ಕರಾವಳಿ

ನಾಳೆ ಕರಾವಳಿಯಾದ್ಯಂತ `ಕುದ್ಕನ ಮದ್ಮೆ’ ತುಳು ಚಿತ್ರ ಬಿಡುಗಡೆ

Pinterest LinkedIn Tumblr

ಮಂಗಳೂರು, ಜನವರಿ. 02 : ಜಿ‌ಆರ್‌ಕೆ ನಿರ್ಮಾಣದ, ಎ.ವಿ ಜಯರಾಜ್ ನಿರ್ದೆಶನದ `ಕುದ್ಕನ ಮದ್ಮೆ’ ತುಳು ಚಿತ್ರ ನಾಳೆ ದಿನಾಂಕ 3ರಂದು ಕರಾವಳಿಯಾದ್ಯಂತ ಬಿಡುಗಡೆಗೊಳ್ಳಲಿದೆ.

ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಚಿತ್ರದ ನಿರ್ದೇಶಕ ಎ.ವಿ ಜಯರಾಜ್ ಅವರು, ಚಿತ್ರ ವಿಭಿನ್ನ ಶೈಲಿಯಲ್ಲಿ ಮೂಡಿ ಬಂದಿದೆ. ಇಲ್ಲಿ ಕಥೆಗೆ ಪೂರಕವಾಗಿ ಹಾಸ್ಯ ಸನ್ನಿವೇಶವನ್ನು ರೂಪಿಸಲಾಗಿದೆ. ಚಿತ್ರದ ಅವಧಿ ಸ್ವಲ್ಪ ಜಾಸ್ತಿ ಇದ್ದರೂ ಎಲ್ಲಿಯೂ ಬೋರ್ ಆಗದಂತೆ ಸಿನಿ ಪ್ರೇಕ್ಷರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರ ಖಂಡಿತ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.

ಈ ಚಿತ್ರದಲ್ಲಿ ಪ್ರತಿಯೊಬ್ಬ ನಟನಿಗೂ ವಿಭಿನ್ನವಾದ ಪಾತ್ರಗಳನ್ನು ನೀಡಲಾಗಿದೆ. ಅವರು ಈ ಮೊದಲು ನಟಿಸಿದ ಚಿತ್ರಕ್ಕಿಂತ ಹೆಚ್ಚಿನ ಶೈಲಿಯಲ್ಲಿ ಪಾತ್ರಗಳನ್ನು ನೀಡುವ ಮೂಲಕ ನಟರನ್ನು ಕೂಡ ಒರೆಗೆ ಹಚ್ಚುವ ಕೆಲಸ ಈ ಚಿತ್ರದ ಮೂಲಕ ಆಗಿದೆ. ಎಲ್ಲರೂ ಚಿತ್ರವನ್ನು ವೀಕ್ಷಿಸುವ ಮೂಲಕ ತುಳು ಚಿತ್ರಗಳಿಗೆ ಪ್ರೀತ್ಸಾಹ ನೀಡಿ ಎಂದು ಎ.ವಿ ಜಯರಾಜ್ ಮನವಿ ಮಾಡಿದರು.

ಕಥೆಯ ಸಾರಂಸ:

