ಆರೋಗ್ಯ

ಗರ್ಭಿಣಿಯರ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಈ ವಿಧಾನ

Pinterest LinkedIn Tumblr

ಗರ್ಭಿಣಿಯರ ದೇಹದ ಉಷ್ಣತೆಯನ್ನು ಈ ಆಹಾರ ಕ್ರಮದಿಂದ ಕಡಿಮೆಗೊಳಿಸಬಹುದು. ಗರ್ಭಿಣಿಯರ ದೇಹದ ಉಷ್ಣತೆಯನ್ನು ಕಡಿಮೆ ಮಾಡಬಹುದಾದಂತಹ ಕೆಲವೊಂದು ಸಲಹೆಗಳನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇನೆ, ಆಹಾರ ಕ್ರಮ ಹೇಗೆ ಇದ್ದರೆ ಹುಟ್ಟುವ ಮಗುವಿಗೆ ಒಳಿತು ಮಾಡುತ್ತದೆ, ಮತ್ತು ಯಾವ ಸಲಹೆ ನೀವು ಪಾಲಿಸಬೇಕು ಎಲ್ಲವು ಈ ಲೇಖನದಲ್ಲಿದೆ ಹಾಗಾಗಿ ಇದನ್ನು ಪೂರ್ತಿಯಾಗಿ ಓದಿ. ಯಾವೆಲ್ಲ ಆಹಾರಗಳನ್ನು ಸೇವಿಸುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಬಹುದು ಎಂದರೆ ಮೊದಲನೆಯದಾಗಿ ಎಳನೀರು ಹೌದು ಎಳನೀರನ್ನು ಪ್ರತಿದಿನ ಗರ್ಭಿಣಿಯರು ಒಂದು ಅಥವಾ ವಾರದಲ್ಲಿ 3 ಎಳೆನಿರನ್ನು ಸೇವಿಸುತ್ತಾ ಬಂದರೆ ಗರ್ಭಿಣಿಯರ ದೇಹದ ಉಷ್ಣತೆಯನ್ನು ಕಡಿಮೆ ಮಾಡಬಹುದು.

ಹಾಗೇನೇ ಗರ್ಭಿಣಿಯರು ಪ್ರತಿದಿನ ಹಣ್ಣುಗಳು ಮತ್ತು ನಿಂಬೆಹಣ್ಣಿನ ಪಾನಕ ಕುಡಿಯುವುದು ದೇಹದ ಉಷ್ಣಾಂಶತೆಯನ್ನು ಸಮ ಪ್ರಮಾಣದಲ್ಲಿ ಇರುವುದಕ್ಕೆ ಬಹಳಷ್ಟು ಪರಿಣಾಮಕಾರಿ ಆದ್ದರಿಂದ ಪ್ರತಿದಿನ ಗರ್ಭಿಣಿಯರು ಹಣ್ಣುಗಳನ್ನು ಸೇವಿಸುವುದನ್ನು ಮರೆಯಬಾರದು ಅಥವಾ ವಾರದಲ್ಲಿ 2 ಬಾರಿಯಾದರೂ ನಿಂಬೆ ಹಣ್ಣಿನ ಪಾನಕ ಕುಡಿಯುವುದನ್ನು ಮರೆಯಬಾರದು. ಗರ್ಭಿಣಿಯರು ಪ್ರತಿದಿನ ಆಹಾರಗಳಲ್ಲಿ ಸೊಪ್ಪುಗಳನ್ನು ಹೆಚ್ಚಾಗಿ ಬಳಸಬೇಕು ಅಥವಾ ಸೊಪ್ಪುಗಳ ಸಾಂಬಾರನ್ನು ಸೇವಿಸಬೇಕು ಸೊಪ್ಪುಗಳು ಕಬ್ಬಿಣದ ಶಕ್ತಿ ಒದಗಿಸುತ್ತದೆ ಜೊತೆಗೆ ಮೊಳಕೆ ಕಾಳುಗಳು ಹಸಿರು ಕಾಳುಗಳ ಪಲ್ಲ್ಯಾ ಕೋಸಂಬರಿ ತಿನ್ನುವುದನ್ನು ದೈನಂದಿನ ಆಹಾರಗಳಲ್ಲಿ ಮರೆಯಬಾರದು

ಹಾಗೇನೇ ಕಾಲಿನ ಮೇಲೆ ತಣ್ಣೀರು ಹಾಕುವುದು ಬಹಳಷ್ಟು ಒಳ್ಳೆಯದು ದೇಹದಲ್ಲಿನ ತಾಪಮಾನವನ್ನು ಕಡಿಮೆ ಮಾಡುವುದಕ್ಕೆ ತಣ್ಣೀರು ಬಹಳ ಉಪಯುಕ್ತವಾಗಿದೆ ಅಥವಾ ಒಂದು ದಿನಕ್ಕೆ 3 ರಿಂದ 4 ಬಾರಿ ಕಾಲಿನ ಮೇಲೆ ತಣ್ಣೀರು ಹಾಕುವುದು ಬಹಳ ಒಳ್ಳೆಯದು. ತಲೆಗೆ ಹರಳೆಣ್ಣೆ ಹಚ್ಚುವುದು ದೇಹದಲ್ಲಿನ ತಾಪಮಾನವನ್ನು ಕಡಿಮೆ ಮಾಡುತ್ತದೆ ತಾವು ಧರಿಸುವಂತಹ ಬಟ್ಟೆಗಳು ಕಾಟನ್ ಆಗಿದ್ದರೆ ಒಳ್ಳೆಯದು ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು ಇದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತಾ ಹೋಗುತ್ತದೆ. ಆದ್ದರಿಂದ ತೆಳುವಾದ ಮತ್ತು ಕಾಟನ್ ಬಟ್ಟೆ ಧರಿಸುವುದು ಬಹಳಷ್ಟು ಒಳ್ಳೆಯದು

ಹೆಚ್ಚು ಪ್ಯಾನ್ ಗಾಳಿ ತೆಗೆದುಕೊಳ್ಳಬಾರದು ನೈಸರ್ಗಿಕವಾದ ಗಾಳಿಯನ್ನು ತಮ್ಮ ಮೈಗೆ ತೆಗೆದುಕೊಳ್ಳುವುದು ಬಹಳಷ್ಟು ಒಳ್ಳೆಯದು ನೀರಿನ ಅಂಶ ಇರುವಂತಹ ಹಣ್ಣುಗಳಾದ ಸೌತೆಕಾಯಿ ಕಲ್ಲಂಗಡಿಗಳನ್ನು ಸೇವಿಸುವುದು ಗರ್ಭಿಣಿಯರಿಗೆ ಒಳ್ಳೆಯದು ಸಬ್ಬಕ್ಕಿ ಪಾಯಸ ದೇಹಕ್ಕೆ ತಂಪು ಆದ್ದರಿಂದ ಗರ್ಭಿಣಿಯರು ವಾರದಲ್ಲಿ 2 ಬಾರಿಯಾದರೂ ಸಬ್ಬಕ್ಕಿ ಪಾಯಸ ಅಥವಾ ಸಬ್ಬಕ್ಕಿಗೆ ಸೇರಿದ ಆಹಾರವನ್ನು ಸೇವಿಸುವುದು ತುಂಬಾನೇ ಒಳ್ಳೆಯದು. ಈ ಎಲ್ಲ ಆಹಾರಗಳಿಂದ ಗರ್ಭಿಣಿಯರ ದೇಹದ ಉಷ್ಣತೆಯನ್ನು ಕಡಿಮೆ ಮಾಡಬಹುದು

Comments are closed.