ಆರೋಗ್ಯ

ಕೆಲವೊಂದು ಖಾಯಿಲೆಯ ಮಾತ್ರೆಗಳನ್ನು ನಾವು ಇದರ ಜೊತೆ ಸೇವಿಸಿದರೆ ಉತ್ತಮ

Pinterest LinkedIn Tumblr

ಇಂದಿನ ಒತ್ತಡದ ಯುಗದಲ್ಲಿ ನಮ್ಮ ಜೀವನ ಶೈಲಿ ತುಂಬಾ ಬದಲಾವಣೆಯನ್ನು ಹೊಂದಿದೆ ಒಂದು ಸಣ್ಣ ಪುಟ್ಟ ನೋವಾದರೂ ಕೂಡ ನಾವು ವೈದ್ಯರ ನೆರವಿಗೆ ಹೋಗುತ್ತೇವೆ ಆದರೆ ವೈದ್ಯರು ನಮ್ಮನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಿ ಜೊತೆಗೆ ಕೆಲವೊಂದಿಷ್ಟು ಮಾತ್ರೆಗಳನ್ನು ಕೊಡುತ್ತಾರೆ ಆ ಮಾತ್ರೆಗಳನ್ನು ನಾವು ಹೇಗೆ ಸೇವಿಸಬೇಕು ಎಂಬುದು ಕೆಲವು ಜನರಿಗೆ ಗೊಂದಲ ಉಂಟು ಮಾಡಿರುತ್ತದೆ ಆದ್ದರಿಂದ ಅವರವರ ಅನುಕೂಲಕ್ಕೆ ತಕ್ಕಂತೆ ಮಾತ್ರೆಯನ್ನು ಸೇವಿಸುತ್ತಾರೆ. ಮಾತ್ರೆಯನ್ನು ಹೇಗೆ ಸೇವಿಸಬೇಕು ಎನ್ನುವುದು ಕೆಲವರಿಗೆ ಒಂದು ಸಮಸ್ಯೆಯಾಗಿ ಕಾಡುತ್ತಿರುತ್ತದೆ ಕೆಲವರು ನೀರಿನ ಜೊತೆ ಮಾತ್ರೆ ಸೇವಿಸಿದರೆ ಮತ್ತೆ ಕೆಲವರು ಯಾವುದಾದರೂ ಹಣ್ಣಿನ ರಸದ ಜೊತೆ ಮಾತ್ರೆಯನ್ನು ಸೇವಿಸುತ್ತಾರೆ ಮಾತ್ರೆ ಕಹಿಯಾಗಿ ಇರುವುದರಿಂದ ಹಣ್ಣಿನ ರಸದ ಜೊತೆ ಸೇವಿಸಿದರೆ ಆ ಕಹಿ ಗೊತ್ತಾಗುವುದಿಲ್ಲ ಎನ್ನುವ ಕಾರಣಕ್ಕೆ ಅನೇಕರು ಹಣ್ಣಿನ ರಸವನ್ನು ಬಳಸಿ ಮಾತ್ರೆಯನ್ನು ಸೇವಿಸುತ್ತಾರೆ

ಆದರೆ ಮಾತ್ರೆ ಸೇವನೆಗೆ ಯಾವುದು ಒಳ್ಳೆಯದು ಅಂತ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಹೇಳಿದೆ ಹಾಗಾದರೆ ಪ್ರಿಯ ಓದುಗರೇ ಮಾತ್ರೆಯನ್ನು ಯಾವುದರ ಜೊತೆ ಸೇವಿಸಬೇಕು ಮತ್ತು ಯಾವುದರ ಜೊತೆ ಸೇವಿಸಬಾರದು ಎಂಬುದನ್ನು ಈಗ ಈ ಒಂದು ಲೇಖನದಲ್ಲಿ ನೋಡೋಣ ಬನ್ನಿ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರಕಾರ ಮಾತ್ರೆ ಸೇವನೆಗೆ ನೀರು ಅತ್ಯುತ್ತಮ ಎಂದು ಹೇಳಲಾಗಿದೆ ರಕ್ತದೊತ್ತಡ ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಮಾತ್ರೆ ಜೊತೆ ಹಣ್ಣಿನ ರಸವನ್ನು ಸೇವನೆ ಮಾಡಬಾರದು ಕಿತ್ತಳೆ ಹಾಗೂ ಸೇಬು ಹಣ್ಣಿನ ರಸವು ಕೂಡ ದೇಹದೊಳಗೆ ಮಾತ್ರೆ ತನ್ನ ಪ್ರಭಾವ ಬಿರುವುದನ್ನು ತಡೆಯುತ್ತದೆ. ಸಂಶೋಧನೆಯೊಂದರ ಪ್ರಕಾರ ದ್ರಾಕ್ಷಿ ಕಿತ್ತಳೆ ಹಾಗೂ ಸೇಬು ಹಣ್ಣಿನ ರಸಗಳು ಕ್ಯಾನ್ಸರ್ ಔಷಧಿಗಳ ಪ್ರಭಾವವನ್ನು ಕಡಿಮೆ ಮಾಡುತ್ತವೆ ಹಾಗಾಗಿ ಮಾತ್ರೆ ಸೇವನೆ ವೇಳೆ ನೀರನ್ನು ಮಾತ್ರ ಸೇವಿಸಿ ಎನ್ನುತ್ತಾರೆ ವೈದ್ಯರು.

ನೀರು ನಮ್ಮ ದೇಹಕ್ಕೆ ಅತ್ಯಂತ ಅಮೂಲ್ಯವಾದ ಒಂದು ವಸ್ತು ಎಂದರೆ ತಪ್ಪಾಗಲಾರದು ಆದ್ದರಿಂದ ನೀರು ಎಷ್ಟು ಪ್ರಮಾಣದಲ್ಲಿ ನಾವು ಸೇವಿಸುತ್ತೇವೋ ನಮ್ಮ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು ಹಾಗಾಗಿ ನೀರಿನಿಂದ ಅಂದರೆ ನೀರಿನ ಜೊತೆಗೆ ನಾವು ಮಾತ್ರೆ ಸೇವಿಸುವುದರಿಂದ ಮಾತ್ರೆ ನಮ್ಮ ದೇಹದಲ್ಲಿ ತನ್ನ ಕೆಲಸವನ್ನು ಮಾಡಲು ಯಾವುದೇ ವಿಧವಾದ ತೊಂದರೆ ಕೂಡ ಆಗುವುದಿಲ್ಲ ಆದ್ದರಿಂದ ನೀರಿನ ಜೊತೆಗೆ ಮಾತ್ರೆ ಸೇವಿಸಬೇಕು ಎಂದು ಸಂಶೋಧನೆಗಳು ತಿಳಿಸಿವೆ. ಆದ್ದರಿಂದ ಸ್ನೇಹಿತರೆ ನೀವು ಸಹ ಈ ಹಿಂದೆ ಹಣ್ಣಿನ ರಸವನ್ನು ಬಳಸಿ ಅದರ ಜೊತೆಗೆ ಮಾತ್ರೆಯನ್ನು ಸೇವಿಸುತ್ತಿದ್ದರೆ ಇನ್ನು ಮುಂದೆ ಅದನ್ನು ನಿಲ್ಲಿಸಿ ನೀರಿನ ಜೊತೆಗೆ ಮಾತ್ರೆಯೆನ್ನು ಸೇವಿಸಿ ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

Comments are closed.