ತುಳು ನಾಡಿನಲ್ಲಿ ಅನಾದಿಕಾಲದಿಂದಲೂ ಬಹಳ ಹೆಸರುವಾಸಿಯಾದ ಮನೆತನ `ಅರ್ಕಾಡಿ ಬರ್ಕೆ’ ಹಿರಿಯರ ಬಳುವಳಿಯಾಗಿ ಅಪಾರ ಆಸ್ತಿ-ಪಾಸ್ತಿ ಹೊಂದಿರುವ ಈ ಮನೆತನದ ಈಗಿನ ಸದಸ್ಯರಲ್ಲಿ ಪರಸ್ಪರ ವೈ ಮನಸ್ಸು. ಆದರೆ ಹಿರಿಯರ ವಿಲ್ ಪ್ರಕಾರ ಇವರೆಲ್ಲವೂ ಒಂದಾಗದೇ ಇದ್ದರೆ ಈ ಆಸ್ತಿ-ಪಾಸ್ತಿಗಳು ಇವರಿಗೆ ದಕ್ಕದು. ಈ ಆಸ್ತಿಯ ಆಸೆಗಾಗಿ ಇವರ ಮಧ್ಯೆ ಬಂದು ಸೇರುವ ಕೆಲವು ನಕಲಿ ಸಂಬಂಧಿಕರು ಬ್ರೋಕರುಗಳು-ಸಮಯ ಸಾಧಕರು. ಇವರುಗಳೆಲ್ಲಾ ಸೇರಿ ಸೃಷ್ಟಿಸುವ ಅವಾಂತರಗಳು. ಹೀಗೆ ಸಿನೆಮಾ ಸಂಪೂರ್ಣ ಹಾಸ್ಯಮಯವಾಗಿ ಸಾಗುತ್ತದೆ.

ಈ ಮಧ್ಯೆ `ಅಪರಿಚಿತನೊಬ್ಬ’ ಈ ಮನೆಗೆ ಸೇರಿಕೊಳ್ಳುತ್ತಾನೆ. ನಾಯಕಿಯ ಅಪಹರಣವಾಗುತ್ತದೆ. ಜ್ಯೋತಿಷಿಯೊಬ್ಬರ ಸಲಹೆಯಂತೆ `ಮಳೆ ಮತ್ತು ಬಿಸಿಲು ಒಟ್ಟಾಗಿ ಬರುತ್ತಿರುವಾಗ’ ಈ ಮನೆಯಲ್ಲಿ ಮಳೆ ಮತ್ತು ಬಿಸಿಲು ಒಟ್ಟಾಗಿ ಬರುತ್ತಿರುವಾಗ ಈ ಮನೆಯಲ್ಲಿ ಒಂದು ಮದುವೆ ನಡೆದರೆ ಸಮಸ್ಯೆ ಬಗೆ ಹರಿಯುವುದೆಂದು ತಿಳಿದು ಮದುವೆಗೆ ಸಿದ್ಧರಾಗುತ್ತಾರೆ. ಇದೇ `ಕುದ್ಕನ ಮದ್ಮೆ’ ಇಲ್ಲಿ ಕುದುಕ ಯಾರು ಎಂಬುದು ಚಿತ್ರದಲ್ಲಿರುವ ಸಸ್ಪೆನ್ಸ್ ಎಂದು ನಿರ್ದೇಶಕ ಎ.ವಿ ಜಯರಾಜ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಟರಾದ ನವೀನ್ ಪಡೀಲ್, ಅರವಿಂದ್ ಬೋಳಾರ, ಚಿತ್ರದ ನಾಯಕ ನಟ ಪೃಥ್ವಿ ಅಂಬರ್, ನಾಯಕಿ ನಟಿ ಶೀತಲ್ ನಾಯಕ್ ಚಿತ್ರದ ಕುರಿತು ಪೂರಕ ಮಾಹಿತಿಗಳನ್ನು ನೀಡಿದರು.

ಕಾಮಿಡಿ-ಫ್ಯಾಮಿಲಿ ಓರಿಯೆಂಟೆಡ್ ಸಬ್ಜೆಕ್ಸ್ :

ನಿರ್ದೇಶಕ ಎ.ವಿ ಜಯರಾಜ್‌ರವರು ಹೇಳುವ ಪ್ರಕಾರ-ಇದೊಂದು ಸಂಪೂರ್ಣ ಕಾಮಿಡಿ-ಫ್ಯಾಮಿಲಿ ಓರಿಯೆಂಟೆಡ್ ಸಬ್ಜೆಕ್ಸ್ ಆಗಿದ್ದು, ಸಂಪೂರ್ಣ ಕುಟುಂಬ ಸಮೇತ ನೋಡುವಂತಹ ಚಿತ್ರ. ತುಳುವರಿಗೆ ಬೇಕಾದ ಕಾಮಿಡಿ, ಫೈಟ್ ಹಾಡುಗಳು ಇವೆ. ಸುರತ್ಕಲ್, ಖಂಡಿಗೆ, ಬೀಚ್, ಪೊಳಲಿ, ತಣ್ಣೀರು ಬಾವಿ ಸುತ್ತ ಮುತ್ತ ಚಿತ್ರೀಕರಣಗೊಂಡಿದೆ.

