ರಾಷ್ಟ್ರೀಯ

ಈ ವರ್ಷವೇ ಚಂದ್ರಯಾನ-3 ಯೋಜನೆ ಉಡಾವಣೆ : ಇಸ್ರೋ ಅಧ್ಯಕ್ಷ ಕೆ.ಶಿವನ್​ ಘೋಷಣೆ

Pinterest LinkedIn Tumblr

ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಕೊನೆ ಕ್ಷಣದಲ್ಲಿ ವಿಫಲಗೊಂಡಿತ್ತು. ಮರಳಿ ಯತ್ನವ ಮಾಡು ಎಂಬಂತೆ ಇಸ್ರೋ ಮತ್ತೆ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಇಂದು ಇಸ್ರೋ ಅಧ್ಯಕ್ಷ ಕೆ.ಶಿವನ್​ ಬೆಂಗಳೂರಿನಲ್ಲಿ ​ ಸುದ್ದಿಗೋಷ್ಠಿ ನಡೆಸಿ ಚಂದ್ರಯಾನ-3 ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ವರ್ಷವೇ ಚಂದ್ರಯಾನ-3 ಯೋಜನೆ ಉಡಾವಣೆಗೊಳ್ಳಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್​ ಘೋಷಣೆ ಮಾಡಿದ್ದಾರೆ. ಚಂದ್ರಯಾನ- 3 ಚಂದ್ರಯಾನ- 2ರಂತೆಯೇ ಇದೆ. ಚಂದ್ರಯಾನ- 2ರಲ್ಲಿನ ಲ್ಯಾಂಡರ್​ ಹಾಗೂ ರೋವರ್​ನ್ನು ಚಂದ್ರಯಾನ-3 ರಲ್ಲಿಯೂ ಬಳಕೆ ಮಾಡುತ್ತೇವೆ. ಈ ವರ್ಷ ಚಂದ್ರಯಾನ-3, ಎಸ್​ಎಸ್​​ಎಲ್​ವಿ ಉಡಾವಣೆ ಮಾಡಲಾಗುತ್ತದೆ ಎಂದರು.

ನಾವು ಚಂದ್ರಯಾನ 2 ಯೋಜನೆಯನ್ನು ಚೆನ್ನಾಗಿ ಸಂಪೂರ್ಣಗೊಳಿಸಿದ್ದೆವು. ಆದರೆ ಲ್ಯಾಂಡಿಂಗ್ ವೇಳೆ ಸಮಸ್ಯೆ ಕಂಡು ಬಂದಿತ್ತು. ನ್ಯಾವಿಗೇಷನ್ ಕಂಟ್ರೋಲ್ ಸಿಸ್ಟಂನಲ್ಲಿ ದೋಷ ಕಾಣಿಸಿತ್ತು. ಸಾಫ್ಟ್ ಲ್ಯಾಂಡಿಂಗ್ ಮಾಡಲು ನಮ್ಮಿಂದ ಸಾಧ್ಯವಾಗಲಿಲ್ಲ. ನಾವು ಸದ್ಯದಲ್ಲೇ ಇಂಟರ್‌ನೆಟ್ ಮೊಬೈಲ್ ಜಿಪಿಎಸ್ ಮಾಡುತ್ತೇವೆ. ಈ ರೋವರ್ ಹಾಗೂ ಲ್ಯಾಂಡರ್ ಮೂಲಕ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ, ಶಿವನ್​ 2020ರ ಯೋಜನೆಗಳ ಬಗ್ಗೆ ವಿವರಣೆ ನೀಡಿದರು. 2020ರ ನಮ್ಮ ಟಾರ್ಗೆಟ್‌ಗಳನ್ನು ತಿಳಿಸಿಕೊಡುತ್ತಿದ್ದೇವೆ. ಗಗನಯಾನ 2020ರ ಎಲ್ಲಾ ಸಿದ್ಧತೆ ನಡೆದಿದೆ. 6 ಸಂಶೋಧನಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಜನವರಿ 26ರಂದು‌ ಗಗನಯಾನ ಮಿಷನ್ ಆರಂಭವಾಗಲಿದೆ. ಗಗನಯಾನ ಮಿಷನ್ ಇಸ್ರೋದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಪೂರಕ ತರಬೇತಿ ನೀಡಲಾಗಿದೆ. 4ನೇ ಗಗನಯಾತ್ರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

