ಆರೋಗ್ಯ

ರಕ್ತದ ಕೊರತೆ, ಅನೇಮಿಯದಿಂದ ಬಳಲುತ್ತಿರುವವರು ಕರಿಬೇವಿನ ಎಲೆ ತಿಂದರೆ ಆರೋಗ್ಯಕ್ಕೆ ಉತ್ತಮ

Pinterest LinkedIn Tumblr

 ಕರಿಬೇವನ್ನು ನಾವು ದಿನ ನಿತ್ಯದ ಅಡುಗೆಯಲ್ಲಿ ಅಡುಗೆಯ ರುಚಿ ಹೆಚ್ಚಿಸಲು ಒಗ್ಗರಣೆ ರೂಪದಲ್ಲಿ ಬಳಸುತ್ತೇವೆ ಇದರಿಂದ ಅಡುಗೆಗೆ ಒಳ್ಳೆಯ ಘಮ ಬರುವುದರ ಜೊತೆಗೆ ನಮ್ಮ ಆರೋಗ್ಯಕ್ಕೂ ಕೂಡ ಹಲವಾರು ಲಾಭಗಳಿವೆ ಹಾಗಾದರೆ ಈ ಕರಿಬೇವಿನಿಂದ ಆಗುವ ಲಾಭಗಳು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಹಾಗೇನೆ ಈ ಕರಿಬೇವು ಕೇವಲ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಗುಣಗಳನ್ನು ಹೊಂದಿರುವುದಷ್ಟೇ ಅಲ್ಲದೆ ನಮ್ಮ ಕೂದಲಿನ ಆರೈಕೆಗೂ ಸಹ ಉತ್ತಮ ಗುಣಮಟ್ಟದ ಪೋಷಣೆಯನ್ನು ನೀಡುತ್ತದೆ. ಹಾಗಾದರೆ ಯಾವ ರೀತಿ ಉಪಯೋಗಿಸುವುದರಿಂದ ಇದು ನಮ್ಮ ಆರೋಗ್ಯಕ್ಕೂ ಮತ್ತು ನಮ್ಮ ಕೂದಲಿಗೂ ಒಳ್ಳೆಯದು ಎನ್ನುವುದನ್ನು ನೋಡುವುದಾದರೆ

ಕರಿಬೇವಿನ ಎಲೆಗಳಲ್ಲಿರುವ ಆರೋಗ್ಯಕಾರಿ ಗುಣಗಳನ್ನು ಸ್ವಲ್ಪ ಮಟ್ಟಿಗೆಯಾದರು ಎಲ್ಲರೂ ತಿಳಿದಿರುತ್ತಾರೆ ಈ ಲೇಖನದಲ್ಲಿ ನಾವು ಕರಿಬೇವಿನ ಎಲೆಗಳನ್ನು ಬಳಸಿ ಈ ಸಮಸ್ಯೆಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬುದನ್ನು ಈಗ ತಿಳಿಯೋಣ ಬನ್ನಿ ದೇಹದಲ್ಲಿನ ಬೊಜ್ಜು ನಿವಾರಣೆ ಮಾಡಿಕೊಳ್ಳಬೇಕು ಎನ್ನುವವರು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಗೆ 5 ರಿಂದ 6 ಕರಿಬೇವಿನ ತಾಜಾ ಎಲೆಗಳನ್ನು ಅಗೆದು ತಿಂದರೆ ದೇಹದಲ್ಲಿನ ಅನಗತ್ಯ ಬೊಜ್ಜನ್ನು ನಿವಾರಿಸಿಕೊಳ್ಳಬಹುದು ಹಾಗೂ ದೇಹದ ತೂಕ ಕಡಿಮೆಯಾಗುತ್ತದೆ ಜೊತೆಗೆ ಮಧುಮೇಹ ಇರುವವರು ಈ ಕರಿಬೇವಿನ ಎಲೆಗಳನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ತಿನ್ನುವುದರಿಂದ ಮಧುಮೇಹ ನಿಯಂತ್ರಣಗೊಳ್ಳುತ್ತದೆ ಕರಿಬೇವಿನ ಎಲೆಗಳಲ್ಲಿ ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಅಂಶಗಳಿವೆ ಇದು ಗರ್ಭಿಣಿಯರಿಗೆ ಹೆಣ್ಣುಮಕ್ಕಳಿಗೆ ತುಂಬಾನೇ ಒಳ್ಳೆಯದು ಸಾಮಾನ್ಯವಾಗಿ ರಕ್ತದ ಕೊರತೆ ಅನೇಮಿಯದಿಂದ ಬಳಲುತ್ತಿರುವವರು ಕರಿಬೇವಿನ ಎಲೆಗಳನ್ನು ಎಷ್ಟು ತಿನ್ನುತ್ತಾರೋ ಅಷ್ಟು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು.