ಚಿತ್ರದಲ್ಲಿ ನಾಯಕನಾಗಿ ಪೃಥ್ವಿ ಅಂಬಾರ್ ಹಾಗೂ ನಾಯಕಿಯಾಗಿ ಶೀತಲ್ ನಾಯಕ್ ಅಭಿನಯಿಸಿದ್ದಾರೆ. ದೇವಿ ಪ್ರಕಾಶ್ ಉರ್ವ, ಕು| ಶ್ರೀಷಾ ಭಂಡಾರಿ, ಕಾರ್ತಿಕ್ ರಾವ್ ಮತ್ತು ಮುಂಬೈ ರಂಗ ಕಲಾವಿದೆ ಚಂದ್ರಾವತಿ ವಸಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರವಿಂದ ಬೋಳಾರ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಪಿಂಕಿರಾಣಿ, ಶೋಭಾ ಶೆಟ್ಟಿ, ಜೀವನ್ ಉಳ್ಳಾಲ್, ಸೂರಜ್ ಸಾಲ್ಯಾನ್, ಮೋಹನ್ ಕೊಪ್ಪಳ, ಚೇತನ್ ಕದ್ರಿ ಸುಮತಿ ಹಂದೆ, ಉದಯ್ ಆಳ್ವ ಸುರತ್ಕಲ್, ಯಶವಂತ್ ಶೆಟ್ಟಿ ಕೃಷ್ಣಾಪುರ, ಸುನಿಲ್ ಪಡುಬಿದ್ರೆ, ಕೃಷ್ಣ ಸುರತ್ಕಲ್, ರವೀಶ್ ಜೋಗಿ, ಯೋಗೀಶ್, ಅರುಣ್ ಶೆಟ್ಟಿ, ಸುಮಿತ್ರಾ ರೈ, ಕಿಶೋರ್ ಡಿ ಶೆಟ್ಟಿ ತಾರಾಗಣದಲ್ಲಿದ್ದಾರೆ.

ಚಿತ್ರದ ಕತೆ -ಚಿತ್ರಕಥೆ: ಸುಧನ್ ಶ್ರೀಧರ್, ಛಾಯಾಗ್ರಹಣ: ಮಹಾಬಲೇಶ್ವರ ಹೊಳ್ಳ, ಸಂಕಲನ: ಸುಬ್ರಹ್ಮಣ್ಯ ಹೊಳ್ಳ, ಸಂಗೀತ: ರಾಹುಲ್ ಆಚಾರ್ಯ ಕುಂಬ್ಳೆ, ನೃತ್ಯ :ಅಕುಲ್ ಮಾಸ್ಟರ್, ಸಾಹಸ ಕೌರವ ವೆಂಕಟೇಶ್, ನಿರ್ದೇಶಕರು: ರಾಕೇಶ್, ನವೀನ್ ಶೆಟ್ಟಿ, ಅನಿರುದ್ಧ್ ಉಳ್ಳಾಲ್, ಕರುಣ್ ಶೆಟ್ಟಿ, ರೋಶನಿ, ಕಾವ್ಯ ಶರತ್, ಸಾಹಿತ್ಯ ಸಂಭಾಷಣೆ, ಸಹ ನಿರ್ದೇಶನ : ಜೀವನ್ ಉಳ್ಳಾಲ್, ನಿರ್ದೇಶನ ಎ.ವಿ ಜಯರಾಜ್, ನಿರ್ಮಾಪಕರು ಗೌರಿ ಆರ್. ಹೊಳ್ಳ ಮತ್ತು ಸುಹಾಸ್ ಹೊಳ್ಳ.

Comments are closed.