ಕರಾವಳಿ

ಮಲ್ಪೆಯಲ್ಲಿ ಮೀನು ಆಯುತ್ತಿದ್ದ 18 ಮಂದಿ ಬಾಲಕಾರ್ಮಿಕರ ರಕ್ಷಣೆ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ, ನಾಗರೀಕ ಸೇವಾ ಸಮಿತಿ, ಸ್ಪೂರ್ತಿ ವಿಶ್ವಾಸದ ಮನೆ ಶಂಕರಪುರ ಇವರು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಬೆಳಗ್ಗೆ 5 ಗಂಟೆಗೆ ಇಲಾಖಾ ತಂಡದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, ಮೀನು ಆಯುವ ವೃತ್ತಿಯಲ್ಲಿ ನಿರತರಾಗಿದ್ದ ಕೊಪ್ಪಳ ಮತ್ತು ಗದಗ ಜಿಲ್ಲೆಯ ವಲಸೆ ಕಾರ್ಮಿಕರ 18 ಬಾಲಕಿಯರು ಮತ್ತು ಒಬ್ಬ ಬಾಲಕ ಸೇರಿದಂತೆ ಒಟ್ಟು 19 ಮಕ್ಕಳನ್ನು ರಕ್ಷಿಸಿ ಶಿಕ್ಷಣ ಮತ್ತು ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಲಾಯಿತು.

ಕಾರ್ಯಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್, ಕಾರ್ಮಿಕ ಅಧಿಕಾರಿ ಬಾಲಕೃಷ್ಣ, ಕಾರ್ಮಿಕ ನಿರೀಕ್ಷಕರಾದ ಜೀವನ್ ಕುಮಾರ್, ಪ್ರವೀಣ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ಭಾಸ್ಕರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜಕಾರ್ಯಕರ್ತರಾದ ಯೋಗೀಶ್ ಹಾಗೂ ಗ್ಲೀಶಾ ಮೊಂತೆರೊ, ಸಮಾಲೋಚಕಿ ಅಂಬಿಕಾ ಕೆ ಎಸ್, ಔಟ್‍ರೀಚ್ ವರ್ಕರ್ ಸಂದೇಶ್, ಸುನಂದ, ನಾಗರೀಕ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಮಕ್ಕಳ ಸಹಾಯವಾಣಿಯ ಕಸ್ತೂರಿ, ಜ್ಯೋತಿ, ನೇತ್ರ, ಸ್ಪೂರ್ತಿ ವಿಶ್ವಾಸ ಮನೆಯ ವಿಲಾಸ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Comments are closed.