ಒಂದುವರೆ ಚಮಚದಷ್ಟು ಕರಿಬೇವಿನ ಎಲೆಯ ರಸ ಮತ್ತು ಒಂದು ಚಮಚ ನಿಂಬೆ ರಸವನ್ನು ಮತ್ತು ಸ್ವಲ್ಪ ಸಕ್ಕರೆಯನ್ನು ಸೇರಿಸಿ ಸೇವಿಸುವುದರಿಂದ ಅಜೀರ್ಣ ಕ್ರಿಯೆ ಹಾಗೂ ದೇಹದಲ್ಲಿನ ಜಿಡ್ಡು ಪಧಾರ್ಥಗಳ ಸೇವನೆಯಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸುತ್ತದೆ ಊಟದಲ್ಲಿ ಕಂಡುಬರುವ ಕರಿಬೇವಿನ ಎಲೆಗಳನ್ನು ತಿನ್ನದೆ ಪಕ್ಕಕ್ಕೆ ಎತ್ತಿಟ್ಟು ಊಟ ಮಾಡುವ ಅಭ್ಯಾಸವಿರುವವರು ಅದನ್ನು ಬಿಸಾಡದೆ ಸೇವನೆ ಮಾಡುವುದು ತುಂಬಾ ಒಳ್ಳೆಯದು ಕರಿಬೇವಿನ ಎಲೆಯ ಸೇವನೆಯಿಂದ ಮೂತ್ರಪಿಂಡ ಯಕೃತ್ ನ ಆರೋಗ್ಯವನ್ನು ವೃದ್ದಿಸಿಕೊಳ್ಳಬಹುದಾಗಿದೆ. ಕರಿಬೆವನ್ನು ನಿಯಮಿತವಾಗಿ ನಮ್ಮ ಆಹಾರದಲ್ಲಿ ಸೇವಿಸುವುದು ತುಂಬಾ ಒಳ್ಳೆಯದು ಇದರಿಂದ ಅನೇಕ ರೀತಿಯ ಕಾಯಿಲೆಗಳಿಂದ

