ಆರೋಗ್ಯ

ಈ ಮೂರು ವಸ್ತುಗಳನ್ನು ನಿಮ್ಮ ದಿನ ನಿತ್ಯದ ಆಹಾರದಲ್ಲಿ ಸೇರಿಸಿ, ಬೆನ್ನು ನೋವು, ಮೂಳೆ ನೋವಿನಿಂದ ದೂರ ಇರಿ.

Pinterest LinkedIn Tumblr

ಈಗಿನ ಬದುಕಿನ ಜಂಜಾಟದಲ್ಲಿ ಎಲ್ಲರಿಗೂ ಸಹಾ ಒಂದಲ್ಲ ಒಂದು ಖಾಯಿಲೆ ಇದ್ದೇ ಇರುತ್ತದೆ ಅದರಲ್ಲೂ ಈ ಬೆನ್ನು ನೋವು ಮೂಳೆ ನೋವು ಎನ್ನುವುದು ಸಾಮಾನ್ಯ ಆಗಿದೆ ವಯಸ್ಸಾದವರು ಸದಾ ಕಾಲ ನನಗೆ ಮಂಡಿ ನೋವು ನಡೆಯಲು ಆಗುವುದಿಲ್ಲ ಎಂದು ಅವರ ಸಮಸ್ಯೆ ಹೇಳುತ್ತಾ ಇರುತ್ತಾರೆ ನಿಮಗೂ ಸಹ ಈ ರೀತಿ ಸಮಸ್ಯೆ ಇದೆಯೇ ಮೂಳೆ ನೋವಿನ ಸಮಸ್ಯೆ ಇದೆಯೇ ಮೂಳೆಯಲ್ಲಿ ಶಬ್ಧ ಬರುತ್ತದೆಯೇ ಹಾಗಾದರೆ ನಾವು ಹೇಳುವ ಈ ಮೂರು ವಸ್ತುಗಳನ್ನು ನೀವು ನಿಮ್ಮ ಆಹಾರ ವಸ್ತುಗಳಾಗಿ ಮಾಡಿ ದಿನ ನಿತ್ಯ ನಿಮ್ಮ ಡಯಟ್ ನಲ್ಲಿ ಸೇರಿಸಿದರೆ ನಿಮ್ಮ ಮೂಲೆಗಳಲ್ಲಿ ಬರುವ ಶಬ್ದ ಕಡಿಮೆ ಆಗುತ್ತದೆ ಹಾಗೇ ನಿಮ್ಮ ಮೂಳೆಗಳಲ್ಲಿ ಲುಬ್ರಿಕ್ಯಾಂಟ್ ಕಡಿಮೆ ಆಗಿದ್ದರೆ ಅದು ಸಹ ಹೆಚ್ಚಾಗಿ ನಿಮ್ಮ ಮೂಳೆಗಳಲ್ಲಿ ಸವೆತ ಕಡಿಮೆ ಆಗುತ್ತದೆ.

ಮೊದಲನೆಯದು ಮೆಂತೆ. ಇದು ದೇಹಕ್ಕೆ ಬಹಳ ಒಳ್ಳೆಯದು ಮೆಂತೆಯನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ನಿಮ್ಮ ಮೂಳೆಗಳಲ್ಲಿ ಬೇಕಾದ ಲುಬ್ರಿಕ್ಯಾಂಟ್ ಉತ್ಪನ್ನ ಹೆಚ್ಚಾಗುತ್ತದೆ. ಮೆಂತೆಯಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಯಿಂದ ನಿಮ್ಮ ನೋವು ಸಹಾ ಕಡಿಮೆ ಆಗುತ್ತದೆ ಆದರೆ ಈ ಮೆಂತೆಯನ್ನು ಯಾವ ರೀತಿ ಸೇವನೆ ಮಾಡಬೇಕು ಎಂದು ತಿಳಿಯೋಣ ಒಂದು ಬಟ್ಟಲು ಮೆಂತೆಯನ್ನು ಸ್ವಲ್ಪ ನೀರಿನಲ್ಲಿ ಹಾಕಿ ನೆನೆಸಿ ಬೆಳಗ್ಗೆ ಈ ಮೆಂತೆಯನ್ನು ಕಾಯಿಸಿ ಅದನ್ನು ಸೋಸಿ ಆ ನೀರನ್ನು ಬರೀ ಹೊಟ್ಟೆಯಲ್ಲಿ ಸೇವನೆ ಮಾಡಬೇಕು ನಂತರ ಉಳಿದ ಮೆಂತೆಯನ್ನು ಹಾಗೆ ಅರಿದು ತಿನ್ನಬೇಕು ಈ ರೀತಿ ಮಾಡುವುದರಿಂದ ನಿಮ್ಮ ಕೈ ಕಾಲು ನೋವು ಆದಷ್ಟು ಬೇಗ ನಿವಾರಣೆ ಆಗುತ್ತದೆ.

