ಆರೋಗ್ಯ

ಗೋಧಿ ನಮ್ಮ ಶರೀರದ ಸಾಮರ್ಥ್ಯವನ್ನ ಕುಗ್ಗಿಸಬಹುದು ಎಚ್ಚರಿಕೆ..?

Pinterest LinkedIn Tumblr

ಗೋಧಿ ನಿಜಕ್ಕೂ ಒಂದು ಆರೋಗ್ಯಕರವಾದ ವಸ್ತು, ಕೆಲವು ಆಹಾರಗಳ ಉತ್ಪನ್ನದಲ್ಲಿ ಮತ್ತು ಮನೆಯಲ್ಲಿ ಚಪಾತಿಯನ್ನ ಮಾಡಲು ಗೋಧಿಯನ್ನ ಬಳಸಲಾಗುತ್ತದೆ, ಇನ್ನು ಗೋಧಿಯನ್ನ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಒಳ್ಳೆಯ ಪೋಷಕಾಂಶ ಸಿಗುತ್ತದೆ. ಸ್ನೇಹಿತರೆ ಗೋಧಿ ಗ್ಲೂಟೆನ್ ಅನ್ನುವ ಅಂಶವನ್ನ ಹೊಂದಿರುತ್ತದೆ ಮತ್ತು ಅದೂ ನಮ್ಮ ದೇಹದ ಕೆಲವು ಪರಿಣಾಮವನ್ನ ಬೀರುತ್ತದೆ, ಹಾಗಾದರೆ ಗೋಧಿಯನ್ನ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಆಗುವ ಲಾಭ ಮತ್ತು ನಷ್ಟಗಳೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಆರೋಗ್ಯ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ. ಸ್ನೇಹಿತರೆ ಗೋಧಿಯನ್ನ ಇರುವ ಗ್ಲೂಟೆನ್ ಅಂಶ ಹೆಚ್ಚಾಗಿ ಇರುವುದರಿಂದ ಅದೂ ಅಲರ್ಜಿಯಂತಹ ಕೆಲವು ಸಮಸ್ಯೆಗಳನ್ನ ಉಂಟುಮಾಡುತ್ತದೆ.

ಇನ್ನು ಇತ್ತೀಚಿಗೆ ನಡೆದ ಕೆಲವು ಸಂಶೋಧನೆಯ ಪ್ರಕಾರ ಗೋಧಿ ನಮ್ಮ ದೇಹದ ಮೇಲೆ ಆರು ರೀತಿಯಲ್ಲಿ ಪ್ರತಿಕೂಲ ಪರಿಣಾಮವನ್ನ ಉಂಟುಮಾಡುತ್ತದೆ ಎಂದು ತಿಳಿದು ಬಂದಿದೆ. ಸ್ನೇಹಿತರೆ ರಕ್ತದಲ್ಲಿ ಇರುವ ಸಕ್ಕರೆಯ ಮಟ್ಟವನ್ನ ಹೆಚ್ಚಿಸುತ್ತದೆ ಈ ಗೋಧಿ, ಹೌದು ಸ್ನೇಹಿತರೆ ಗೋದಿಯ ಮೂಲಕ ತಯಾರಾದ ಬ್ರೆಡ್ ಗಳನ್ನ ನಾವು ಸೇವನೆ ಮಾಡಿದರೆ ಅದೂ ನಮ್ಮ ದೇಹದಲ್ಲಿ ಸಕ್ಕರೆಯ ಪ್ರಮಾಣವನ್ನ ಹೆಚ್ಚಿಸುತ್ತದೆ. ಇನ್ನು ಗೋದಿಯ ಮೂಲಕ ತಯಾರಾದ ಕೆಲವು ಪಾದಾರ್ಥಗಳು ಹೆಚ್ಚು ನಾರಿನ ಅಂಶವನ್ನ ಒಳಗೊಂಡಿರುತ್ತದೆ, ಇನ್ನು ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನ ಹೆಚ್ಚಿಸುತ್ತದೆ ಮತ್ತು ಇದರಿಂದ ಮದುಮೇಹ ಮತ್ತು ಹೃದಯಕ್ಕೆ ಸಂಬಂದಿಸಿದ ಖಾಯಿಲೆಗಳು ಬರುತ್ತದೆ.