ನಾವು ಮುಕ್ತಿಯನ್ನು ಪಡೆಯಬಹುದು ಹಾಗೇನೇ ಕರಿಬೇವು ಕಣ್ಣಿಗೆ ಕೂಡ ತುಂಬಾ ಉಪಯುಕ್ತವಾದುದು ಈ ಕರಿಬೆವನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆ ಎಣ್ಣೆಯನ್ನು ಸೋಸಿ ಶೇಖರಿಸಿ ಇಟ್ಟುಕೊಂಡು ಪ್ರತಿದಿನ ತಲೆ ಕೂದಲಿಗೆ ಹಚ್ಚುವುದರಿಂದ ತಲೆ ಕೂದಲು ಕಪ್ಪಾಗಿ ಮತ್ತು ಸುಂದರವಾಗಿ ಹೊಳೆಯಲು ಪ್ರಾರಂಭಿಸುತ್ತವೆ. ಹೀಗೆ ಕರಿಬೇವಿನಿಂದ ಹಲವಾರು ಆರೋಗ್ಯ ಉಪಯೋಗಗಳನ್ನು ನಾವು ಪಡೆಯಬಹುದು. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೋತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ
===============
ಸ್ನೇಹಿತರೆ ನಿಮಗೆ ಗೊತ್ತಿರಬಹುದು ಭಾರತದ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಹಾಲಿನ ಬಗ್ಗೆ ವರ್ಲ್ಡ್ ಹೆಲ್ತ್ ಆರ್ಗಾನೈಸೇಶನ್ ಏನು ಹೇಳಿದೆ ಎಂದು ಅದರ ಗುಣ ಮಟ್ಟ ಪ್ರಮಾಣದ ಬಗ್ಗೆ ಸಾಕಷ್ಟು ಚರ್ಚೆ ಕೂಡ ಆಗಿದ್ದವು ಆದರೆ ನಾವು ಈ ಲೇಖನದಲ್ಲಿ ತೆಂಗಿನ ಹಾಲಿನ ಪ್ರಯೋಜನಗಳ ಬಗ್ಗೆ ತಿಳಿಯೋಣ. ತೆಂಗಿನ ಹಾಲನ್ನು ದಿನಾಲೂ ಸಪ್ಲಿಮೆಂಟ್ ತರಹ ತೆಗೆದುಕೊಳ್ಳಬಹುದು ತೆಂಗಿನ ಹಾಲಿನಲ್ಲಿ ಪೊಟ್ಯಾಷಿಯಂ ಮೆಗ್ನೀಷಿಯಂ ವಿಟಮಿನ್ ಬಿ ವಿಟಮಿನ್ ಸಿ ವಿಟಮಿನ್ ಇ ಕಾಪರ್ ಐರನ್ ಜಿಂಕ್ ಮತ್ತು ಸೆಲೆನಿಯಮ್ ಆಂಟಿ ಆಕ್ಸಿಡೆಂಟ್ ಹೇರಳವಾಗಿ ಇವೆ ಹಾಗೂ ತೆಂಗಿನ ಹಾಲಿನಲ್ಲಿ ಆಂಟಿ ಫಂಗಲ್ ಆಂಟಿ ಬ್ಯಾಕ್ಟೀರಿಯಾ ಆಂಟಿ ಇನ್ಫ್ಲಾಮೇಟರಿ ಗುಣಗಳು ಇವೆ ತೆಂಗಿನ ಹಾಲು ಲ್ಯಾಕ್ಟೋಸ್ ಫ್ರೀ ಹಾಲಾಗಿದೆ ಕೆಲವರಿಗೆ ಲ್ಯಾಕ್ಟೋಸ್ ಅಸಹಿಷ್ಣು ಸಮಸ್ಯೆ ಇರುತ್ತದೆ.

ಅಂತವರಿಗೆ ಹಾಲಿನ ಅಲರ್ಜಿ ಇರುತ್ತದೆ ಅಂತವರು ಪ್ಯಾಕೆಟ್ ಹಾಲು ಕುಡಿಯುವುದಕ್ಕಿಂತ ತೆಂಗಿನ ಹಾಲು ಮಾಡಿ ಕುಡಿಯಿರಿ ಇದರಲ್ಲಿ ಲ್ಯಾಕ್ಟೋಸ್ ಇರುವುದಿಲ್ಲ ಯಾವುದೇ ರೀತಿಯ ಹಾಲಿನ ಅಲರ್ಜಿ ಮಾಡುವುದಿಲ್ಲ ಹಾಗೆಯೇ ತೆಂಗಿನ ಹಾಲಿನಲ್ಲಿ ಕಡಿಮೆ ಕೊಬ್ಬು ಇರುತ್ತದೆ ಇದು ಲೋ ಫ್ಯಾಟ್ ಮಿಲ್ಕ್ ಆಗಿದೆ ಇದರಲ್ಲಿ ಯಾವುದೇ ರೀತಿಯ ಕೆಟ್ಟ ಕೊಬ್ಬು ಇರುವುದಿಲ್ಲ ಇದರಲ್ಲಿ ಒಳ್ಳೆಯ ಫ್ಯಾಟಿ ಆಸಿಡ್ ಇದೆ ಇದು ನಮ್ಮ ಹೃದಯದ ಆರೋಗ್ಯ ಮತ್ತು ನಮ್ಮ ಮೆದುಳು ಆರೋಗ್ಯಕ್ಕೆ ಉಪಯೋಗಕಾರಿ ಆಗಿದೆ ತೆಂಗಿನ ಹಾಲಿನಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಫ್ಯಾಕ್ಟರ್ ಇರುವುದರಿಂದ ನಮ್ಮ ದೇಹವನ್ನು ಇನ್ಫೆಕ್ಷನ್ ವಿರುದ್ಧ ಕಾಪಾಡುತ್ತದೆ.

