ಕರ್ನಾಟಕ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಿಜಗುಣಾನಂದ ಶ್ರೀ, ಪ್ರಕಾಶ್ ರೈ ಸೇರಿದಂತೆ 15 ಮಂದಿಗೆ ಕೊಲೆ ಬೆದರಿಕೆ

Pinterest LinkedIn Tumblr

ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬೆಳಗಾವಿ ಬೈಲೂರು ಮಠದ ನಿಜಗುಣಾನಂದ ಶ್ರೀ,ಗಳು ಸೇರಿದಂತೆ ಹದಿನೈದು ಮಂದಿಗೆ ಅಪರಿಚಿತರಿನಿಂದ ಜೀವ ಬೆದರಿಕೆ ಪತ್ರ ಬಂದಿದೆ ಎಂದು ವರದಿಯಾಗಿದೆ.

ಕುಮಾರಸ್ವಾಮಿ, ನಿಜಗುಣಾನಂದ ಶ್ರೀ, ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ದಿನೇಶ್ ಅಮೀನ್ ಮಟ್ಟು, ಪ್ರಕಾಶ್ ರೈ, ಬಿಟಿ ಲಲಿತಾ ನಾಯಕ್, ಬೃಂದಾ ಜಾರಟ್, ಮತ್ತೂ ಅನೇಕರಿಗೆ ಇದೇ ಜನವರಿ 29ರಂದು “ಸಂಹಾರ” ಮಾಡುವೆನೆಂದು ದಾವಣಗೆರೆಯಿಂದ ಅಪರಿಚಿತನೊಬ್ಬ ಪತ್ರ ರವಾನಿಸಿದ್ದಾನೆ.

ನಿಜಗುಣಾನಂದ ಶ್ರೀಗಳಿಗೆ ಬಂದ ಪತ್ರದಲ್ಲಿ “ಶ್ರೀಗಳೇ ನಿಮ್ಮನ್ನೂ, ನಿಮ್ಮೊಡನಿರುವ ಧರ್ಮದ್ರೋಹಿಗಳನ್ನು ದೇಶದ್ರೋಹಿಗಳನ್ನು ಇದೇ ಜನವರಿ ೨೯ರಂದು ಸಂಹಾರ ಮಾಡಲು ಮಹೂರ್ತ ನಿಗದಿಯಾಗಿದೆ. ನಿಮ್ಮ ಅಂತಿಮ ಯಾತ್ರೆಗೆ ಸಿದ್ದವಾಗಿರಿ, ನೀವು ಮಾತ್ರವಲ್ಲ ಸ್ವಾಮಿಗಳೇ ನಿಮ್ಮೊಡನೆ ಅಂತಿಮ ಯಾತ್ರೆಗೆ ಇವರನ್ನೂ ಸಿದ್ದಗೊಳಿಸಿ, ಇವರೆಲ್ಲರಿಗೆ ನೀವೇ ಹೇಳಿರಿ” ಎಂದು ಹದಿನೈದು ಮಂದಿಯ ಹೆಸರನ್ನು ಸೂಚಿಸಲಾಗಿದೆ.

ಇದಲ್ಲದೆ ಕಡೆಯಲ್ಲಿ ಇವರನ್ನೆಲ್ಲಾ ಸಂಹಾರ ಮಾಡಿಯೇ ಮಾಡುವೆವು ಎಂದೂ ಸೂಚಿಸಿದೆ.

Comments are closed.