ಆರೋಗ್ಯ

ಮುಖದ ಮೇಲೆ ಇರುವ ಸಣ್ಣ ಸಣ್ಣ ರಂಧ್ರಗಳು ಮುಖದ ಅಂದವನ್ನು ಕೆಡಿಸುತ್ತವೆ..!

Pinterest LinkedIn Tumblr

ಚರ್ಮದಲ್ಲಿ ಕಾಣುವ ಸಣ್ಣ ಸಣ್ಣ ರಂಧ್ರಗಳಲ್ಲಿ ಇರುವ ಕಪ್ಪನ್ನು ತೆಗೆಯುವ ಸುಲಭ ವಿಧಾನ. ಎಲ್ಲರಿಗೂ ಕೂಡ ತಾವು ಸುಂದರವಾಗಿ ಕಾಣಬೇಕು ಎಂದು ತುಂಬಾ ಆಸೆ ಪಡುತ್ತಾರೆ ಅದಕ್ಕಾಗಿ ಹಲವಾರು ರೀತಿಯ ಕ್ರೀಮ್. ಸೋಪ್ ಎಲ್ಲವನ್ನು ಬಳಸುತ್ತಾರೆ ಇದರ ಜೊತೆಗೆ ಹದಿನೈದು ದಿನಕ್ಕೆ ಒಂದು ಬಾರಿ ಪಾರ್ಲರ್ ಗೆ ಹೋಗಿ ಫೇಸ್ ವಾಷ್ ಮಾಡಿಸಿಕೊಳ್ಳುತ್ತಾರೆ ಆದರೂ ಕೂಡ ಏನೇ ಮಾಡಿದರೂ ಕೂಡ ಮುಖದ ಮೇಲೆ ಸಣ್ಣ ಸಣ್ಣ ರಂಧ್ರಗಳು ಮಾತ್ರ ಕಡಿಮೆ ಆಗುವುದಿಲ್ಲ ಹಾಗೂ ಅವು ನಮ್ಮ ಮುಖದ ಅಂದವನ್ನು ಕೂಡ ಕೆಡಿಸುತ್ತವೆ.

ಮುಖದ ಮೇಲೆ ಸಣ್ಣ ಸಣ್ಣ ಚರ್ಮದ ರಂಧ್ರಗಳು ಇದ್ದಾಗ ಆ ರಂಧ್ರಗಳಿಗೆ ಸತ್ತ ಚರ್ಮದ ಕೋಶಗಳು, ಧೂಳು ಮತ್ತು ಪರಿಸರದ ಕೆಟ್ಟ ಕಲ್ಮಶಗಳು ಸುಲಭವಾಗಿ ತುಂಬಿಕೊಳ್ಳುತ್ತವೆ ಆಗ ಮುಖದ ಮೇಲೆ ಮೊಡವೆಗಳು ಏಳುತ್ತವೆ ಕೆರೆತ ಉಂಟಾಗುತ್ತದೆ ಚರ್ಮವೆಲ್ಲ ಕೆಂಪು ಆಗುತ್ತದೆ ಜೊತೆಗೆ ಇತರ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಹೀಗೆ ಆಗುವುದರಿಂದ ಮುಖದ ಅಂದ ಕೂಡ ಕೆಟ್ಟು ಹೋಗುತ್ತದೆ. ಹೀಗಾಗಿ ಚರ್ಮದ ರಂಧ್ರಗಳನ್ನು ಶುದ್ಧೀಕರಿಸುವುದಕ್ಕೆ ನಾವು ಮನೆಯಲ್ಲಿಯೇ ಸುಲಭವಾಗಿ ಔಷದಿ ತಯಾರಿಸಿ ಕೊಳ್ಳ ಬಹುದು ಹಾಗಾದರೆ ಅದು ಹೇಗೆ ಎಂದು ತಿಳಿಯೋಣ ಬನ್ನಿ.

