ಮಂಗಳೂರು, ಜನವರಿ.27: ಹಿರಿಯ ಸಹಕಾರಿ, ಸಜ್ಜನ ರಾಜಕಾರಣಿ, ಮಾಜಿ ಸಚಿವ, ಜೆಡಿಎಸ್ ಮುಖಂಡ ಅಮರನಾಥ ಶೆಟ್ಟಿ ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.
ಅವರಿಗೆ 81 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಎರಡು ವಾರಗಳ ಹಿಂದೆ ನಗರದ ಎ.ಜೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಕರಾವಳಿಯ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಅಮರನಾಥ ಶೆಟ್ಟಿ 10 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, ಈ ಪೈಕಿ 3 ಬಾರಿ ಗೆಲುವು ಸಾಧಿಸಿದ್ದರು. ಗೆಲುವು ಕಂಡ ಮೂರು ಬಾರಿಯೂ ಅವರು ಸಚಿವರಾಗಿದ್ದರು. ಜನತಾ ಪಕ್ಷದಿಂದ 1983 ಮತ್ತು 1985ರಲ್ಲಿ ಶಾಸಕರಾಗಿದ್ದ ಶೆಟ್ಟಿ, 1994ರಲ್ಲಿ ಜನತಾ ದಳದಿಂದ ಶಾಸಕರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.


Comments are closed.