ಆರೋಗ್ಯ

ಜಠರದ ಸಮಸ್ಯೆ, ಜಾಂಡೀಸ್, ಕೀಲುನೋವು ಮೂಳೆಮುರಿತ ಮುಂತಾದ ಸಮಸ್ಯೆಗೆ ಈ ಸಸ್ಯ ಸಹಕಾರಿ

Pinterest LinkedIn Tumblr

ಮೂಳೆಮುರಿತದಲ್ಲಿ ನಿಮಗೆ ತುಂಬಾ ಉಪಯುಕ್ತವಾದಂತಹ ಔಷಧಿ ಈ ಸಸ್ಯ . ರಸ್ತೆಬದಿಗಳಲ್ಲಿ ಸಹಜವಾಗಿ ಕಾಣಸಿಗುವ ಹಾಗೂ ಕಳೆ ಸಸ್ಯವೆಂದು ಭಾವಿಸಲಾಗಿರುವ ಈ ಸಸ್ಯದ ಹೆಸರು ಮುಳ್ಳು ಹರಿವೆ ಗಿಡ. ವಾಸ್ತವದಲ್ಲಿ ಇದೊಂದು ಔಷಧಿ ಸಸ್ಯವು ಹೌದು ಅಮರಂತೆಸಿಯೇ ಕುಟುಂಬಕ್ಕೆ ಸೇರಿದ ಮುಳ್ಳುಹರಿವೆಗಿಡದ ವೈಜ್ಞಾನಿಕ ಹೆಸರು ಅಮರಂತಸ್ ಸಂಸ್ಕ್ರುತದಲ್ಲಿ ತುಂಡಲಿಯ ಎಂದು ಕನ್ನಡದಲ್ಲಿ ಮುಳ್ಳು ಹರಿವೆಗಿಡ ಹಾಗೂ ಮುಳ್ಳುಕಿರೆ ಸೊಪ್ಪಿನಗಿಡ ಎಂದರೆ ಆಂಗ್ಲಭಾಷೆಯಲ್ಲಿ ಪ್ರಿಕ್ಲಿ ಅಮೆರೆಂತ್ ಇತ್ಯಾದಿ ಹೆಸರುಗಳಿವೆ.

ಇಡೀ ಭಾರತವ್ಯಾಪಿ ಕಾಣಸಿಗುವ ಮುಳ್ಳುಹರಿವೆ ಗಿಡದ ಮೂಲ ಅಮೆರಿಕಾದ ಉಷ್ಣವಲಯವಾಗಿದ್ದು ಬಂಜರುಭೂಮಿ ರಸ್ತೆಬದಿಗಳಲ್ಲಿ ಹೊಲ ಹಾಗೂ ತೋಟಗಳಲ್ಲಿ ತೇವಾಂಶವಿರುವ ಜಾಗಗಳಲ್ಲಿ ಕಂಡುಬರುವ ಏಕವಾರ್ಷಿಕ ಸಸ್ಯವಾಗಿದೆ ಸುಮಾರು 3 ರಿಂದ 4 ಅಡಿ ಎತ್ತರಕ್ಕೆ ಬೆಳೆಯಬಲ್ಲ ಹಲವಾರು ಕವಲುಗಳಾಗಿ ಬೆಳೆಯುವ ನಸುಗೆಂಪು ಮಿಶ್ರಿತ ಹಸಿರು ಬಣ್ಣದ ಮೃಧುವಾದ ಕಾಂಡಗಳಿದ್ದು ಶಂಕಾಕಾರದ ಸುಮಾರು 12 ಸೆಂಟಿಮೀಟರ್ ಉದ್ದ ಹಾಗೂ 8 ಸೆಂಟಿಮೀಟರ್ ಅಗಲವಾದ ಹಸಿರು ಎಲೆಗಳಿದ್ದು ಈ ಎಲೆಗಳ ಕಂಕುಳಲ್ಲಿ ಮೊನಚಾದ ಮುಳ್ಳುಗಳಿರುತ್ತವೆ.

