ಆರೋಗ್ಯ

ಶಿಶುಗಳಿಗೆ ಅಥವಾ ಸಣ್ಣ ಮಕ್ಕಳಿಗೆ ಆಂಟಿಬಯೋಟಿಕ್ ಕೊಡುವ ಮುನ್ನ ಎಚ್ಚರವಿರಲಿ

Pinterest LinkedIn Tumblr

ಮಕ್ಕಳಿಗೆ ಮನೆಯಲ್ಲಿರುವ ಮಾತ್ರೆಗಳನ್ನು ನೀಡುವಾಗ ಎಚ್ಚರವಹಿಸಿ. ಸಂಜೆಯಾದರೆ ವಿಪರೀತ ಚಳಿ ಮಧ್ಯಾಹ್ನದ ಸಮಯ ಸುಡು ಬಿಸಿಲು ಮತ್ತೆ ಅದರಲ್ಲೇ ಅಲ್ಲಲ್ಲಿ ಬಿಡದ ಮಳೆ ಇಂದಿನ ಹವಾಮಾನವಿರುವ ದಿನಗಳಲ್ಲಿ ಮಕ್ಕಳಿಗೆ ಅಷ್ಟೇ ಅಲ್ಲ ದೊಡ್ಡವರಿಗೂ ಸಹ ಆರೋಗ್ಯದಲ್ಲಿ ಏರುಪೇರಾಗುತ್ತದೆ ಜ್ವರ ಶೀತದಂತಹ ಸಮಸ್ಯೆಗಳು ಎದುರಾಗುತ್ತವೆ. ಅಂತಹ ಸಮಯದಲ್ಲಿ ನಾವು ತಪ್ಪದೆ ವೈದ್ಯರನ್ನು ಕಾಣಬೇಕು ಬದಲಾಗಿ ಮನೆಯಲ್ಲಿರುವ ಹಿಂದಿನ ಔಷಧಿ ಕೊಡಬಾರದು ಅದು ಹೇಗೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಮಕ್ಕಳಿಗೆ ಆಂಟಿಬಯೋಟಿಕ್ ಕೊಡುವ ಮುನ್ನ ಎಚ್ಚರವಿರಲಿ. ಹವಾಮಾನ ಬದಲಾವಣೆ ಅಥವಾ ಬೇರೆ ಯಾವುದೋ ಕಾರಣಕ್ಕೆ ಮಕ್ಕಳಿಗೆ ಬ್ಯಾಕ್ಟೀರಿಯಾ ಇಂಫೆಕ್ಷನ್ ಆಗುತ್ತದೆ ಹೀಗೆ ಆದ ಸಂದರ್ಭದಲ್ಲಿ ಮಕ್ಕಳಿಗೆ ಆಂಟಿಬಯೋಟಿಕ್ ಔಷಧಿ ನೀಡಲಾಗುತ್ತದೆ ಆದರೆ ಕಾರಣ ತಿಳಿಯದೆ ಆಂಟಿಬಯೋಟಿಕ್ ಮಾತ್ರೆಗಳನ್ನು ನೀಡುವುದು ಒಳ್ಳೆಯದಲ್ಲ ಇದು ಮಕ್ಕಳ ಮೇಲೆ ಅಡ್ಡ ಪರಿಣಾಮ ಬಿರುವಂತಹ ಸಾಧ್ಯತೆ ಕೂಡ ಹೆಚ್ಚಾಗಿ ಇರುತ್ತದೆ.

ಸಾಮಾನ್ಯವಾಗಿ ಮಕ್ಕಳ ಕಿವಿಯಲ್ಲಿ ಇಂಫೆಕ್ಷನ್ ಆಗುತ್ತದೆ ಆಗ ವೈದ್ಯರ ಬಳಿ ಹೋಗುತ್ತೇವೆ ಆಗ ವೈದ್ಯರು ಆಂಟಿಬಯೋಟಿಕ್ ಮಾತ್ರೆಗಳನ್ನು ನೀಡುತ್ತಾರೆ ಮತ್ತೊಮ್ಮೆ ಕಿವಿನೋವು ಕಾಣಿಸಿಕೊಂಡಾಗ ವೈದ್ಯರ ಬಳಿ ಹೋಗದೆ ಪಾಲಕರು ಹಿಂದೆ ವೈದ್ಯರು ನೀಡಿದ್ದ ಆಂಟಿಬಯೋಟಿಕ್ ಮಾತ್ರೆಯನ್ನು ಮಕ್ಕಳಿಗೆ ತಿನ್ನಿಸುತ್ತಾರೆ ಇದು ಮಕ್ಕಳ ದೇಹದ ಮೇಲೆ ಹಾನಿಯುಂಟು ಮಾಡುತ್ತದೆ ಮಕ್ಕಳಿಗೆ ಜ್ವರ ಬಂದಾಗ ತಕ್ಷಣ ಆಂಟಿಬಯೋಟಿಕ್ ಮಾತ್ರೆಗಳನ್ನು ಪಾಲಕರು ಮಕ್ಕಳಿಗೆ ಕೊಡುತ್ತಾರೆ ಮಕ್ಕಳಿಗೆ ಬಂದಿರುವುದು ಯಾವ ಜ್ವರ ಎಂದು ತಿಳಿಯದೆ ಮಾತ್ರೆ ನೀಡಿದರೆ ಅದರಿಂದ ಮಕ್ಕಳಿಗೆ ಅಪಾಯ ತಪ್ಪಿದ್ದಲ್ಲ

