ರಾಷ್ಟ್ರೀಯ

ಹೊಸ ವರ್ಷದ ಆರಂಭದಲ್ಲೇ ಗ್ರಾಹಕರಿಗೆ ಕಹಿ ಸುದ್ದಿ; ಸಬ್ಸಿಡಿ ರಹಿತ ಎಲ್​ಪಿಜಿ ಗ್ಯಾಸ್​​ ದರದಲ್ಲಿ ಏರಿಕೆ

Pinterest LinkedIn Tumblr

ನವದೆಹಲಿ: ಹೊಸ ವರ್ಷದ ಆರಂಭದಲ್ಲೇ ಸರ್ಕಾರ ಗ್ರಾಹಕರಿಗೆ ಕಹಿ ಸುದ್ದಿ ನೀಡಿದೆ. ಸಬ್ಸಿಡಿ ರಹಿತ ಎಲ್​ಪಿಜಿ ಗ್ಯಾಸ್​​ ದರದಲ್ಲಿ ಏರಿಕೆ ಮಾಡಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಇಂದಿನಿಂದಲೇ (ಜನವರಿ 1, 2020) ಪರಿಷ್ಕೃತ ದರ ಜಾರಿಯಾಗಲಿದೆ.

ನವದೆಹಲಿಯಲ್ಲಿ ಎಲ್​ಪಿಜಿ ಸಿಲಿಂಡರ್​ ಬೆಲೆ 19ರೂ ಏರಿಕೆಯಾಗಿದ್ದರೆ, ಮುಂಬೈನಲ್ಲಿ 19.5 ರೂ. ಹೆಚ್ಚಿಸಲಾಗಿದೆ ಎಂದು ಇಂಡಿಯನ್​ ಆಯಿಲ್​ ಕಾರ್ಪೊರೇಷನ್​ ತಿಳಿಸಿದೆ. ಸದ್ಯ ದೆಹಲಿಯಲ್ಲಿ ಸಬ್ಸಿಡಿ ರಹಿತ ಒಂದು ಎಲ್​ಪಿಜಿ ಸಿಲಿಂಡರ್​ ಬೆಲೆ 714 ರೂ.ಗಳಿದ್ದರೆ, ಮುಂಬೈನಲ್ಲಿ 684 ರೂ.ಇದೆ. ಡಿಸೆಂಬರ್​ ತಿಂಗಳಿನಲ್ಲಿಎಲ್​​ಪಿಜಿ ಸಿಲಿಂಡರ್​ ಬೆಲೆ ದೆಹಲಿಯಲ್ಲಿ 695 ರೂ ಇತ್ತು. ಮುಂಬೈನಲ್ಲಿ 665 ರೂ. ಇತ್ತು.

ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಕೂಡ ಸಬ್ಸಿಡಿ ರಹಿತ ಎಲ್​ಪಿಜಿ ಗ್ಯಾಸ್​​​​​​ ಬೆಲೆಯಲ್ಲಿ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಗ್ಯಾಸ್​​​​​ ಬೆಲೆ 21.5 ರೂ. ಏರಿಕೆಯಾದರೆ, ಚೆನ್ನೈನಲ್ಲಿ 20 ರೂ. ಹೆಚ್ಚಿಸಲಾಗಿದೆ. ಕೋಲ್ಕತ್ತಾದಲ್ಲಿ ಪ್ರತಿ ಎಲ್​ಪಿಜಿ ಗ್ಯಾಸ್​ ಬೆಲೆ 747 ರೂ ಇದ್ದರೆ, ಚೆನ್ನೈನಲ್ಲಿ 734 ರೂ.ಇದೆ.

ಡಿಸೆಂಬರ್​ 1ರಿಂದಲೇ 19 ಕೆ.ಜಿ ಸಿಲಿಂಡರ್​​​ಗಳ ಬೆಲೆಯನ್ನು ಪರಿಷ್ಕೃತಗೊಳಿಸಲಾಗಿತ್ತು. ದೆಹಲಿಯಲ್ಲಿ ಒಂದು ಯುನಿಟ್​​ಗೆ 1241 ರೂ.ಗಳಿದ್ದರೆ, ಮುಂಬೈನಲ್ಲಿ 1190 ರೂ.ಇತ್ತು ಎಂದು ಇಂಡಿಯನ್​ ಆಯಿಲ್​​ ಕಾರ್ಪೊರೇಷನ್​ ತಿಳಿಸಿದೆ.

Comments are closed.