ಆರೋಗ್ಯ

ಈ ಹೊಗೆಯನ್ನು ಸೇವಿಸುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ.

Pinterest LinkedIn Tumblr

ಮನೆ ಸುತ್ತಲಿನ ಕಲುಷಿತ ವಾತಾವರಣ ಹಾಗೇನೇ ಮನೆಯಲ್ಲಿ ಸ್ವಚ್ಛತೆ ಇಲ್ಲದೆ ಇರುವುದು ಮನೆ ಸುತ್ತ ಮುತ್ತ ನೀರು ಹರಿಯುತ್ತಿರುವುದು ಹೀಗೆ ಹಲವಾರು ಕಾರಣಗಳಿಂದ ಸೊಳ್ಳೆಗಳು ಮನೆಯನ್ನು ಪ್ರವೇಶಿಸುತ್ತವೆ ಹಾಗೇನೇ ಅವು ಜನರನ್ನು ಹುಡುಕಿಕೊಂಡು ಬಂದು ಕಚ್ಚುತ್ತವೆ ಮನುಷ್ಯರ ಮೈ ಮೇಲೆ ಕುಳಿತುಕೊಂಡು ಕಚ್ಚಿ ನಮ್ಮ ರಕ್ತವನ್ನು ಕುಡಿಯುತ್ತವೆ ಈ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಹಿಂದಿನ ಕಾಲದಲ್ಲಿ ಜನರು ಮನೆಯ ಮುಂದೆ ಹಸಿ ಹುಲ್ಲಿನಿಂದ ಹೊಗೆಯನ್ನು ಹಾಕುತ್ತಿದ್ದರು ಆದರೆ ಈಗ ಕಾಲ ಬದಲಾದಂತೆ ಜನರು ಬದಲಾಗಿದ್ದಾರೆ ಹಾಗಾಗಿ ಸೊಳ್ಳೆಗಳನ್ನು ಓಡಿಸಲು ಜನರು ಸೊಳ್ಳೆ ಬತ್ತಿ ಅಥವಾ ಸೊಳ್ಳೆ ಮಷಿನ್ ಗಳನ್ನು ಬಳಸುತ್ತಾರೆ ಇದರಿಂದ ಸೊಳ್ಳೆಗಳು ಸಾಯುತ್ತವೆ ಅಥವಾ ಆ ಸ್ಥಳವನ್ನು ಬಿಟ್ಟು ಹೊರಗೆ ಹೋಗುತ್ತವೆ ಆದರೆ

ಇಲ್ಲಿ ಒಂದು ಅಚ್ಚರಿಯ ಸಂಗತಿ ಎಂದರೆ ಈ ಸೊಳ್ಳೆ ಬತ್ತಿ ಅಥವಾ ಸೊಳ್ಳೆ ಮಸೀನ್ ಗಳ ಹೊಗೆಯಿಂದ ನಮ್ಮ ಆರೋಗ್ಯಕ್ಕೆ ತುಂಬಾ ಅಪಾಯವಿದೆ ಆದರೆ ಜನರು ಇದರ ಬಗ್ಗೆ ಏನು ಯೋಚನೆ ಮಾಡದೆ ಕೇವಲ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ತಮ್ಮ ಜೀವಕ್ಕೆ ಅಪಾಯವನ್ನು ತಂದುಕೊಳ್ಳುತ್ತಾರೆ ಹಾಗಾದರೆ ಈ ಸೊಳ್ಳೆ ಬತ್ತಿಯ ಹೊಗೆಯಿಂದ ಮನುಷ್ಯನಿಗೆ ಯಾವ ರೀತಿಯ ಅಪಾಯ ಇದೆ ಎನ್ನುವುದನ್ನು ಇವತ್ತಿನ ಈ ಒಂದು ಉಪಯುಕ್ತವಾದ ಲೇಖನದಲ್ಲಿ ನಾವು ತಿಳಿಯೋಣ ಬನ್ನಿ. ಸೊಳ್ಳೆ ಬತ್ತಿಯನ್ನು ಉರಿಸಿ ಅದರ ಹೊಗೆಯನ್ನು ನಾವು ಉಸಿರಾಟದ ಮೂಲಕ ಸೇವಿಸುವುದರಿಂದ ನಮಗೆ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ ಸಂಶೋಧನೆಗಳ ಪ್ರಕಾರ ರಾಸಾಯನಿಕಗಳನ್ನು ಬತ್ತಿಗಳಲ್ಲಿ ಬಳಸಲಾಗುತ್ತದೆ ಇದನ್ನು ಬಗ್ ಸ್ಪ್ರೇ ಗಳಲ್ಲಿಯೂ ಕೂಡ ಬಳಸಲಾಗುತ್ತದೆ ತಜ್ಞರ ಪ್ರಕಾರ ಸೊಳ್ಳೆ ಓಡಿಸಲು ಸೋಳ್ಳೆ ಬತ್ತಿಗಳನ್ನು ಬಳಸುವ ಬದಲು ನಿಮ್ಮ ದೇಹಕ್ಕೆ ಅಪಾಯಕಾರಿ ಅಲ್ಲದಂತಹ ಬೇರೆ ವಿಧಾನಗಳನ್ನು ಬಳಸಬೇಕು ಈ ಸೊಳ್ಳೆ ಬತ್ತಿಯಿಂದ ಬರುವಂತಹ

ಹೋಗೆಯಿಂದ ಗರ್ಭಿಣಿ ಮಹಿಳೆ ವಯಸ್ಕರು ಮತ್ತು ಮಕ್ಕಳ ಮೇಲೆ ಗಂಭೀರವಾದ ಕೆಟ್ಟ ರೀತಿಯ ಪರಿಣಾಮವನ್ನು ಬೀರುತ್ತದೆ ಹೀಗಾಗಿ ಸೊಳ್ಳೆ ಬತ್ತಿ ಹಚ್ಚಿದ ನಂತರ ಅದರಿಂದ ಸ್ವಲ್ಪ ಹೊತ್ತು ದೂರವಿರಬೇಕು ಕೋಣೆಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆದು ಇಡಬೇಕು ಇದರಿಂದ ಸೊಳ್ಳೆ ಬತ್ತಿಯ ಹೊಗೆ ಬಾಗಿಲು ಮತ್ತು ಕಿಟಕಿಯ ಮೂಲಕ ಹೊರಗೆ ಹೋಗುತ್ತದೆ ಇದರಿಂದ ನಮ್ಮ ಆರೋಗ್ಯವು ಕೂಡ ಚೆನ್ನಾಗಿ ಇರುತ್ತದೆ ನೀವು ಕೂಡ ಇನ್ನು ಮುಂದೆ ಸೊಳ್ಳೆ ಬತ್ತಿಯನ್ನು ಅಥವಾ ಸೊಳ್ಳೆ ಮಷಿನ್ ಗಳನ್ನು ಹಚ್ಚಿದ ನಂತರ ಅರ್ಧ ಗಂಟೆ ಬಿಟ್ಟು ಕೋಣೆಯ ಒಳಗೆ ಹೋಗಿ ಆಗ ಕೊಣೆಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಡಿ ಇದರಿಂದ ಸೊಳ್ಳೆ ಬತ್ತಿಯಿಂದ ಆಗುವ ತೊಂದರೆಯನ್ನು ತಪ್ಪಿಸಿಕೊಳ್ಳಿ

Comments are closed.