ಕಾಂಡದ ತುದಿಯಲ್ಲಿ ನೀಳವಾದ ಕಾಂಡದ ಸುತ್ತ ಮಾಸಲು ಬಿಳಿಬಣ್ಣದ ಪುಟ್ಟ ಪುಟ್ಟ ಹೂವುಗಳು ಹೊಂಚಲುಗಳಲ್ಲಿ ಸಮಾವೇಶಗೊಂಡಿರುತ್ತವೆ. ಅಲ್ಕೋಲೈಡ್ಸ್ ಗ್ಲೈಕೋಸೈಡ್ಸ್ ಸ್ಯಾಪೋನಿನ್ಸ್ ಪೈತೋಸ್ಟಿರಾಲ್ಸ್ ಫೆನಾಲಿಕ್ಸ್ ಟ್ಯಾನಿನ್ಸ್ ಪ್ರೋಟಿನ್ಸ್ ಕಾರ್ಬೋಹೈಡ್ರೇಟ್ಸ್ ಹಾಗೂ ಗಮ್ಸ್ ಮುಂತಾದ ರಾಸಾಯನಿಕ ಸಂಯುಕ್ತಗಳಿಂದ ಕೂಡಿರುವ ಮುಳ್ಳುಹರಿವೆ ಗಿಡವನ್ನು ಸಾಂಪ್ರದಾಯಿಕ ಆಯುರ್ವೇದ ಸಿಧ್ದ ಹಾಗೂ ಚೀನಾ ಚಿಕಿತ್ಸಾ ಪದ್ಧತಿಗಳಲ್ಲಿ ಬಳಸಲಾಗುತ್ತದೆ.

ಜಠರದ ಸಮಸ್ಯೆಗಳು ಜಾಂಡೀಸ್ ಕೀಲುನೋವು ಮೂಳೆಮುರಿತ ಮುಂತಾದ ಸಮಸ್ಯೆಗಳಲ್ಲಿ ಬಳಸಲಾಗುತ್ತದೆ. ಇನ್ನು ಈ ಗಿಡದ ಸಾಮಾನ್ಯ ಉಪಯೋಗದ ಬಗ್ಗೆ ತಿಳಿಯೋದಾದ್ರೆ ಕೆಲವು ಪ್ರದೇಶಗಳಲ್ಲಿ ಮುಳ್ಳುಹರಿವೇಗಿಡದ ಎಲೆಗಳನ್ನು ತರಕಾರಿಯಂತೆ ಬಳಸಲಾಗುತ್ತದೆ. ಇದರ ಎಲೆಯಕಷಾಯವನ್ನು ಹೊಟ್ಟೆನೋವಿಗೆ ಸ್ವಲ್ಪ ಪ್ರಮಾಣದಲ್ಲಿ ನೀಡಲಾಗುತ್ತದೆ. ಇದರ ಎಲೆಗಳ ಪಲ್ಯ ಅಥವಾ ಸಾಂಬಾರ ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.

ಈ ಎಲೆಗಳ ರಸ ಅಥವಾ ಕಷಾಯ ಸೇವಿಸುವುದು ಸ್ತ್ರೀಯರ ಋತುಚಕ್ರದ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ತಡೆಗಟ್ಟುತ್ತದೆ. ಇದರ ಬೀಜಗಳ ಚೂರ್ಣವನ್ನು ಮೂಳೆಮುರಿತದಲ್ಲೂ ಸಹ ಔಷಧಿಯಾಗಿ ಬಳಸಲಾಗುತ್ತದೆ. ಕೀಲುನೋವು ಅಥವಾ ಉತದ ತೊಂದರೆಯಲ್ಲಿ ಮುಳ್ಳುಹರಿವೆ ಗಿಡದ ಎಲೆಗಳನ್ನು ಅರೆದು ಊತ ಅಥವಾ ಕೀಲುನೋವಿರುವ ಜಾಗಕ್ಕೆ ಕಟ್ಟಲಾಗುತ್ತದೆ. ಈ ಸಸ್ಯದ ಯಾವುದೇ ಅಡ್ಡಪರಿಣಾಮಗಳ ವರದಿಗಳಿಲ್ಲ ಆದರೆ ಗರ್ಭಿಣಿಯರು ಮತ್ತು ಸ್ತನ್ಯಪಾನ ಮಾಡಿಸುವವರು ವೈದ್ಯರ ಸಲಹೆಯ ಹೊರತಾಗಿ ಬಳಸಬಾರದು.

Comments are closed.