ಆರೋಗ್ಯ

ಮಧುಮೇಹವನ್ನು ನಿಯಂತ್ರಣದಲ್ಲಿಡುವ ಗುಟ್ಟು ಈ ಆಹಾರದಲ್ಲಿದೆ.

Pinterest LinkedIn Tumblr

ಮಧುಮೇಹ ಅಂದರೆ ಸಕ್ಕರೆ ಕಾಯಿಲೆ ಈ ಕಾಯಿಲೆಯನ್ನು ದೂರ ತಳ್ಳಬೇಕು ಎಂದರೆ ಈ ಆರು ಸುಲಭವಾದ ಮಣೆ ಮದ್ದುಗಳನ್ನು ಬಳಸಿ ನೋಡಿ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಏರಿಕೆ ಆಗುತ್ತಲೇ ಇದೆ ಇದಕ್ಕೆ ಕಾರಣ ನಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ದಿನ ನಿತ್ಯದ ಜೀವನ ಶೈಲಿ ಮತ್ತು ನಾವು ತಿನ್ನುವ ಸಕ್ಕರೆ ಅದರ ಬದಲು ಬೆಲ್ಲವನ್ನು ತಿಂದರೆ ಒಳ್ಳೆಯದು ಹಾಗೂ ದೇಹಕ್ಕೂ ಕೂಡ ಆರೋಗ್ಯಕರ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಲು ಪ್ರತಿ ನಿತ್ಯ ಮಾತ್ರೆಗಳನ್ನು ಸೇವಿಸಬೇಕು ಎಂದೇನಿಲ್ಲ ಆಹಾರ ಸೇವನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು ಅಪಾಯವನ್ನು ಖಂಡಿತ ತಡೆಗಟ್ಟಲು ಸಾಧ್ಯ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಲು ಮನೆ ಮದ್ದನ್ನು ಕೂಡ ಮಾಡಬಹುದು ಮೊದಲನೆಯದಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ಜ್ಯೂಸ್ ಸೇವಿಸಿದರೆ ಮಧುಮೇಹವನ್ನು ತಡೆಗಟ್ಟಬಹುದು ಎಂದು ಸಾಬೀತಾಗಿದೆ.

ಹಾಗಲಕಾಯಿ ಬಹಳ ಕಹಿ ರುಚಿ ಹೊಂದಿರುವುದರಿಂದ ಕೆಲವರಿಗೆ ಇದರ ಹಸಿ ಸೇವನೆ ಕಷ್ಟ ಆದ್ದರಿಂದ ಜ್ಯೂಸ್ ಸೇವಿಸುವ ಬದಲು ಪಲ್ಯ ಅಥವಾ ಸಾರು ಮಾಡಿ ಸೇವಿಸಬಹುದು ಇದನ್ನು ಪ್ರತಿ ನಿತ್ಯ ಆಹಾರದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಕೂಡ ಒಳ್ಳೆಯದು ಇನ್ನೂ ರಾತ್ರಿಯ ಸಮಯದಲ್ಲಿ ಒಂದು ಚಮಚ ಮೆಂತ್ಯೆಯನ್ನು ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜಿ ನೆನೆಸಿಟ್ಟ ಮೆಂತ್ಯೆ ಮತ್ತು ಅದರ ನೀರನ್ನು ಸೇವಿಸಬೇಕು. ಮೂರನೆಯದಾಗಿ ಜಂಬೂ ನೇರಳೆ ಹಣ್ಣು. ಇದೂ ಕೂಡ ಮಧುಮೇಹಕ್ಕೆ ಉತ್ತಮ ಔಷಧಿ ಆಗಿ ಕೆಲಸವನ್ನು ಮಾಡುತ್ತದೆ ಇದು ಮೇಧೋ ಜೀರಕ ಗ್ರಂಥಿಗಳ ಮೇಲೆ ಕೂಡ ಉತ್ತಮ ಪರಿಣಾಮವನ್ನು ಬೀರುತ್ತದೆ ಜಂಬೂ ನೇರಳೆ ಹಣ್ಣಿನ ಬೀಜವನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ ಇದನ್ನು ನೀರಿನಲ್ಲಿ ಕಲಿಸಿ ದಿನಕ್ಕೆ ಎರಡು ಬಾರಿ ಕುಡಿಯಬೇಕು.

ಇನ್ನೂ ನಾಲ್ಕನೆಯದಾಗಿ ಪೇರಲೆ ಹಣ್ಣು ಅಂದರೆ ಸೀಬೆ ಕಾಯಿ ಅಥವಾ ಬಿಕ್ಕೆ ಹಣ್ಣು ಕೂಡ ಹೇಳುತ್ತಾರೆ ಈ ಸೀಬೆ ಕಾಯಿ ಮಧುಮೇಹಕ್ಕೆ ರಾಮ ಬಾಣ ಆಗಿದೆ ಇದರಲ್ಲಿ ವಿಟಮಿನ್ ಸಿ ಮತ್ತು ನಾರಿನ ಅಂಶವು ಅಧಿಕವಾಗಿ ಇರುವುದರಿಂದ ಮಧುಮೇಹಿಗಳು ಭಯವಿಲ್ಲದೆ ಇದನ್ನು ಸೇವಿಸಬಹುದು. ಆದರೆ ಇದರಲ್ಲಿ ಗಮನ ಇಡೀ ಸೀಬೆ ಕಾಯಿಯನ್ನು ಸಿಪ್ಪೆ ಸಮೇತ ತಿಂದರೆ ಸಕ್ಕರೆ ಖಾಯಿಲೆ ಮಟ್ಟವನ್ನು ಹೆಚ್ಚಿಸುತ್ತದೆ ಆದ್ದರಿಂದ ಸಿಪ್ಪೆಯನ್ನು ತೆಗೆದು ತಿಂದರೆ ನಿಮ್ಮ ಸಕ್ಕರೆಯ ಪ್ರಮಾಣ ಮಟ್ಟವನ್ನು ಕಡಿಮೆ ಇಡುತ್ತದೆ.

ಇನ್ನೂ ಐದನೇ ಆಹಾರ ಬೆಂಡೆಕಾಯಿ. ಬೆಂಡೆಕಾಯಿ ಯಲ್ಲಿ ಕೂಡಾ ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ಇದೆ ಹೇಗೆ ಅಂದರೆ ಒಂದು ಲೋಟ ನೀರಿಗೆ ಒಂದು ಅಥವಾ ಎರಡು ಬೆಂಡೆಕಾಯಿಯನ್ನು ಸಣ್ಣಗೆ ಹಚ್ಚಿ ರಾತ್ರಿಯೇ ನೀರಿಗೆ ಹಾಕಿ ಬಿಟ್ಟು ಬಿಡಿ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬೆಂಡೆಕಾಯಿಯನ್ನು ತೆಗೆದುಹಾಕಿ ಈ ನೀರನ್ನು ಮಾತ್ರ ಸೇವಿಸಿ. ಇನ್ನೂ ಆರನೇ ಮದ್ದು ಲೋಳೆರಸ ಇದು ಕೂಡ ಮಧುಮೇಹಿಗಳಿಗೆ ಒಳ್ಳೆಯದು ಇದನ್ನು ಪ್ರತಿ ನಿತ್ಯ ಜ್ಯೂಸ್ ನ ಜೊತೆ ಬೆರೆಸಿ ಕುಡಿದರೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳ ಬಹುದು.

Comments are closed.