2ನೇ ಬಾಹ್ಯಾಕಾಶ ಪೋರ್ಟ್​ನ ಕಾರ್ಯವೂ ನಡೆಯುತ್ತಿದೆ. ತಮಿಳುನಾಡಿನ ತೂತುಕುಡಿಯಲ್ಲಿ ಇದರ ಕಾರ್ಯ ನಡೆಯುತ್ತಿದೆ. ನಾವು 2ನೇ ಏರ್‌ಕ್ರಾಫ್ಟ್ ಬಿಲ್ಡಿಂಗ್‌ ತಯಾರು ಮಾಡುತ್ತಿದ್ದೇವೆ. 29 ಸಾವಿರ ಸಾರ್ವಜನಿಕರು ಇದನ್ನು ಈಗಾಗಲೇ ವೀಕ್ಷಿಸಿದ್ದಾರೆ ಎಂದು ತಿಳಿಸಿದರು.

ಈ ವರ್ಷ 25 ಮಿಷನ್‌ಗಳ ಪೂರೈಸುವ ಗುರಿ ಹೊಂದಿದ್ದೇವೆ. ವರ್ಷದ ಕೊನೆಯಲ್ಲಿ ಮಾನವ ಸಹಿತ ಮಿಷನ್ ಉಡಾವಣೆ ಮಾಡುತ್ತೇವೆ. ತೂತುಕುಡಿಯಲ್ಲಿ ಇದರ ಕಾರ್ಯ ಆರಂಭವಾಗಿದೆ. ರಷ್ಯಾದಲ್ಲಿ ಮೆಡಿಕಲ್ ಟೆಸ್ಟ್ ಮಾಡಲಾಗುತ್ತದೆ. 4 ಯಾತ್ರಿಗಳಿಗೆ ಅಲ್ಲಿಯೇ ಎಲ್ಲಾ ಟೆಸ್ಟ್‌ ನಡೆಸುತ್ತೇವೆ. ಐಎಎಫ್​​​​ನಿಂದ 4 ಯಾತ್ರಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ನಾವು ಮುಖ್ಯವಾಗಿ ರಿಸರ್ಚ್‌ಗಳನ್ನು ಉನ್ನತ ಮಟ್ಟಕ್ಕೆ ಏರಿಸಬೇಕಿದೆ. 4 ನೇ ರೀಜಿನಲ್ ರಿಸರ್ಚ್ ಅಕಾಡೆಮಿಯನ್ನು ಮಾಡಲಾಗುವುದು. ಇದರಲ್ಲಿ ಮಕ್ಕಳಿಗೆ 2 ವಾರಗಳ ಕಾಲ ಸ್ಪೇಸ್ ರಿಸರ್ಚ್ ಬಗ್ಗೆ ತಿಳಿಸಲಾಗುತ್ತದೆ. ಪಿಎಸ್​ಎಲ್​ವಿ ಮಿಷನ್‌ನ್ನು ಲಾಂಚ್ ಮಾಡಲಾಗುತ್ತಿದ್ದು, ಇದರ ಕಾರ್ಯ ನಡೆಯುತ್ತಿದೆ. ಎರಡು ಪಿಎಸ್​ಎಲ್​ವಿಗಳನ್ನು ಉಡಾವಣೆ ಮಾಡುತ್ತೇವೆ ಎಂದರು.

ಗಗನಯಾನ, ಆದಿತ್ಯ ಮಿಷನ್, ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಗಗನಯಾನ ಒಂದು ಮುಖ್ಯವಾದ ಯೋಜನೆ. ಇಸ್ರೋ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದೆ. ಚಂದ್ರಯಾನ-3 ಕೆಲಸ ಈಗಾಗಲೇ ಆರಂಭವಾಗಿದೆ. ಗಗನಯಾನ ಮಿಷನ್​ ಕೂಡಾ ಈ ವರ್ಷವೇ ಉಡಾವಣೆಗೊಳ್ಳಲಿದೆ. ಆದರೆ ಲಾಂಚ್ ದಿನಾಂಕ ಇನ್ನೂ ನಿಗದಿ ಮಾಡಿಲ್ಲ ಎಂದು ಹೇಳಿದರು.

Comments are closed.