆಲವು ಕುಂಟು ನೆಪಗಳಷ್ಟೇ ಅಂತ ವರದಿಯಲ್ಲಿ ತಿಳಿಸಿದ್ದಾರೆ.

ಹಾಗಾಗಿ ಮದ್ಯಸೇವನೆ ಎಂಬುದು ಅತಿಯಾಗಿ ಕೂಡ ಇರಬಾರದು ಮಿತವಾಗಿ ಇರುವುದು ಕೂಡ ಸೂಕ್ತವೆ ಅಲ್ಲ ನಿಮಗೆ ಮದ್ಯವನ್ನು ಬಿಡಲು ಸಾಧ್ಯವೇ ಇಲ್ಲ ಎಂದಾದರೆ ಪ್ರತಿದಿನ ಕುಡಿದು ಕುಡಿದು ನಿಮ್ಮ ಯಕೃತ್ ಹಾಳುಮಾಡಿಕೊಳ್ಳುವ ಬದಲು 15 ದಿನಕ್ಕೆ ನಿರ್ಧಿಷ್ಟ ಪ್ರಮಾಣದ ಮದ್ಯಸೇವನೆ ಮಾಡಿರಿ ಜೊತೆಗೆ ಮದ್ಯಪಾನದ ನಂತರ ಹೆಚ್ಚಿನ ನೀರು ಸೇವನೆ ಮಾಡಿರಿ. ನೋಡಿದಿರಲ್ಲ ಸ್ನೇಹಿತರೆ ಇದು ಕೇವಲ ಒಂದು ಅಧ್ಯಯನದಲ್ಲಿ ತಿಳಿದು ಬಂದ ಒಂದು ಸಂಗತಿ ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಹೆಚ್ಚಾಗಿ ಮದ್ಯಪಾನ ಸೇವಿಸುವುದರಿಂದ ಮುಂದೊಂದು ದಿನ ನಾವು ಅನಾರೋಗ್ಯ ವಂತರಾಗುತ್ತಿವಿ ಅಷ್ಟೇ ಅಲ್ಲದೆ ಮನೆಯವರಿಗೂ ತೊಂದರೆಯನ್ನು ಕೊಡುತ್ತೇವೆ ಅದಕ್ಕಾಗಿ ನೀವೇನಾದರೂ ಮದ್ಯ ವ್ಯಾಸನಿಗಳಾದರೆ ಸ್ವಲ್ಪ ಮಿತವಾಗಿ ಮದ್ಯಪಾನವನ್ನು ಸೇವಿಸಿ.

Comments are closed.