ಇನ್ನು ಗೋಧಿಯಲ್ಲಿ ಗ್ಲೂಟೆನ್ ಪ್ರಮಾಣ ಹೆಚ್ಚಾಗಿ ಇರುವುದರಿಂದ ಅತಿಸಾರ ಮತ್ತು ಹೊಟ್ಟೆಗೆ ಸಂಬಂದಿಸಿದ ಖಾಯಿಲೆಗಳು ಬರುವ ಸಾಧ್ಯತೆ ಜಾಸ್ತಿ ಇರುತ್ತದೆ ಮತ್ತು ಇದರಿಂದ ಮನುಷ್ಯನ ಜೀರ್ಣಶಕ್ತಿ ಕೂಡ ಕುಂದುತ್ತದೆ. ಇನ್ನು ಶರೀರಿದ ಖನಿಜಾಂಶ ಹೀರಿಕೆಯನ್ನ ಗೋಧಿ ತಗ್ಗಿಸುತ್ತದೆ, ಹೌದು ಸ್ನೇಹಿತರೆ ಗೋಧಿಯಲ್ಲಿ ಇರುವ ನಾರು ದೇಹದಲ್ಲಿ ಇರುವ ವಿಟಮಿನ್ ಡಿ ಯನ್ನು ಧಹಿಸುವ ಮೂಲಕ ಅದರ ಕೊರತೆಗೆ ಕಾರಣವಾಗುತ್ತದೆ ಎಂದು ಕೆಲವು ಸಂಶೋಧನೆಗಳಿಂದ ತಿಳಿದು ಬಂದಿದೆ. ಇನ್ನು ಗೋಧಿ ನಮ್ಮ ಶರೀರದ ಸಾಮರ್ಥ್ಯವನ್ನ ಕುಗ್ಗಿಸುವ ಕೆಲಸವನ್ನ ಮಾಡುತ್ತದೆ, ಇನ್ನು ಗೋಧಿಯಿಂದ ತಯಾರಾದ ಕೆಲವು ಪದಾರ್ಥಗಳ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿನ ಕೊಬ್ಬಿನ ಅಂಶ ಹೆಚ್ಚಾಗುತ್ತದೆ ಎಂದು ಕೆಲವು ಸಂಶೋಧನೆಯಿಂದ ತಿಳಿದು ಬಂದಿದೆ.

ಇನ್ನು ಗೋಧಿಗೂ ಮತ್ತು ಮೆದುಳಿಗೂ ಸಂಬಂಧ ಇದು ಎಂದು ಹೇಳುತ್ತಿದ್ದೆ ವೈದ್ಯಲೋಕ, ಹೌದು ಸ್ನೇಹಿತರೆ ಗೋಧಿಯನ್ನ ಹೆಚ್ಚಾಗಿ ಸೇವನೆ ಮಾಡುವುದರಿಂದ ಮೆದುಳಿಗೆ ಸಂಬಂದಿಸಿದ ಖಾಯಿಲೆಗಳು ಹೆಚ್ಚಾಗಿ ಬರುತ್ತದೆ. ಇನ್ನು ಮಿತವಾಗಿ ಗೋಧಿಯನ್ನ ಬಳಸುವುದರಿಂದ ಮತ್ತು ಮನೆಯಲ್ಲಿ ಮಾಡಿದ ಕೆಲವು ಗೋದಿಯ ಪದಾರ್ಥಗಳನ್ನ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಇನ್ನು ಪ್ರತಿದಿನ ಅತಿಯಾಗಿ ಗೋಧಿಯನ್ನ ಸೇವನೆ ಮಾಡಿದರೆ ನಮ್ಮ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನ ಬೀರುವ ಸಾಧ್ಯತೆ ಜಾಸ್ತಿ ಇರುತ್ತದೆ,

Comments are closed.