ಕ್ರೀಡೆ

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೆ 4 ಹೆಚ್ಚುವರಿ ತಂಡಗಳ ಸೇರ್ಪಡೆ !

Pinterest LinkedIn Tumblr

ದುಬೈ: ಮಹತ್ವದ ಬೆಳವಣಿಗೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ತನ್ನ ಮಹತ್ವದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳ ಸಂಖ್ಯೆಯನ್ನು 20ಕ್ಕೆ ಏರಿಕೆ ಮಾಡಲು ನಿರ್ಧರಿಸಿದೆ.

ಹೌದು.. ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಮತ್ತೆ 4 ಹೆಚ್ಚುವರಿ ತಂಡಗಳ ಸೇರ್ಪಡೆಗೆ ನಿರ್ಧರಿಸಲಾಗಿದ್ದು, ಹಾಲಿ ಇರುವ 16 ತಂಡಗಳ ಬದಲಿಗೆ 20 ತಂಡಗಳಿಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಈ ಕುರಿತಂತೆ ಐಸಿಸಿ ಮಹತ್ವದ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

ಐಸಿಸಿ ಮೂಲಗಳ ಪ್ರಕಾರ 2023ರಿಂದ 2031ರ ವರೆಗಿನ ಕ್ರಿಕೆಟ್ ಋತುವಿನಲ್ಲಿ ಈ 20 ತಂಡಗಳ ಪ್ರಯೋಗಾರ್ಥ ಟೂರ್ನಿ ಆಯೋಜನೆಗೆ ಮುಂದಾಗಿದೆ. ಈಗಾಗಲೇ ಬಾಸ್ಕೆಟ್ ಬಾಲ್ ಮತ್ತು ಫುಟ್ ಬಾಲ್ ವಿಶ್ವಕಪ್ ಟೂರ್ನಿಗಳಲ್ಲಿ ಗರಿಷ್ಠ ತಂಡಗಳ ಆಡುತ್ತಿದ್ದು, ಇದೇ ಮಾದರಿಯಲ್ಲಿ ಕ್ರಿಕೆಟ್ ನಲ್ಲೂ ಗರಿಷ್ಠ ತಂಡಗಳನ್ನು ಆಡಿಸುವ ಕುರಿತು ಐಸಿಸಿ ಮುಂದಾಗಿದೆ.

2024ರಿಂದಲೇ 20 ತಂಡಗಳು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲ್ಲಿದ್ದು, ಹೊಸದಾಗಿ ಕೆನಡಾ, ಜರ್ಮನಿ, ನೆಪಾಳ ಮತ್ತು ನೈಜಿರಿಯಾ ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ತುದಿಗಾಲಲ್ಲಿ ನಿಂತಿವೆ. ಇದಲ್ಲದೇ ಅಮೆರಿಕ ಕೂಡ ಟಿ20 ವಿಶ್ವಕಪ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದೆ.

Comments are closed.