ಆರೋಗ್ಯ

ಆಹಾರದ ಜೊತೆ ಹೊಕ್ಕ ಕಲ್ಮಶಗಳನ್ನೂ ಕರಗಿಸಬಲ್ಲ ಶಕ್ತಿ ಈ ಹಣ್ಣಿಗಿದೆ.

Pinterest LinkedIn Tumblr

ಈ ಹಣ್ಣು ದೇಹಕ್ಕೆ ಶಕ್ತಿಯನ್ನ ನೀಡುವುದರ ಜೊತೆಗೆ ಅನೇಕ ರೋಗಗಳಿಂದಾನು ನಮ್ಮ ದೇಹದಲ್ಲಿ ಹೋರಾಡುತ್ತದ.

ಈ ಹಣ್ಣಿನನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹಕ್ಕೆ ಶಕ್ತಿ, ಪುಷ್ಟಿ ಹಾಗು ರೋಗ ನಿರೋಧಕ ಶಕ್ತಿಯನ್ನ ನೀಡುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

ನಿಮಗೆ ಗೊತ್ತಿಲ್ಲದೇ ನೀವು ತಿನ್ನುವ ಸಣ್ಣ ಕಲ್ಲಿನ ಪುಡಿಗಳು ಹಾಗು ಧಾನ್ಯದಲ್ಲಿ ಮಿಶ್ರಿತವಾಗಿ ದೇಹದೊಳಗೆ ಹೊಕ್ಕುವ ಕಸಗಳನ್ನೂ ಈ ಹಣ್ಣು ಕರಗಿಸುವ ಗುಣವನ್ನ ಹೊಂದಿದೆ, ಜೊತೆಯಲ್ಲಿ ಹೃದಯದಲ್ಲಿ ಕಲ್ಮಶಗಳನ್ನ ಸಹ ಈ ಹಣ್ಣು ಶುದ್ಧ ಮಾಡಿ ಹೃದಯದ ಕಾರ್ಯ ಕ್ಷಮತೆಯನ್ನ ಹೆಚ್ಚಿಸುತ್ತದೆ.

ಜ್ವರ ಬಂದಾಗ ನೇರಳೆ ಹಣ್ಣಿನ ಜ್ಯೂಸ್ ನಲ್ಲಿ ಸ್ವಲ್ಪ ದನಿಯಪುಡಿ ಮಿಶ್ರಣ ಮಾಡಿಕೊಂಡು ತಿನ್ನೋದ್ರಿಂದ ಶರೀರದ ತಾಪ ಕಡಿಮೆಯಾಗುತ್ತದೆ, ಅಷ್ಟೇ ಅಲ್ಲದೆ ಮೂತ್ರದ ಉರಿ ಸಮಸ್ಯೆ ಇದ್ದಾಗ ಒಂದು ಲೋಟ ನೀರಿನಲ್ಲಿ ಮೂರು ಚಮಚ ನೇರಳೆ ರಸ ಹಾಗು ಒಂದು ಚಮಚ ನಿಂಬೆ ರಸವನ್ನ ಬೆರೆಸಿ ಕುಡಿಯುವುದರಿಂದ ಉರಿ ಮೂತ್ರ ಶಮನವಾಗುತ್ತದೆ.

ಶುಗರ್ ಸಮಸ್ಯೆ ಇದ್ದವರಿಗಂತೂ ಈ ಹಣ್ಣು ದೇವರ ಅನುಗ್ರಹವೆಂದರೆ ತಪ್ಪಾಗಲಾರದು ಯಾಕೆಂದರೆ ಈ ಹಣ್ಣು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನ ಕಡಿಮೆ ಗೊಳಿಸಿ ಸಕ್ಕರೆ ಕಾಯಿಲೆ ಸಮಸ್ಯೆ ಇದ್ದವರಿಗೆ ಮಾತ್ರಗಳ ಅವಶ್ಯಕತೆಯನ್ನ ಕಡಿಮೆ ಮಾಡುತ್ತದೆ.

ಜೀರ್ಣ ಕ್ರಿಯೆಯಲ್ಲಿಯೂ ಈ ಹಣ್ಣುಗಳು ತಮ್ಮ ಮುಖ್ಯಪಾತ್ರ ವಹಿಸಿ ನೀವು ಸೇವಿಸಿದ ಆಹಾರವನ್ನ ಜೀರ್ಣಿಸುವ ಕೆಲಸವನ್ನ ಸಮರ್ಥವಾಗಿ ಮಾಡುತ್ತದೆ, ನೇರಳೆಯಲ್ಲಿನ ಪೊಟಾಶಿಯಂ ರಕ್ತದ ಒತ್ತಡವನ್ನ ತಗ್ಗಿಸುತ್ತದೆ, ನೇರಳೆಯ ಹಣ್ಣನ್ನ ತಿನ್ನುವುದರಿಂದ ಹೊಟ್ಟೆಯಲ್ಲಿನ ಜಂತುಗಳು ಸಹ ಸಾಯುತ್ತದೆ ಹಾಗಾದರೆ ಆಯಾ ಕಾಲಕ್ಕೆ ಬರುವ ಎಲ್ಲಾ ಹಣ್ಣುಗಳು ದೇಹಕ್ಕೆ ಪೂರಕವಾಗಿ ಸಹಾಯಮಾಡುತ್ತವೆ.

Comments are closed.