ವೈರಲ್ ಜ್ವರ ಆಂಟಿಬಯೋಟಿಕ್ ಮಾತ್ರೆಯಿಂದ ಕಡಿಮೆಯಾಗುವುದಿಲ್ಲ ಇನ್ನು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ವೈರಲ್ ಇಂಫೆಕ್ಷನ್ ನಿಂದಾಗಿ ಗಂಟಲು ನೋವು ಬರುತ್ತದೆ ಇದಕ್ಕೆ ಮನೆಯಲ್ಲಿರುವ ಮಾತ್ರೆಯನ್ನು ಯಾವುದೇ ಕಾರಣಕ್ಕೂ ಕೊಡಬೇಡಿ ವೈದ್ಯರನ್ನು ಭೇಟಿಮಾಡಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ವಾತಾವರಣ ಬದಲಾದಾಗ ನೆಗಡಿ ಮತ್ತು ಜ್ವರ ಮಾಮೂಲಿ ಮಕ್ಕಳಿಗೆ ಸ್ವಲ್ಪ ಜ್ವರ ಕಾಣಿಸಿಕೊಂಡರು ಮಾತ್ರೆಗಳನ್ನು ನಿಡುವ ಪಾಲಕರು ಸಹ ಇದ್ದಾರೆ. ಹೀಗೆ ಇಷ್ಟಿಸ್ಟಕ್ಕೆ ಮಾತ್ರೆ ಕೊಡುವ ಬದಲು ದೇಶೀಯ ಔಷಧಿಗಳನ್ನು ಮಕ್ಕಳಿಗೆ ನೀಡುವುದು ಬಹಳ ಉತ್ತಮ. ಏಕೆಂದರೆ ಮಕ್ಕಳು ಸೂಕ್ಷ್ಮ ದೇಹವನ್ನು ಹೊಂದಿರುತ್ತಾರೆ ಯಾವುದಕ್ಕೂ ಸಹ ಬೇಗನೆ ಹೊಂದಾಣಿಕೆ ಆಗುವುದಿಲ್ಲ

ಅವರಲ್ಲಿ ಸ್ವಲ್ಪ ಜ್ವರ ಬಂದರು ಕೂಡ ಏನೋ ದೊಡ್ಡದು ಆಗಿದೆ ಅನ್ನುವ ತರ ಮಕ್ಕಳು ಸುಸ್ತಾಗಿ ಹೋಗುತ್ತಾರೆ ಹೀಗೆ ಇರುವ ಸಮಯದಲ್ಲಿ ಪಾಲಕರಾದ ನಾವುಗಳು ಅವರಿಗೆ ಜ್ವರ ಬಂದ ಸಂದರ್ಭದಲ್ಲಿ ಅಥವಾ ಯಾವುದೇ ದೇಹಕ್ಕೆ ಸಂಬಂದಿಸಿದ ಏನೇ ತೊಂದರೆ ಆದರೂ ಸಹ ವೈದ್ಯರ ಸಲಹೆಯನ್ನು ಪಡೆಯದೆ ನಾವೇ ಮನೆಯಲ್ಲಿ ಇರುವ ಹಿಂದಿನ ಮಾತ್ರೆಗಳನ್ನು ನೀಡಬಾರದು ಅದರಿಂದ ಮಕ್ಕಳಿಗೆ ನಾವೇ ಅಪಾಯವನ್ನು ತಂದೊಡ್ಡಿದ ಹಾಗೆ ಆಗುತ್ತದೆ.

Comments are closed.