ಎರಡನೆಯದು ಹಾಲು. ಹಾಲನ್ನು ಎಲ್ಲರೂ ಸಹಾ ಸೇವನೆ ಮಾಡುತ್ತಾರೆ ಹಾಲನ್ನು ಸೇವನೆ ಮಾಡಲೇ ಬೇಕಾದ ಒಂದು ಮುಖ್ಯ ವಸ್ತು ಆಹಾರ ವಸ್ತು ಎಂದು ಹೇಳಬಹುದು.ಆಹಾರವನ್ನು ದಿನಾಲೂ ಸೇವನೆ ಮಾಡುವುದರಿಂದ ಅವರ ಮೂಳೆಗಳು ಬಹಳಷ್ಟು ಗಟ್ಟಿ ಮುಟ್ಟಾಗುತ್ತದೆ. ನಿಮ್ಮ ಮೂಳೆಗಳು ಗಟ್ಟಿ ಮುಟ್ಟು ಆಗುವುದರಿಂದ ನಿಮಗೆ ಯಾವುದೇ ರೀತಿಯ ಕೈ ಕಾಲು ನೋವು ಮೂಳೆ ನೋವು ಮೂಳೆಗಳ ಸವೆತ ಬರುವುದಿಲ್ಲ ಹಾಗೆ ಹಾಲನ್ನು ಕುಡಿಯಲು ಒಂದು ಚಿಟಿಕೆ ಅರಿಶಿಣ ಪುಡಿ ಹಾಕಿ ಕುಡಿಯುವುದರಿಂದ ಇನ್ನೂ ಒಳ್ಳೆಯದಾಗುತ್ತದೆ.

ಕೊನೆಯದಾಗಿ ಖರ್ಜೂರ ಮತ್ತು ಬೆಲ್ಲ. ಖರ್ಜೂರ ಮತ್ತು ಬೆಲ್ಲವನ್ನು ನೀವು ಸೇವನೆ ಮಾಡುವುದರಿಂದ ನಿಮ್ಮಲ್ಲಿ ಅತಿ ಹೆಚ್ಚು ಐರನ್ ಅಂಶ ಉತ್ಪತ್ತಿ ಆಗುತ್ತದೆ ನಿಮ್ಮ ದೇಹದಲ್ಲಿ ಹಾಗೆ ನಿಮ್ಮ ದೇಹಕ್ಕೆ ಬೇಕಾದ ನ್ಯುಟ್ರಿಶೀಯನ್ ಪ್ರೋಟಿನ್ ಇದರಲ್ಲಿ ಸಿಗುತ್ತದೆ ಬೆಲ್ಲ ತಿನ್ನುವುದರಿಂದ ನಿಮ್ಮ ಮೂಳೆಗಳು ಬಹಳ ಗಟ್ಟಿ ಆಗುತ್ತದೆ ಖರ್ಜೂರ ಸಹಾ ನಿಮಗೆ ದೇಹಕ್ಕೆ ಬೇಕಾದ ಹಲವಾರು ಪ್ರೋಟಿನ್ ಗಳನ್ನ ನಿಮ್ಮ ದೇಹಕ್ಕೆ ನೀಡುತ್ತದೆ ಹಾಗೆಯೇ ನಿಮ್ಮ ಮೂಳೆಗಳಿಗೆ ಬೇಕಾದ ಲ್ಯುಬ್ರಿಕೆಂಟ್ ಸಹಾ ಇದು ಉತ್ಪಾದಿಸುತ್ತದೆ. ಇದು ಹೆಚ್ಚಾದಂತೆ ನಿಮ್ಮ ಮೂಳೆಗಳ ಸವೆತ ಕಡಿಮೆ ಆಗಿ ನಿಮ್ಮ ಮೂಳೆಗಳಲ್ಲಿ ಆಗುವ ಶಬ್ಧ ಕಡಿಮೆ ಆಗುತ್ತದೆ ಆದ್ದರಿಂದ ಈ ಮೂರು ವಸ್ತುಗಳನ್ನು ನಿಮ್ಮ ದಿನ ನಿತ್ಯ ಆಹಾರದಲ್ಲಿ ಸೇವನೆ ಮಾಡಿ.

Comments are closed.