ಆರೋಗ್ಯ

ಈ ಗಿಡದ ಎಲೆಯ ಚೂರ್ಣಕ್ಕೆ ಬೆಲ್ಲ ಸೇರಿಸಿ ಅನ್ನದ ಗಂಜಿಯೊಂದಿಗೆ ಸೇವಿಸಿದರೆ ಲೈಂಗಿಕ ವ್ಯಾದಿಗಳು ಗುಣಮುಖ

Pinterest LinkedIn Tumblr

ಹಿಂದಿನ ಕಾಲದಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದಂತಹ ಮನೆಮದ್ದು ಇರುತ್ತಿದ್ದವು ಆಗಿನ ಜನರು ಸಹ ಅದನ್ನೇ ಬಳಸಿ ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳುತ್ತಿದ್ದರು ಆದರೆ ಈಗ ಕಾಲ ಬದಲಾಗಿದೆ ಬಿಡಿ ಹಾಗಾದರೆ ಆಗಿನ ಜನರು ಬಳಸುವ ಆ ಮನೆಮದ್ದು ಯಾವುದು ತಿಳಿಯೋಣ ಬನ್ನಿ. ಹಿಂದಿನ ಕಾಲದಲ್ಲಿ ಕೆಲವೊಂದು ಸಸ್ಯಗಳನ್ನು ಬೆಳೆಸುತ್ತಿದ್ದರು ಅದರಲ್ಲಿ ಈ ವಿಷಮಧಾರಿ ಗಿಡ ಕೂಡ ಒಂದು ಇದನ್ನು ವಿಶಂಧರಿಗಿಡ ಅಂತಲು ಕರೆಯುತ್ತಾರೆ. ಮೊದಲೆಲ್ಲ ಹೇರಳವಾಗಿ ಸಿಗುವ ಈ ಸಸ್ಯ ಈಗ ಕೇವಲ ಉದ್ಯಾನವನ ಕೆಲವು ಮನೆಮುಂದೆ ಅಲಂಕಾರಿಕ ಗಿಡವಾಗಿ ಸಿಗುತ್ತದೆ. ಕೆಲವರು ಈ ಸಸ್ಯದ ಕುಟುಂಬ ವೇರ್ಬನೆಸಿಯೇ ಎನ್ನುತ್ತಾರೆ ಹಾಗೆ ಇನ್ನು ಕೆಲವರು ಲ್ಯಾಮಿಯೆಸಿಯೇ ಎನ್ನುತ್ತಾರೆ.

ಇದರ ವೈಜ್ಞಾನಿಕ ಹೆಸರನ್ನು ಸಹ ಕೆಲವರು ಕ್ಲೇರೋಡೆಂಡ್ರಮ್ ಇಂಡ್ರಮ್ ಎಂದರೆ ಮತ್ತೆ ಕೆಲವರು ಓಲ್ಕ್ ಅಮೆರಿಯ ಇಂಡ್ರಮಿಸ್ ಎಂದಿದ್ದಾರೆ. ಸಂಸ್ಕ್ರುತದಲ್ಲಿ ಕುಂಡಲಿ ವನಜಯಿ ಎಂದು ಕರೆಯುವ ಈ ಸಸ್ಯವನ್ನು ಕನ್ನಡದಲ್ಲಿ ವಿಷಮಧಾರಿ ವಿಶಂಧರಿ ಹೊಳೆಮದರಂಗಿ ನಾಯಿತಕ್ಕಲಿ ಕುಂಡಲಿ ವಾಸನೇಗಿಡ ಮುಂತಾದ ಹೆಸರುಗಳಿದ್ದು ಆಂಗ್ಲಭಾಷೆಯಲ್ಲಿ ಇಂಡಿಯನ್ ಪ್ರೇವೇಟ್ ಮುಂತಾದ ಹೆಸರುಗಳಿವೆ. ಭಾರತ ಹಾಗೂ ಆಸ್ಟ್ರೇಲಿಯಾಗಳಲ್ಲಿ ಕಂಡುಬರುವ ಈ ಸಸ್ಯ ಕುರುಚಲು ಕಾಡು ಹಾಗೂ ಬಂಜರುಭೂಮಿಗಳಲ್ಲಿ ಕಂಡುಬರುತ್ತದೆ. ಸುಮಾರು 3 ರಿಂದ 6 ಅಡಿ ಎತ್ತರಕ್ಕೆ ಬೆಳೆಯಬಲ್ಲ ಹಲವಾರು ಕವಲುಗಳಾಗಿ ಬೆಳೆಯುವ ಪೋದೆ ಸಸ್ಯವಾಗಿದ್ದು ಸುಮಾರು 5 ಸೆಂಟಿಮೀಟರ್ ಉದ್ದ ಹಾಗೂ 3 ಸೆಂಟಿಮೀಟರ್ ಅಗಲವಾದ ಅಂಡಾಕಾರದ ಘಾಡ ಹಸಿರು ಬಣ್ಣದಿಂದ ಕುಡಿದ ಹಸಿರು ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡನೆಗೊಂಡಿರುತ್ತವೆ.