ಚರ್ಮದ ರಂಧ್ರಗಳಲ್ಲಿ ಇರುವ ಕಲ್ಮಶವನ್ನು ಸುಲಭವಾಗಿ ತೆಗೆಯುವ ಸುಲಭ ವಿಧಾನ ಎಂದರೆ ಬಿಸಿನೀರಿನ ಹಬೆ ಬಿಸಿ ನೀರಿನ ಹಬೆಯನ್ನು ವಾರದಲ್ಲಿ ಎರಡು ಬಾರಿ ತ್ವಚೆಗೆ ತೆಗೆದುಕೊಳ್ಳುವುದರಿಂದ ರಂಧ್ರಗಳಲ್ಲಿನ ಕಲ್ಮಶಗಳು ಕಿತ್ತು ಹೊರಗೆ ಬರುತ್ತವೆ ಹಾಗೂ ರಂಧ್ರಗಳಲ್ಲಿ ಇರುವ ಕಲ್ಮಶಗಳು ಕೂಡ ಹೊರ ಬರುತ್ತವೆ ಹಾಗೂ ಇದರ ಜೊತೆಯಲ್ಲಿ ಮೊಡವೆಗಳ ಸಮಸ್ಯೆ ಕೂಡ ನಿವಾರಣೆ ಯಾಗುತ್ತದೆ. ಇನ್ನೊಂದು ವಿಧಾನ ಎಂದರೆ ಅಡುಗೆ ಸೋಡಾ ಒಂದು ಚಮಚ ಅಡುಗೆ ಸೋಡಾವನ್ನು ತೆಗೆದುಕೊಂಡು ಅದನ್ನು ಸ್ವಲ್ಪ ನೀರಿನಲ್ಲಿ ಬೆರೆಸಿಕೊಂಡು ನಂತರ ಆ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು, ಇದನ್ನು ಸುಮಾರು ಹತ್ತು ನಿಮಿಷ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು, ಹೀಗೆ ಮಾಡುವುದರಿಂದ ರಂದ್ರಗಳ ಒಳಗೆ ಅಡುಗೆ ಸೋಡಾ ಹೋಗಿ ರಂಧ್ರಗಳಲ್ಲಿ ಇರುವ ಕಲ್ಮಶಗಳನ್ನು ಹೊರ ಹೋಗುತ್ತವೆ.

ಇನ್ನೊಂದು ವಿಧಾನ ಎಂದರೆ ಕಲ್ಲಿದ್ದಲಿನ ಮಾಸ್ಕ್ ಕಲ್ಲಿದ್ದಲಿನಿಂದ ಪೇಸ್ಟ್ ತಯಾರಿಸಿಕೊಂಡು ಅದನ್ನು ಮುಖಕ್ಕೆ ಮಾಸ್ಕ್ ರೀತಿಯಲ್ಲಿ ಹಚ್ಚಿದರೆ ಮುಖದ ಮೇಲಿನ ರಂಧ್ರದಲ್ಲಿ ಇರುವ ಕಲ್ಮಶ ಹೊರ ಹೋಗುತ್ತದೆ ಕಲ್ಲಿದ್ದಲಿನ ಮಾಸ್ಕ್ ಮಾರುಕಟ್ಟೆಯಲ್ಲಿ ಕೂಡ ಸಿಗುತ್ತದೆ. ಇನ್ನೊಂದು ವಿಧಾನ ಎಂದರೆ ನಿಂಬೆರಸ ಅಥವಾ ಜೇನು ಇದನ್ನು ನೀವು ಮಾರುಕಟ್ಟೆಯಲ್ಲಿ ತಂದು ಬಳಸುವ ಸ್ಕಾರ್ಬ್ ಗೆ ನಿಂಬೆ ರಸವನ್ನು ಬೆರೆಸಿ ಬಳಸಿದರೆ ಸಾಕು ಬಹುಬೇಗ ಫಲಿತಾಂಶ ದೊರೆಯುತ್ತದೆ.

ಏಕೆಂದರೆ ನಿಂಬೆಹಣ್ಣಿನಲ್ಲಿ ಆಮ್ಲಿಯ ಗುಣಗಳು ಹೆಚ್ಚಾಗಿ ಇರುವುದರಿಂದ ರಂದ್ರಗಳಲ್ಲಿರುವ ಕಲ್ಮಶಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಸ್ಕ್ರಬ್ ಇವು ಕೂಡ ಚರ್ಮದ ಮೇಲೆ ಇರುವ ಸತ್ತ ಜೀವಕೋಶಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಸ್ಕ್ರಬ್ ಗಳಲ್ಲಿ ನಿಮ್ಮ ಚರ್ಮಕ್ಕೆ ಹೊಂದುವುದನ್ನು ತೆಗೆದುಕೊಂಡು ಬಳಸಬಹುದು, ನೋಡಿದರಲ್ಲ ಮುಖದ ಅಂದವನ್ನೇ ಕೆಡಿಸುವ ಸಣ್ಣ ಸಣ್ಣ ರಂಧ್ರಗಳನ್ನು ಹಾಗೂ ಆ ರಂಧ್ರಗಳಲ್ಲಿ ಇರುವ ಕಲ್ಮಶವನ್ನು ಹೊರ ತೆಗೆಯುವ ಸುಲಭವನ್ನು ವಿಧಾನವನ್ನು ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ.

Comments are closed.