ಕರ್ನಾಟಕ

ನಿಷ್ಠೆ ಬಿಜೆಪಿಯೊಂದಿಗಿದ್ದರೂ, ಸಿದ್ದರಾಮಯ್ಯನವರೇ ಯಾವಾಗಲೂ ನನಗೆ ಮಾರ್ಗದರ್ಶಕರು: ರಮೇಶ್ ಜಾರಕಿಹೊಳಿ

Pinterest LinkedIn Tumblr

ಬೆಳಗಾವಿ: ಬಿಜೆಪಿಯೊಂದಿಗೆ ನಿಷ್ಠೆ ಹೊಂದಿದ್ದೇನೆ ಆದರೆ, ವಿಧಾನಸಭೆ ವಿರೋಧ ಪಕ್ಷದ ಸಿದ್ದರಾಮಯ್ಯ ಯಾವಾಗಲೂ ನನಗೆ ಮಾರ್ಗದರ್ಶಕರು ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಬಳಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈಗಲೂ ಕೂಡಾ ಸಿದ್ದರಾಮಯ್ಯ ಅವರನೇ ನನ್ನ ನಾಯಕ. ಇದನ್ನು ಹೇಳಿಕೊಳ್ಳಲು ನಾನು ಭಯಪಡುವುದಿಲ್ಲ. ಅವರ ಮೇಲಿನ ನಿಷ್ಠೆ ಯಾವಾಗಲೂ ಇರುತ್ತದೆ. ಆದರೆ, ದುರಾದೃಷ್ಟವಶಾತ್ ಸಿದ್ದರಾಮಯ್ಯ ಹಾಗೂ ನಾನು ಬೇರೆ ಪಕ್ಷದಲ್ಲಿ ಇರುವಂತಾಯಿತು ಎಂದಿದ್ದಾರೆ.

ಸಿದ್ದರಾಮಯ್ಯ ಉತ್ತಮ ವ್ಯಕ್ತಿ ಎಂದು ಕರೆದ ಜಾರಕಿಹೊಳಿ, ಮೈತ್ರಿ ಸರ್ಕಾರದಲ್ಲಿ ಉತ್ತಮ ಖಾತೆ ನೀಡಿದ್ದರು. ಆದರೆ, ಆ ಸಂದರ್ಭದಲ್ಲಿ ಅವರು ಕೆಲ ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕ ಹೊಂದುತ್ತಿರಲಿಲ್ಲ. ನಾನು ಬಂಡಾಯ ಎದ್ದಾಗ ನನ್ನ ಮನವೊಲಿಸಲು ಪ್ರಯತ್ನಿಸಿದರು. ಎಲ್ಲ ಬಂಡಾಯ ಚಟುವಟಿಕೆಗಳಿಗೂ ಸಿದ್ದರಾಮಯ್ಯ ಅವರೇ ಹೊಣೆ ಎಂಬಂತೆ ಕಾಂಗ್ರೆಸ್ ಪಕ್ಷದಲ್ಲಿನ ಕೆಲವರು ಪಿತೂರಿ ನಡೆಸಿದರು ಎಂದು ಅವರು ಹೇಳಿದರು.

ಇತ್ತೀಚಿಗೆ ಬೆಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಿದ್ದರಾಮಯ್ಯ ಅವರನ್ನು ಭೇಟಿಯಾದಾಗ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ನನ್ನದೊಂದಿಗೆ ಕೆಲ ವಿಷಯಗಳನ್ನು ಮಾತನಾಡುವಾಗ ಸಿದ್ದರಾಮಯ್ಯ ಭಾವೋದ್ವೇಗ ಗೊಂಡಿದ್ದಾಗಿ ತಿಳಿಸಿದ ರಮೇಶ್ ಜಾರಕಿಹೊಳಿ, ಇತರ ಬಂಡಾಯ ಶಾಸಕರೊಂದಿಗೆ ಸೇರಿ ಮೈತ್ರಿ ಸರ್ಕಾರವನ್ನು ಬೀಳಿಸಲಿಲ್ಲ. ಆದರೆ, ಮೈತ್ರಿ ಸರ್ಕಾರದಲ್ಲಿ ಕೆಟ್ಟ ಆಡಳಿತಕ್ಕೆ ಹೊಣೆಯಾದವರಿಗೆ ಸರಿಯಾದ ಪಾಠ ಕಲಿಸಬೇಕಾಗಿತ್ತು ಎಂದರು.

Comments are closed.