ಈ ಎಲೆಗಳು ಅತ್ಯಂತ ಕಹಿ ರುಚಿಯನ್ನು ಹೊಂದಿರುತ್ತವೆ. ಸುಮಾರು 4 ಸೆಂಟಿಮೀಟರ್ ಉದ್ದದ ನೀಳವಾದ 5 ದಳಗಳಿಂದ ಕುಡಿದ ಬಿಳಿಬಣ್ಣದ ಸುಂದರವಾದ ಹೂವುಗಳಿದ್ದು 4 ರಿಂದ 5 ಕೇಸರಗಳು ಹೂವಿನ ಹೊರಭಾಗದಲ್ಲಿ ಚಾಚಿಕೊಂಡಿರುತ್ತವೆ. ಆಂಟಿಬ್ಯಾಕ್ಟೀರಿಯಲ್ ಆಂಟಿವೈರಲ್ ಗುಣಗಳಿಂದ ಕೂಡಿರುವ ವಿಷಮಧಾರಿ ಕಾರ್ಬಾಕ್ಸಲೀಕ್ ಆಸಿಡ್ ಡಿಟರ್ ಪೆನ್ಸ್ ಪ್ಲೇವನೈಡ್ಸ್ ಹೈಡ್ರೋಕಾರ್ಬನ್ಸ್ ನಿಯೋಲಿಗನೇನ್ಸ್ ಪೆನಲ್ಸ್ ಪ್ರೊಟೀನ್ ಸ್ಟಿರಾಯ್ಡ್ಸ್ ವೇರಬೋಸೈಡ್ಸ್ ಟ್ರೈತರಪೇನ್ಸ್ ಮುಂತಾದ ರಾಸಾಯನಿಕ ಸಂಯುಕ್ತಗಳಿಂದ ಕೂಡಿದೆ.

ಸಾಂಪ್ರದಾಯಿಕ ಆಯುರ್ವೇದ ಹಾಗೂ ಸಿಧ್ದ ವೈದ್ಯ ಪದ್ಧತಿಗಳಲ್ಲಿ ಈ ಸಸ್ಯದ ಎಲೆ ಹಾಗೂ ಬೇರುಗಳನ್ನು ಔಷದೊದ್ದೇಶಕ್ಕೆ ಬಳಸಲಾಗುತ್ತದೆ. ಜ್ವರ ಚರ್ಮರೋಗ ಗುಪ್ತರೋಗಗಳು ಅಸ್ತಮಾ ಮುಂತಾದ ಕಾಯಿಲೆಗಳಲ್ಲಿ ಬಳಸಲ್ಪಡುವ ವಿಷಮಧಾರಿಯ ಸಾಮಾನ್ಯ ಉಪಯೋಗವೆಂದರೆ ಚೇಳು ಕುಟುಕಿದಾಗ ಈ ಸಸ್ಯದ ಬೇರನ್ನು ಅರೆದು ಚೇಳು ಕಚ್ಚಿದ ಜಾಗದಲ್ಲಿ ಹಚ್ಚುವುದರಿಂದ ವಿಷ ಕಡಿಮೆಯಾಗಿ ನೋವು ಶಮನವಾಗುತ್ತದೆ. ಮೈಕಡಿತ ಮುಂತಾದ ಚರ್ಮದ ಸಮಸ್ಯೆಗಳಿದ್ದಲ್ಲಿ ಈ ಗಿಡದ ಎಲೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಸ್ನಾನ ಮಾಡುವುದರಿಂದ ಉತ್ತಮವಾದ ಪರಿಣಾಮ ಬೀರುತ್ತದೆ.

ಈ ಗಿಡದ ಎಲೆಯ ಚೂರ್ಣಕ್ಕೆ ಬೆಲ್ಲ ಸೇರಿಸಿ ಅನ್ನದ ಗಂಜಿಯೊಂದಿಗೆ ಸೇವಿಸಿದರೆ ಲೈಂಗಿಕ ವ್ಯಾದಿಗಳು ಗುಣಮುಖವಾಗುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಬಿಟ್ಟು ಬಿಟ್ಟು ಬರುವ ಜ್ವರಕ್ಕೆ ಅಲ್ಪ ಪ್ರಮಾಣದಲ್ಲಿ ಈಗಿಡದ ಕಷಾಯ ನೀಡಲಾಗುತ್ತದೆ. ಪ್ರತಿನಿತ್ಯ ಇದರ ಎಲೆಗಳನ್ನು 3 ರಿಂದ 4 ತಿನ್ನುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಈ ಗಿಡದ ಗಂಭೀರ ಅಡ್ಡಪರಿಣಾಮಗಳು ಇಲ್ಲದಿದ್ದರೂ ಕೂಡ ಅಹಿತಕರವಾದ ವಾಸನೆ ಜೊತೆಗೆ ಅತ್ಯಂತ ಕಹಿಯಾದ ರುಚಿಯಿಂದ ಕುಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ವಾಕರಿಕೆ ಹಾಗೂ ವಾಂತಿಯಾಗುವ ಸಾಧ್ಯತೆ ಇದೆ ಮತ್ತು ಕರುಳು ಅಥವಾ ಜಠರದ ತೊಂದರೆಯಿಂದ ನರಳುವವರು ಈ ಸಸ್ಯವನ್ನು ಬಳಸದಿರಲು ಸೂಚಿಸಲಾಗಿದೆ. ಮಕ್ಕಳು ಹಾಗೂ ಗರ್ಭಿಣಿಯರು ಬಳಸುವಂತಿಲ್ಲ. ಈ ಮಾಹಿತಿ ನಿಮಗೆ ಇಷ್ಟ ಒಂದು ಲೈಕ್ ಕೊಡಿ ಜೊತೆಗೆ ಇಂತಹದ್ದೆ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

Comments are closed.