ಡಯಾಬಿಟಿಕ್ ರೋಗಿಗಳಿಗೆ ಅಥವಾ ಶುಗರ್ ರೋಗಿಗಳಿಗೆ ತೆಂಗಿನ ಹಾಲು ಬೆಸ್ಟ್ ಎಂದು ಹೇಳಬಹುದು ಇದು ನಮ್ಮ ರಕ್ತದಲ್ಲಿ ಶುಗರ್ ಲೆವೆಲ್ ಅನ್ನು ಕಾಪಾಡುತ್ತದೆ. ಹಾಗೆಯೇ ತೆಂಗಿನ ಹಾಲಿನಲ್ಲಿ ಇರುವ ಜಿಂಕ್ ಮತ್ತು ಐರನ್ ನ್ಯೂಟ್ರಿಷನ್ ಗಳು ಅನೀಮಿಯಾ ಕಾಯಿಲೆಗಳನ್ನು ಬರದಂತೆ ನೋಡಿಕೊಳ್ಳುತ್ತದೆ ಅಂದರೆ ರಕ್ತ ಹೀನತೆಗೆ ಕಾಯಿಲೆಗಳನ್ನು ಗುಣ ಪಡಿಸುತ್ತದೆ ತೆಂಗಿನ ಹಾಲನ್ನು ಆಗಾಗ ಕುಡಿಯುವುದರಿಂದ ನಮ್ಮ ದೇಹದ ತೂಕ ಆರೋಗ್ಯಕರವಾಗಿ ಇರುತ್ತದೆ.

ಹಾಗೆಯೇ ತೆಂಗಿನ ಹಾಲಿನಲ್ಲಿ ಇರುವ ಆಂಟಿ ಇನ್ಫ್ಲಾಮೆಟರಿ ಗುಣಗಳು ಜಾಯಿಂಟ್ ಪ್ರಾಬ್ಲಮ್ ಅರ್ಥರಿಟೀಸ್ ಈ ರೀತಿಯ ಕಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ ತೆಂಗಿನ ಹಾಲಿನಲ್ಲಿ ಇರುವ ಲೋರಿಕ್ ಆಸಿಡ್ ಗಳು ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ತೆಂಗಿನ ಹಾಲು ಕುಡಿಯುವ ಅಭ್ಯಾಸದಿಂದ ನಮ್ಮ ದೇಹದಲ್ಲಿ ಇರುವ ಹಾರ್ಮೋನ್ ಗಳು ಆರೋಗ್ಯಕರ ವಾಗಿ ಕೆಲಸ ಮಾಡುತ್ತದೆ. ಹಾಗೆಯೇ ತೆಂಗಿನ ಹಾಲು ಕುಡಿಯುವುದರಿಂದ ಮಲಬದ್ಧತೆ ದಯೇರಿಯ ಹೊಟ್ಟೆ ಅಲ್ಸರ್ ಅಸಿಡಿಟಿ ಗ್ಯಾಸ್ಟ್ರಿಕ್ ಅಂತಹ ಸಮಸ್ಯೆಗಳು ದೂರ ಇರುತ್ತದೆ ಹಾಗೆಯೇ ಸ್ಮಾಲ್ ಇಂತೆಷ್ಟೇನ್ ಆರೋಗ್ಯವನ್ನು ವೃದ್ಧಿಸುವನಿಟ್ಟಿನಲ್ಲಿ ತೆಂಗಿನ ಹಾಲು ಉತ್ತಮವಾಗಿದೆ. ಈ ಹಾಲು ನಮ್ಮ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ಈ ಹಾಲಿನಲ್ಲಿ ವಿಟಮಿನ್ ಇ ಇರುವುದರಿಂದ ಇದು ನಮ್ಮ ಚರ್ಮದ ಆರೋಗ್ಯವನ್ನು ಮತ್ತು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ

Comments are closed.